ಮಂಡ್ಯ: ಜನರ ಸೇವೆಗೆ ಎಂದು ಶ್ರೀರಂಗಪಟ್ಟಣ ಪುರಸಭೆಗೆ ಕೊಡುಗೆಯಾಗಿ ನೀಡಿದ್ದ ಆ್ಯಂಬುಲೆನ್ಸ್ ಅನ್ನು ಪುರಸಭೆ ಅಧಿಕಾರಿಗಳು ಗೂಡ್ಸ್ ವಾಹನವನ್ನಾಗಿ ಮಾಡಿಕೊಂಡಿದ್ದು, ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿದ್ದ ಗೋ. ಮಧುಸೂದನ್ ಪಟ್ಟಣದ ಜನರ ಸೇವೆಗೆಂದು ಆಂಬ್ಯುಲೆನ್ಸ್ ನೀಡಿದ್ರು. ಆದರೆ, ಈ ವಾಹನ ರೋಗಿಗಳ ಉಪಯೋಗಕ್ಕೆ ಸಿಗದೇ ಗೂಡ್ಸ್ ವಾಹನವಾಗಿ ಕಾರ್ಯ ನಿರ್ವಹಿಸುತ್ತಿದೆ.
ಅಧಿಕಾರಿಗಳು ಆ್ಯಂಬುಲೆನ್ಸ್ ಅನ್ನು ಜನರ ಸೇವೆಗೆ ಬಳಸದೇ ದುರ್ಬಳಕೆ ಮಾಡಿಕೊಂಡಿದ್ದು,ಪಟ್ಟಣದ ವಿದ್ಯುತ್ ದೀಪಗಳ ದುರಸ್ತಿ ಕಾರ್ಯಕ್ಕೆ ಈ ವಾಹನ ಬಳಸಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.