ಮಂಡ್ಯ: ನಾಮಪತ್ರ ಗೊಂದಲ ಮುಗಿದ ಅಧ್ಯಾಯ. ಆದರೆ, ಚುನಾವಣಾಧಿಕಾರಿಯ ಆಡಳಿತಾತ್ಮಕ ನಿರ್ಧಾರದ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಖಿಲ್ ನಾಮಪತ್ರ ಗೊಂದಲ ಹಾಗೂ ಅಂಗೀಕಾರ ಮುಗಿದು ಹೋಗಿದೆ. ಈಗ ಏನಿದ್ದರೂ ಕೋರ್ಟ್‌ಗೆ ಹೋಗಬೇಕು ಎಂದು ಹೇಳಿದರು. ಇದೇ ವೇಳೆ, ಆಡಳಿತಾತ್ಮಕ ಲೋಪದ ಬಗ್ಗೆ ನೋಟ್ ಮಾಡಿಕೊಂಡಿದ್ದೇವೆ, ತನಿಖೆ ಮಾಡಲಾಗುವುದು ಎಂದು ಹೇಳಿದರು.
ಸುಮಾರು ಎರಡು ಗಂಟೆಗಳ ಕಾಲ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲೇ ಇದ್ದ ಸಂಜೀವ್ ಕುಮಾರ್, ಕೆಲವೊಂದು ಮಾಹಿತಿಗಳನ್ನು ಅಧಿಕಾರಿಗಳಿಂದ ಪಡೆದರು ಎಂದು ಹೇಳಲಾಗಿದೆ. ಸಂಜೀವ್ ಕುಮಾರ್ ಜೊತೆ ಪೊಲೀಸ್ ವೀಕ್ಷಕರು, ಚುನಾವಣಾ ವೆಚ್ಚದ ವೀಕ್ಷಕರು ಇದ್ದರು.