ETV Bharat / state

ಶೀಘ್ರದಲ್ಲೇ ಮೈಶುಗರ್ ಕಾರ್ಖಾನೆ ಪ್ರಾರಂಭ.. ಸಚಿವ ನಾರಾಯಣ ಗೌಡ

ಇಂದು ಮೈಶುಗರ್ ಕಾರ್ಖಾನೆ ಪ್ರಾರಂಭ ಕುರಿತು ಸಭೆ ನಡೆಯಲಿದ್ದು, ಈ ಸಭೆಗೆ ಶಾಸಕರು, ಸಂಸದರು, ಮಾಜಿ ಶಾಸಕರು ಹಿರಿಯ ರೈತ ಮುಖಂಡರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ತಿಳಿಸಿದರು.

Narayana Gowda reaction about Mysugar factory opening

author img

By

Published : Oct 18, 2021, 7:10 AM IST

ಮಂಡ್ಯ: ಶೀಘ್ರದಲ್ಲೇ ಮೈಶುಗರ್ ಕಾರ್ಖಾನೆ ಪ್ರಾರಂಭವಾಗಲಿದ್ದು, ಈ ಸಂಬಂಧ ಇಂದು ಸಭೆ ನಡೆಸಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ತಿಳಿಸಿದರು.

ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಕಳೆದ 35 ದಿನಗಳಿಂದ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಪ್ರಾರಂಭವಾಗಬೇಕು ಎಂದು ಹೋರಾಟ ಮಾಡ್ತಿದ್ದಾರೆ. ಕಾವೇರಿ ಮಾತೆ ಹಾಗೂ ಮಂಡ್ಯ ಗ್ರಾಮದೇವತೆ ಕಾಳಿಕಾಂಬ ಆಶೀರ್ವಾದದೊಂದಿಗೆ ಶೀಘ್ರದಲ್ಲೇ ಕಾರ್ಖಾನೆ ಪ್ರಾರಂಭವಾಗಲಿ. ಈ ಕುರಿತು ನಾನು ಯಾವುದೇ ನಿರ್ಣಯ ಕೈಗೊಳ್ಳುವುದಿಲ್ಲ, ಮುಖ್ಯಮಂತ್ರಿಗಳೇ ನಿರ್ಣಯ ತೆಗೆದುಕೊಳ್ಳಲಿದ್ದಾರೆ. ನಮ್ಮ ಸರ್ಕಾರ ಯಾವುದೇ ತಪ್ಪು ನಿರ್ಣಯ ಕೈಗೊಳ್ಳುವುದಿಲ್ಲ ಎಂದರು.

ಮೈಶುಗರ್ ಕಾರ್ಖಾನೆ ಪ್ರಾರಂಭ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ನಾರಾಯಣ ಗೌಡ

ಇಂದು ನಡೆಯುತ್ತಿರುವ ಸಭೆಗೆ ಶಾಸಕರು, ಸಂಸದರು, ಮಾಜಿ ಶಾಸಕರು ಹಿರಿಯ ರೈತ ಮುಖಂಡರು ಭಾಗವಹಿಸಲಿದ್ದಾರೆ. ಕಾಳಿಕಾಂಬ ತಾಯಿ ಆದಷ್ಟು ಬೇಗ ಒಳ್ಳೆಯದನ್ನ ಮಾಡಲಿ ಎಂದು ಪ್ರಾರ್ಥಿಸುತ್ತೇನೆ. ಎಲ್ಲವೂ ಒಳ್ಳೆಯದಾಗುತ್ತೆ ಎಂದು ಸಚಿವರು ಹೇಳಿದರು.

ಕಾವೇರಿ ತೀರ್ಥವನ್ನು ಜಿಲ್ಲೆಯಲ್ಲಿ ಹಂಚುತ್ತಿರುವುದು ನನ್ನ ಪುಣ್ಯ:

ಕಾವೇರಿ ತಾಯಿಯ ಮಡಿಲಿಗೆ ಹೋಗಿ ತೀರ್ಥವನ್ನು ಜಿಲ್ಲೆಗೆ ತಂದಿರುವುದು ನನ್ನ ಪುಣ್ಯ. ಕಾವೇರಿ ಮಾತೆಯಿಂದ ನಮ್ಮ ಜಿಲ್ಲೆಯಲ್ಲಿ ಅನ್ನ ತಿನ್ನುತ್ತಿದ್ದೇವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಂಬಾಡಿ ಅಣೆಕಟ್ಟೆ ಕಟ್ಟಿದ್ದಾರೆ. ಅವರಿಗೆ ಕೋಟಿ ಕೋಟಿ ಅಭಿನಂದನೆ. ಶೀಘ್ರದಲ್ಲೇ ಅವರ ಪುತ್ಥಳಿ ನಿರ್ಮಾಣವಾಗ್ತಿದೆ ಎಂದು ತಿಳಿಸಿದರು.

ಮೇಕೆದಾಟು ವಿಚಾರ:

ಮೇಕೆದಾಟು ವಿಚಾರವನ್ನು ನಮ್ಮ ಸರ್ಕಾರ ಚಾಲೆಂಜ್ ಆಗಿ ತೆಗೆದುಕೊಂಡಿದೆ. ನಮ್ಮ ಪರ ಕೋರ್ಟ್ ತೀರ್ಪು ಬರುವ ವಿಶ್ವಾಸವಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.