ಮಂಡ್ಯ: ತುಂಬುತ್ತಿರುವ ಕೆಆರ್‌ಎಸ್ ಅಣೆಕಟ್ಟೆಯನ್ನು ಸಂಸದೆ ಸುಮಲತಾ ಅಂಬರೀಶ್ ವೀಕ್ಷಣೆ ಮಾಡಿದರು. ಕೋವಿಡ್ 19ನಿಂದ ಗುಣಮುಖರಾದ ನಂತರ ಮೊದಲ ಕ್ಷೇತ್ರದ ಪ್ರವಾಸದಲ್ಲಿದ್ದು, ಅಣೆಕಟ್ಟೆ ವೀಕ್ಷಣೆ ಮಾಡಿದರು.
ಬೆಳಗ್ಗೆ ಮೈಸೂರಿನಿಂದ ಆಗಮಿಸಿದ ಸಂಸದೆ, ಅಧಿಕಾರಿಗಳಿಂದ ನೀರಿನ ಒಳ ಹರಿವು ಹಾಗೂ ಹೊರ ಹರಿವಿನ ಮಾಹಿತಿ ಪಡೆದುಕೊಂಡರು. ಕೃಷಿಗೆ ಅವಶ್ಯಕತೆಗನುಗುಣವಾಗಿ ನೀರಿನ ಪ್ರಮಾಣ, ಕುಡಿಯುವ ನೀರು ಹಾಗೂ ಇನ್ನಿತರೆ ಉಪಯೋಗ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ನಂತರ ಮಾತನಾಡಿದ ಅವರು, ಅಣೆಕಟ್ಟೆ ಹಿತದೃಷ್ಟಿಯಿಂದ ಕಲ್ಲು ಗಣಿಗಾರಿಕೆ ನಿಲ್ಲಿಸುವುದು ಅವಶ್ಯಕವಾಗಿದೆ. ಗಣಿಗಾರಿಕೆಗೆ ನನ್ನ ವಿರೋಧವಿದೆ. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬಿಡಬೇಕು. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಬೇಕಾಗಿದೆ ಎಂದರು.