ETV Bharat / state

ಮಂಡ್ಯ ಅಖಾಡಕ್ಕೆ ಧುಮುಕಿದ ನಿಖಿಲ್​​​... ಚಿತ್ರರಂಗದವರನ್ನ ಕರೆತರುವ ಅವಶ್ಯಕತೆ ಇಲ್ಲ ಎಂದ ಸಿಎಂ ಪುತ್ರ! - ನಿಖಿಲ್

ನನಗೆ ಚಿತ್ರರಂಗದವರನ್ನು ಕರೆಯುವ ಅವಶ್ಯಕತೆ ಇಲ್ಲ, ಜೆಡಿಎಸ್ ಯೋಧರಿದ್ದಾರೆ. ಅವರೇ ನನಗೆ ಶಕ್ತಿ ಅನ್ನೋ ಮೂಲಕ ಭರ್ಜರಿ ಪ್ರಚಾರ ಆರಂಭ ಮಾಡಿದ್ದಾರೆ. ಮದ್ದೂರು ತಾಲೂಕಿನ ಗೊಲ್ಲರದೊಡ್ಡಿಯ ಜುಂಜಪ್ಪ, ಚಿಕ್ಕಂಕನಹಳ್ಳಿಯ ನಂದಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಧಿಕೃತವಾಗಿ ಪ್ರಚಾರ ಚಾಲನೆ ನೀಡಿದ್ದಾರೆ

ನಿಖಿಲ್ ಕುಮಾರಸ್ವಾಮಿ
author img

By

Published : Mar 13, 2019, 7:44 PM IST

ಮಂಡ್ಯ: ದಿನದಿಂದ ದಿನಕ್ಕೆ ಸಕ್ಕರೆ ಜಿಲ್ಲೆಯ ಚುನಾವಣಾ ಕಣ ರಂಗೇರುತ್ತಿದೆ. ಅತ್ತ ಸುಮಲತಾ ಅಂಬರೀಶ್ ತಮ್ಮ ಪುತ್ರನ ಜೊತೆ ಪ್ರಚಾರದಲ್ಲಿ ತೊಡಗಿದ್ದರೆ, ಇತ್ತ ನಿಖಿಲ್ ಕುಮಾರಸ್ವಾಮಿ ಅಧಿಕೃತವಾಗಿ ಇಂದಿನಿಂದ ಪ್ರಚಾರ ಆರಂಭ ಮಾಡಿದ್ದಾರೆ.

ನನಗೆ ಚಿತ್ರರಂಗದವರನ್ನು ಕರೆಯುವ ಅವಶ್ಯಕತೆ ಇಲ್ಲ, ಜೆಡಿಎಸ್ ಯೋಧರಿದ್ದಾರೆ. ಅವರೇ ನನಗೆ ಶಕ್ತಿ ಅನ್ನೋ ಮೂಲಕ ಭರ್ಜರಿ ಪ್ರಚಾರ ಆರಂಭ ಮಾಡಿದ್ದಾರೆ. ಮದ್ದೂರು ತಾಲೂಕಿನ ಗೊಲ್ಲರದೊಡ್ಡಿಯ ಜುಂಜಪ್ಪ, ಚಿಕ್ಕಂಕನಹಳ್ಳಿಯ ನಂದಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಧಿಕೃತವಾಗಿ ಪ್ರಚಾರಕ್ಕೆನೀಡಿದ್ದಾರೆ. ನೂರಾರು ಕಾರ್ಯಕರ್ತರು ಹಾಗೂ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಜೊತೆಗೂಡಿ ಪ್ರಚಾರ ಶುರು ಮಾಡಿದ್ದಾರೆ. ಮದ್ದೂರು ತಾಲೂಕಿನಲ್ಲಿ ಮಿಂಚಿನ ಸಂಚಾರ ಮಾಡುತ್ತಿರುವ ಸ್ಯಾಂಡಲ್‌ವುಡ್ ಯುವರಾಜ, ಕಾರ್ಯಕರ್ತರೇ ನನ್ನ ಸೈನಿಕರು ಅನ್ನೋ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿ ಕಾರ್ಯತಂತ್ರ ರೂಪಿಸಿದ್ದಾರೆ.

