ETV Bharat / state

58 ವರ್ಷದ ಸಮಸ್ಯೆ 1 ಗಂಟೆಯಲ್ಲಿ ಪರಿಹಾರವಾಯ್ತಂತೆ.. ಇದು ಬಸಪ್ಪನ ಪವಾಡವಂತೆ.. - ಮೂರು ದೇವಾಲಯಗಳಿಗೆ ಪೂಜಾರಿಗಳನ್ನ ನೇಮಕ ಮಾಡಿದ ಪವಾಡ ಬಸಪ್ಪ

ಹಬ್ಬ ಆಚರಣೆ ಮಾಡಬೇಕೆಂದು ದೈವಸ್ವರೂಪಿ ಮಂಟೇಸ್ವಾಮಿ ಬಸಪ್ಪನ ಮೊರೆ ಹೋಗಿದ್ದರು ಗ್ರಾಮಸ್ಥರು. ಗ್ರಾಮಸ್ಥರ ಮನವಿ ಮೇರೆ ಊರಿಗೆ ಬಸಪ್ಪ ಬಂದಿದ್ದ. ಜನರ ಗುಂಪಿನಲ್ಲಿ ಕುಳಿತಿ ಮೂವರನ್ನು ಗುರುತಿಸಿರುವ ಬಸಪ್ಪ, ದೇಗುಲದ ಮುಂಭಾಗದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆ ಮಾಡಿದ್ದಾನೆ..

ಬಸಪ್ಪನ ಪವಾಡ
ಬಸಪ್ಪನ ಪವಾಡ
author img

By

Published : Feb 20, 2022, 3:15 PM IST

Updated : Feb 20, 2022, 4:48 PM IST

ಮಂಡ್ಯ : ಜಿಲ್ಲೆಯಲ್ಲಿ ಬಹಳ ವರ್ಷಗಳಿಂದ ಪವಾಡ ಮಾಡುತ್ತಾ ಬಂದಿರುವ ಬಸಪ್ಪ ಮತ್ತೊಂದು ಪವಾಡ ಮಾಡಿದ್ದಾನೆ. 58 ವರ್ಷದ ಸಮಸ್ಯೆಯನ್ನ ಒಂದೇ ಗಂಟೆಯಲ್ಲಿ ಇತ್ಯರ್ಥ ಮಾಡಿದ್ದಾನೆ. ಬಸಪ್ಪನ ಪವಾಡಕ್ಕೆ ಮಂಡ್ಯದ ದೊಡ್ಡಬಾಣಸವಾಡಿ ಗ್ರಾಮಸ್ಥರು ನಿಬ್ಬೆರಗಾಗಿದ್ದಾರೆ.

ಗ್ರಾಮದ ಮೂರು ದೇವಾಲಯಗಳಿಗೆ ಮೂವರು ಪೂಜಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಇದ್ದ ಸಮಸ್ಯೆಯನ್ನು ಹೊನ್ನನಾಯಕನಹಳ್ಳಿಯ ಧರೆಗೆ ದೊಡ್ಡವರು ಮಂಟೇಸ್ವಾಮಿ ಬಸವಣ್ಣ ಬಗೆಹರಿಸಿದ್ದಾನೆ. ಚೌಡೇಶ್ವರಿ, ಪಟ್ಟಲದಮ್ಮ, ಮಾರ್ಗೋನಹಳ್ಳಿ ಅಮ್ಮ ದೇಗುಲಕ್ಕೆ ಪೂಜಾರಿ ಆಯ್ಕೆಗೆ ಸಂಬಂಧಿಸಿದಂತೆ ಸಮಸ್ಯೆ ಇದ್ದು, ಇದೀಗ ಅದು ಬಗೆಹರಿದಿದೆ.

