ಮಂಡ್ಯ: ಮಾಧ್ಯಮಗಳಿಗೆ ಕಾಂಟ್ರವರ್ಸಿ ಹೇಳಿಕೆ ಹುಟ್ಹಾಕಬೇಡಿ ಎಂದು ಕೆಆರ್‌ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ದುಂಬಾಲು ಬಿದ್ದ ಘಟನೆ ನಡೆದಿದೆ.
ತಮ್ಮ ಮನೆಯಲ್ಲಿ ಮಾಧ್ಯಮಗಳ ಪ್ರತಿನಿಧಿಗಳು ಎಂದಿನಂತೆ ಪ್ರತಿಕ್ರಿಯೆ ಪಡೆಯಲು ಹೋದಾಗ ಹೀಗೆ ದುಂಬಾಲು ಬಿದ್ದರು. ಚಿಕ್ಕ ನಾಯಕನಹಳ್ಳಿ ಪ್ರಕರಣ ಕುರಿತು ಕೇಳಲಾದ ಪ್ರಶ್ನೆಗೆ ಈ ರೀತಿಯಾಗಿ ಉತ್ತರ ನೀಡಿದ ಕೆ ಆರ್ ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ, ಆ ಪ್ರಕರಣ ಕ್ಷೇತ್ರದ ಮತದಾರರ ಮೇಲೆ ಪ್ರಭಾವ ಬೀರೋದಿಲ್ಲ. ದಯವಿಟ್ಟು ಕಾಂಟ್ರೋವರ್ಸಿ ಹೇಳಿಕೆ ಪಡೆಯಲು ಮುಂದಾಗಬೇಡಿ ಎಂದರು. ಇನ್ನು, ನಮ್ಮಲ್ಲಿ ಎಲ್ಲಾ ಸಮಾಜದವರೂ ಸಹಬಾಳ್ವೆ ನಡೆಸುತ್ತಿದ್ದಾರೆ ಎಂದು ಮನವಿ ಮಾಡಿದರು.