ಪೂಜೆ ಸಲ್ಲಿಸಿ ಅಧಿಕೃತವಾಗಿ ಪ್ರಚಾರ ಚಾಲನೆ ಆರಂಭಿಸಿದ ನಿಖಿಲ್ ಕುಮಾರಸ್ವಾಮಿ

ನಾಳೆ ದೇವೇಗೌಡರಿಂದ ಅಧಿಕೃತ ಘೋಷಣೆ:

ನಾಳೆ ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಅಂತ ನಿಖಿಲ್ ಕುಮಾರಸ್ವಾಮಿ ತಿಳಿಸಿದರು‌‌. ನಾಳೆ ಮಂಡ್ಯಕ್ಕೆ ದೇವೇಗೌಡರು ಆಗಮಿಸುತ್ತಿದ್ದಾರೆ. ಈಗಾಗಲೇ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಅಂತಿಮವಾಗಿದೆ. ನಾಳೆ ಗೌಡರಿಂದಲೇ ಅಭ್ಯರ್ಥಿ ಘೋಷಣೆಯಾಗಲಿದೆ ಎಂದರು‌.

ಇಂದಿನಿಂದ ಅಧಿಕೃತವಾಗಿ ಪ್ರಚಾರ ಕಾರ್ಯ ಆರಂಭಿಸಿದ್ದೇನೆ. ಎಲ್ಲೆಡೆ ಖುಷಿ ವಾತಾವರಣ ಇದೆ. ಎಲ್ಲರೂ ಮನೆ ಮಗನ ರೀತಿ ಪ್ರೀತಿ ತೋರಿಸುತ್ತಿದ್ದಾರೆ. ನಮ್ಮ ಕುಟುಂಬ ದೇವರ ಮೇಲೆ ಭಕ್ತಿ ಇರುವ ಕುಟುಂಬ. ಕೇವಲ ಚುನಾವಣೆಗೆ ಮಾತ್ರ ಟೆಂಪಲ್ ರನ್ ಮಾಡ್ತಿಲ್ಲ ಎಂದರು‌. ರಾಜಕಾರಣ ಸಂಬಂಧಗಳನ್ನ ಹಾಳು ಮಾಡಬಾರದು. ಅಭಿಷೇಕ್ ನನ್ನ ಆತ್ಮೀಯ ಸ್ನೇಹಿತ. ಚುನಾವಣೆ ವಿಚಾರವಾಗಿ ನಾನೇನೂ ಮಾತಾಡಿಲ್ಲ. ಚುನಾವಣೆ ಬಳಿಕ ಮಾತಾನಾಡ್ತೇವೆ ಎಂದರು.

Intro:Body:

ottu 17 visuval ide, illi attach agilla andre ftp yinda tagoli

ಮಂಡ್ಯ: ದಿನದಿಂದ ದಿನಕ್ಕೆ ಸಕ್ಕರೆ ಜಿಲ್ಲೆಯ ಚುನಾವಣಾ ಕಣ ರಂಗೇರುತ್ತಿದೆ. ಅತ್ತ ಸುಮಲತಾ ಅಂಬರೀಶ್ ತಮ್ಮ ಪುತ್ರನ ಜೊತೆ ಪ್ರಚಾರದಲ್ಲಿ ತೊಡಗಿದ್ದರೆ, ಇತ್ತ ನಿಖಿಲ್ ಕುಮಾರಸ್ವಾಮಿ ಅಧಿಕೃತವಾಗಿ ಇಂದಿನಿಂದ ಪ್ರಚಾರ ಆರಂಭ ಮಾಡಿದರು.

ನನಗೆ ಚಿತ್ರರಂಗದವರನ್ನು ಕರೆಯುವ ಅವಶ್ಯಕತೆ ಇಲ್ಲ, ಜೆಡಿಎಸ್ ಯೋಧರಿದ್ದಾರೆ, ಅವರೇ ನನಗೆ ಶಕ್ತಿ ಅನ್ನೋ ಮೂಲಕ ಭರ್ಜರಿ ಪ್ರಚಾರ ಆರಂಭ ಮಾಡಿದ್ದಾರೆ.