58 ವರ್ಷದಿಂದ ನಿಂತಿದ್ದ ಹಬ್ಬ ಆಚರಣೆಗೆ ಮುನ್ನುಡಿ ಬರೆದಿದ್ದಾನೆ ಬಸಪ್ಪ. ಪೂಜಾರಿ ಆಯ್ಕೆಯಾಗದೆ ನಿಂತಿದ್ದ ಪಟ್ಟಲದಮ್ಮನ ಕೊಂಡ, ಬಡ್ಡಿ ಹಬ್ಬಕ್ಕೆ ಇದೀಗ ಪುನಾಃ ಚಾಲನೆ ಸಿಕ್ಕಿದೆ. ಆಗಿದ್ದೇನೆಂದರೆ, ವಯೋಸಹಜವಾಗಿ ಈ ದೇವಸ್ಥಾನದ ಪೂಜಾರಿ 58 ವರ್ಷದ ಹಿಂದೆ ಮೃತಪಟ್ಟಿದ್ದರು.

58 ವರ್ಷದ ಸಮಸ್ಯೆ 1 ಗಂಟೆಯಲ್ಲಿ ಪರಿಹಾರವಾಯ್ತಂತೆ.. ಇದು ಬಸಪ್ಪನ ಪವಾಡವಂತೆ..

ಅಂದಿನಿಂದ ಪಟ್ಟಲದಮ್ಮನ ಕೊಂಡ, ಬಡ್ಡಿ ಹಬ್ಬ ನಿಂತೇ ಹೋಗಿತ್ತು. ಏಕೆಂದರೆ, ಇವರ ನಿಧನದ ಬಳಿಕ ಮತ್ತಿಬ್ಬರು ಪೂಜಾರಿಗಳನ್ನು ಗ್ರಾಮಸ್ಥರು ನೇಮಿಸಿದ್ದರೂ, ಯಾವುದೇ ಫಲ ಕೊಟ್ಟಿರಲಿಲ್ಲ. ಪೂಜಾರಿಗಳ ಮೈಮೇಲೆ ದೇವಿ ಬಾರದಿದ್ದಕ್ಕೆ ಪಟ್ಟಲದಮ್ಮನ ಹಬ್ಬ ನಿಂತೇ ಹೋಗಿತ್ತು.

ಇದರಿಂದ ಹಬ್ಬ ಆಚರಣೆ ಮಾಡಬೇಕೆಂದು ದೈವಸ್ವರೂಪಿ ಮಂಟೇಸ್ವಾಮಿ ಬಸಪ್ಪನ ಮೊರೆ ಹೋಗಿದ್ದರು ಗ್ರಾಮಸ್ಥರು. ಗ್ರಾಮಸ್ಥರ ಮನವಿ ಮೇರೆ ಊರಿಗೆ ಬಸಪ್ಪ ಬಂದಿದ್ದ. ಜನರ ಗುಂಪಿನಲ್ಲಿ ಕುಳಿತಿ ಮೂವರನ್ನು ಗುರುತಿಸಿರುವ ಬಸಪ್ಪ, ದೇಗುಲದ ಮುಂಭಾಗದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆ ಮಾಡಿದ್ದಾನೆ.

ಬಸಪ್ಪನ ಪವಾಡ ಕಣ್ಣಾರೆ ಕಂಡ ಗ್ರಾಮಸ್ಥರು ಮೂಕವಿಸ್ಮಿತರಾಗಿದ್ದಾರೆ. ಚೌಡೇಶ್ವರಿ ದೇಗುಲಕ್ಕೆ ಪ್ರತಾಪ್, ಪಟ್ಟಲದಮ್ಮ ದೇಗುಲಕ್ಕೆ ಮಂಜು, ಮಾರ್ಗೋನಹಳ್ಳಿ ಅಮ್ಮ ದೇಗುಲಕ್ಕೆ ಶಿವಣ್ಣ ಎಂಬುವರನ್ನ ಅರ್ಚಕರನ್ನಾಗಿ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ : ಕಲಬುರಗಿ: ಹಿಜಾಬ್-ಕೇಸರಿ ವಿವಾದದ ನಡುವೆ ಸಿಂಧೂರ ಚಳುವಳಿ

Last Updated : Feb 20, 2022, 4:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.