ಮಂಡ್ಯ: ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟು ಮೇಲೆ ಬೆಂಬಲಿಗರೊಂದಿಗೆ ಸಂಸದೆ ಸುಮಲತಾ ಫೋಟೋಶೂಟ್ ಮಾಡಿಸಿದ್ದಾರೆ. ಜನಸಾಮಾನ್ಯರು, ಜನಪ್ರತಿನಿಧಿಗಳು ಎಲ್ಲರಿಗೂ ಕಾನೂನು ಒಂದೇ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಂಸದರು ಕೆಆರ್‌ಎಸ್ ಡ್ಯಾಂ ಮೇಲೆ ಫೋಟೋ ಶೂಟ್ ಮಾಡಿಸಿರುವುದನ್ನು ನೋಡಿದ್ದೇನೆ. ಭಾರತ ದೇಶದ ಬಾವುಟ ಹಿಡಿದು ಬಹಳ ಅಭಿಮಾನ ಪ್ರೀತಿ ತೋರಿಸಿದ್ದಾರೆ. ಕೆಆರ್‌ಎಸ್ ಡ್ಯಾಮ್ ಮೇಲೆ ಬೇರೆ ಯಾರಾದ್ರೂ ಫೋಟೋ ಶೂಟ್ ಮಾಡಿಸಿದ್ದರೆ ಇಷ್ಟೊತ್ತಿಗೆ ಅವರ ವಿರುದ್ಧ ಎಫ್ಐಆರ್ ದಾಖಲಾಗುತ್ತಿತ್ತು ಎಂದರು.
ಇದನ್ನೂ ಓದಿ : ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ 142 ಕೋಟಿ ರೂ ಅನುದಾನ: ಸಚಿವೆ ಶಶಿಕಲಾ ಜೊಲ್ಲೆ