ಮದ್ದೂರು ತಾಲ್ಲೂಕಿನ ಗೊಲ್ಲರದೊಡ್ಡಿಯ ಜುಂಜಪ್ಪ, ಚಿಕ್ಕಂಕನಹಳ್ಳಿಯ ನಂದಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಧಿಕೃತವಾಗಿ ಪ್ರಚಾರ ಆರಂಭ ಮಾಡಿದರು. ನೂರಾರೂ ಕಾರ್ಯಕರ್ತರು ಹಾಗೂ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಜೊತೆಗೂಡಿ ಹೋರಾಟ ಶುರು ಮಾಡಿದ್ದಾರೆ.

ಮದ್ದೂರು ತಾಲ್ಲೂಕಿನಲ್ಲಿ ಮಿಂಚಿನ ಸಂಚಾರ ಮಾಡುತ್ತಿರುವ ಸ್ಯಾಂಡಲ್‌ವುಡ್ ಯುವರಾಜ, ಕಾರ್ಯಕರ್ತರೇ ನನ್ನ ಸೈನಿಕರು ಅನ್ನೋ ಮೂಲಕ ಕಾರ್ಯಕರ್ತರನ್ನು ಉರಿದುಂಬಿಸಿ ಕಾರ್ಯತಂತ್ರ ರೂಪಿಸಿದ್ದಾರೆ.

ನಾಳೆ ದೇವೇಗೌಡರಿಂದ ಅಧಿಕೃತ ಘೋಷಣೆ: 'ನಾಳೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಘೋಷಣೆಯನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಅಂತ ನಿಖಿಲ್ ಕುಮಾರಸ್ವಾಮಿ ತಿಳಿಸಿದರು‌‌.

ನಾಳೆ ಮಂಡ್ಯಕ್ಕೆ ದೇವೇಗೌಡರು ಆಗಮಿಸುತ್ತಿದ್ದಾರೆ. ಈಗಾಗಲೇ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಅಂತಿಮವಾಗಿದೆ. ನಾಳೆ ಗೌಡರಿಂದಲೇ ಅಭ್ಯರ್ಥಿ ಘೋಷಣೆಯಾಗಲಿದೆ ಎಂದರು‌.

ಇಂದಿನಿಂದ ಅಧಿಕೃತವಾಗಿ ಪ್ರಚಾರ ಕಾರ್ಯ ಆರಂಭಿಸಿದ್ದೇನೆ. ಎಲ್ಲೆಡೆ ಖುಷಿ ವಾತಾವರಣ ಇದೆ. ಎಲ್ಲರೂ ಮನೆ ಮಗನ ರೀತಿ ಪ್ರೀತಿ ತೋರ್ತಿದ್ದಾರೆ. ನಮ್ಮ ಕುಟುಂಬ ದೇವರ ಮೇಲೆ ಭಕ್ತಿ ಇರೋ ಕುಟುಂಬ. ಕೇವಲ ಚುನಾವಣೆಗೆ ಮಾತ್ರ ಟೆಂಪಲ್ ರನ್ ಮಾಡ್ತಿಲ್ಲ ಎಂದರು‌.

ರಾಜಕಾರಣ ಸಂಬಂಧಗಳನ್ನ ಹಾಳು ಮಾಡಬಾರದು. ಅಭಿ ನನ್ನ ಆತ್ಮೀಯ ಸ್ನೇಹಿತ. ಚುನಾವಣೆ ವಿಚಾರವಾಗಿ ನಾನೇನೂ ಮಾತಾಡಿಲ್ಲ. ಚುನಾವಣೆ ಬಳಿಕ ಮಾತಾನಾಡ್ತೇವೆ ಎಂದರು.

ನನಗೆ ಚಿತ್ರರಂಗದ ಅವಶ್ಯಕತೆ ಇಲ್ಲ.

ನನಗೆ ನನ್ನ ಪಕ್ಷದ ಕಾರ್ಯಕರ್ತರೇ ಯೋಧರಿದ್ದಂತೆ. ಅವರೇ ಎಲ್ಲವನ್ನು ನೋಡಿಕೊಳ್ತಾರೆ.ಕನ್ನಡ ಚಿತ್ರರಂಗದರನ್ನು ಕರೆಯುವ ಅವಶ್ಯಕತೆ ಇಲ್ಲ. ಈವರೆಗೂ ನಾನು ಯಾರನ್ನು ಅಪ್ರೋಚ್ ಮಾಡಿಲ್ಲ ಎಂದು ಹೇಳಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.