ಮಂಡ್ಯ: ನಾಗಮಂಗಲ ಕ್ಷೇತ್ರಕ್ಕೆ ನಾನೇ ಮುಂದಿನ ಅಭ್ಯರ್ಥಿ ಎಂಬ ಎಲ್.ಆರ್ ಶಿವರಾಮೇಗೌಡ ಹೇಳಿಕೆ ವಿಚಾರಕ್ಕೆ ನಾನೇನು ಧಾನ ಶೂರ ಕರ್ಣನಾ ತ್ಯಾಗ ಮಾಡುವುದಕ್ಕೆ ಎಂದು ಶಾಸಕ ಸುರೇಶ್ ಗೌಡ ಟಾಂಗ್ ನೀಡಿದರು.
ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಂಸದರು ಏನಕ್ಕೆ ಹೇಳ್ತಿದ್ದಾರೋ, ಯಾಕೇ ಹೇಳ್ತಾರೋ ಗೊತ್ತಿಲ್ಲ. ಎಲ್ಲವನ್ನು ನಮ್ಮ ಹೈಕಮಾಂಡ್ ನೋಡಿಕೊಳ್ಳುತ್ತೆ ನನಗೂ ಅದಕ್ಕೂ ಸಂಬಂಧವಿಲ್ಲ ಎಂದರು.
ಓಪನ್ ಫೀಲ್ಡ್ ಯಾರು ಬೇಕಾದ್ರೂ ಓಡಾಡಬಹುದು. ನಾನೇನು ಬ್ಯಾಡ ಅಂತ ಹೇಳುವುದಿಲ್ಲ. ಹೈಕಮಾಂಡ್ ಹಾಗೂ ಜನರು ತೀರ್ಮಾನ ಮಾಡ್ತಾರೆ ಎಂದ ಅವರು, ನಾನು ಶಾಸಕನಾಗಿದ್ದೇನೆ, ನನ್ನ ಕೆಲಸ ಮಾಡ್ತಿದ್ದೇನೆ. ಪಕ್ಷದ ಕೆಲಸವಿದ್ದಾಗ ಎಲ್ಲರೂ ಸೇರಿ ಕೆಲಸ ಮಾಡ್ತೇವೆ ಎಂದು ಹೇಳಿದರು.