ETV Bharat / state

ಒಂದು ತಿಂಗಳೊಳಗಾಗಿ ರೈತರಿಗೆ ಬೆಳೆ ಹಾನಿ ಪರಿಹಾರ ಪಾವತಿ : ಸಚಿವ ಆರ್​ ಅಶೋಕ್ - ಮನೆ ಹಾನಿ

ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಕೆ ಹಾಗೂ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರೊಂದಿಗೆ ಆರ್​ ಅಶೋಕ್​ ಕೆ.ಆರ್.ಪೇಟೆ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಒಂದು ತಿಂಗಳ ಒಳಗಾಗಿ ರೈತರ ಬೆಳೆ ಹಾನಿ ಪರಿಹಾರ ಪಾವತಿ : ಆರ್ ಅಶೋಕ್

author img

By

Published : Aug 4, 2022, 7:35 PM IST

ಮಂಡ್ಯ: ಸರ್ಕಾರ ಕಂದಾಯ ಇಲಾಖೆಯಲ್ಲಿ ಹೊಸ ಸಾಫ್ಟ್ ವೇರ್ ಹಾಗೂ ಹೊಸ ನೀತಿಯನ್ನು ಜಾರಿಗೆ ತಂದು, ಬೆಳೆಹಾನಿಯಾದಂತಹ ಪ್ರದೇಶಗಳ ಸಮೀಕ್ಷೆ ನಡೆಸಿ ಒಂದು ತಿಂಗಳಲ್ಲಿ ಬೆಳೆ ಹಾನಿ ಪರಿಹಾರವನ್ನು ಒದಗಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಕೆ ಹಾಗೂ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣ ಗೌಡ ಅವರೊಂದಿಗೆ ಕೆ.ಆರ್.ಪೇಟೆ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಆರ್ ಅಶೋಖ್​ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬೆಳೆ ಹಾನಿ ಪರಿಹಾರವನ್ನು ಒಂದು ತಿಂಗಳೊಳಗೆ ನೀಡುತ್ತಿದ್ದು, 2 ಸಾವಿರ ಕೋಟಿಗಿಂತ ಹೆಚ್ಚಿನ ಹಣವನ್ನು ರೈತರ ಖಾತೆಗೆ ಹಾಕುವಂತಹ ಕೆಲಸವನ್ನು ಮಾಡಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಜೂನ್​​​ನಿಂದ 4 ನೇ ಆಗಸ್ಟ್ ವರೆಗೆ ಒಟ್ಟು ಪ್ರವಾಹ ಪೀಡಿತ ಜಿಲ್ಲೆ 14, ಪ್ರವಾಹ ಪೀಡಿತ ಗ್ರಾಮಗಳು 115, ಪ್ರವಾಹ ಪೀಡಿತರ ಸಂಖ್ಯೆ 14,902, ಪ್ರವಾಹದಿಂದ ಸಾವನ್ನಪ್ಪಿದವರು 64 ಜನ. ಇದರಲ್ಲಿ ಸಿಡಿಲು ಬಡಿತದಿಂದ 16, ಮರ ಬಿದ್ದು 4 ಜನ, ಮನೆ ಕುಸಿತದಿಂದ 15 ಜನ, ಪ್ರವಾಹದ ಸೆಳತಕ್ಕೆ ಸಿಲುಕಿ 19 ಜನ, ಭೂ ಕುಸಿತದಿಂದ 9, ವಿದ್ಯುತ್ ಅಪಘಾತದಿಂದ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವಿವರಿಸಿದರು.

ಒಂದು ತಿಂಗಳ ಒಳಗಾಗಿ ರೈತರ ಬೆಳೆ ಹಾನಿ ಪರಿಹಾರ ಪಾವತಿ : ಕಂದಾಯ ಸಚಿವ ಆರ್​ ಅಶೋಕ್

ಇಡೀ ರಾಜ್ಯದಲ್ಲಿ ಸಂಪೂರ್ಣ ಮನೆ ಹಾನಿಯಾಗಿರುವುದು 608, ತೀವ್ರ ಮನೆ ಹಾನಿಯಾಗಿರುವುದು 2,445, ಭಾಗಶಃ ಮನೆ ಹಾನಿ 15,074. ಒಟ್ಟು 8,057 ಜನರನ್ನು ಸ್ಥಾಳಂತರ ಮಾಡಲಾಗಿದೆ. ಅವಶ್ಯಕವಿರುವ ಸ್ಥಳಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕಾಳಜಿ ಕೇಂದ್ರದಲ್ಲಿ ಮೊಟ್ಟೆ: ಕಾಳಜಿ ಕೇಂದ್ರದಲ್ಲಿ 6,933 ಜನರು ಆಶ್ರಯ ಪಡೆದಿದ್ದು, ಅವರಿಗೆ ಗುಣಮಟ್ಟದ ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ ನೀಡಲಾಗುತ್ತಿದೆ. ಮೊಟ್ಟೆ ಸಹ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಕೆ ಆರ್ ಪೇಟೆ ತಾಲೂಕಿನ ಆಘಾಲಯದಲ್ಲಿ ಕೆರೆ ಕೋಡಿ ಒಡೆದಿರುವುದನ್ನು ಇದೇ ವೇಳೆ ಪರಿಶೀಲಿಸಿದರು. ಇದೇ ವೇಳೆ ಆಘಾಲಯದಲ್ಲಿ ಭಾರಿ ಮಳೆಯಿಂದ ಮನೆ ಹಾನಿಯಾದವರಿಗೆ ಸ್ಥಳದಲ್ಲೇ ತಲಾ ಒಂದು ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು. ಅಲ್ಲದೇ ಬಾಕಿ ಇರುವ ಪರಿಹಾರವನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಭರವಸೆ ನೀಡಿದ್ರು.

ಇದನ್ನೂ ಓದಿ: ರಾಜ್ಯದಲ್ಲಿ ಮೂರು ಮಳೆ ಅಬ್ಬರ: ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.