ETV Bharat / state

ಸಂಸದೆ ಸುಮಲತಾ ಜಿಲ್ಲೆಗೆ ಉಪಯೋಗವಾಗುವ ಯಾವುದೇ ಕೆಲಸ ಮಾಡ್ತಿಲ್ಲ: ಶಾಸಕ ರವೀಂದ್ರ ಶ್ರೀಕಂಠಯ್ಯ - MLA Ravindra Srikanthaiah talk about sumalatha ambarish

ಸಾರ್ವಜನಿಕರ ಬದುಕಿನಲ್ಲಿ ಹಾಹಾಕಾರ ಸೃಷ್ಟಿಸಿದ್ದಾರೆ. ಈ ರೀತಿ ಮಾಡಿ ಇವರು ಸಾಧಿಸುವುದು ಏನೂ ಇಲ್ಲ. ಇದರಿಂದ ಜನರು ಆಕ್ರೋಶಗೊಳ್ತಾರೆ. ಮಾಡಬೇಕಾಗಿರುವ ಕೆಲಸವನ್ನು ಸಂಸದರು ಮಾಡಲಿ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ.

mla-ravindra-srikanthaiah
ಶಾಸಕ ರವೀಂದ್ರ ಶ್ರೀಕಂಠಯ್ಯ
author img

By

Published : Aug 11, 2021, 5:08 PM IST

Updated : Aug 11, 2021, 6:07 PM IST

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್​ ಅವರು ಮಂಡ್ಯ ಜಿಲ್ಲೆಗೆ ಉಪಯೋಗವಾಗುವ ಯಾವುದೇ ಕೆಲಸವನ್ನೂ ಮಾಡ್ತಿಲ್ಲ. ಬೇಡವಾಡ ಕೆಲಸ ಮಾಡ್ಕೊಂಡು ನಿಂತಿದ್ದಾರೆ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಡವಾಡ ವಿಚಾರ ಎತ್ತಿಕೊಂಡು ಕೆಆರ್​ಎಸ್​ ಉಳಿಸ್ತಿನಿ ಅಂತ ಹೋಗಿದ್ದಾರೆ. ಉಳಿಸೋಕೆ ಹಾಳಾಗಿರೋದು ಏನು?. ಡ್ಯಾಂಗೆ ಏನೂ ಆಗಿಲ್ಲ. ಸುಮ್ಮನೆ ಬೇರೆ ಬೇರೆ ವಿಚಾರ ತೆಗೆದುಕೊಂಡು ಅನಾವಶ್ಯಕವಾಗಿ ಸಾರ್ವಜನಿಕರಿಗೆ ಗೊಂದಲ ಉಂಟು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ

ಸಾರ್ವಜನಿಕರ ಬದುಕಿನಲ್ಲಿ ಹಾಹಾಕಾರ ಸೃಷ್ಟಿ ಮಾಡಿದ್ದಾರೆ. ಈ ರೀತಿ ಮಾಡಿ ಇವರು ಸಾಧಿಸುವುದು ಏನು ಇಲ್ಲ. ಇದರಿಂದ ಜನರು ಆಕ್ರೋಶಗೊಳ್ತಾರೆ. ಮಾಡಬೇಕಾಗಿರುವ ಕೆಲಸವನ್ನು ಸಂಸದರು ಮಾಡಲಿ ಎಂದು ಸಲಹೆ ನೀಡಿದರು.

ಸಂಸದರ ಕೆಲಸವನ್ನ ಶಾಸಕರು ಮಾಡ್ತಿದ್ದಾರೆ: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅವಶ್ಯಕತೆ ಇರುವ ಅಂಡರ್ ಪಾಸ್​ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಳಿ ಕುಳಿತು ಮಾತನಾಡಲಿ ಎಂದು ಸಲಹೆ ನೀಡಿದರಲ್ಲದೇ, ಸಂಸದರ ಕೆಲಸವನ್ನ ಶಾಸಕರು ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಜನ ಅವರನ್ನ ಕ್ಷಮಿಸೋದಿಲ್ಲ: ಅವರು ಬೇಡವಾಡ ಕೆಲಸ ಮಾಡ್ಕೊಂಡು ನಿಂತಿದ್ದಾರೆ. ಈ ರೀತಿಯ ವರ್ತನೆ ಇಟ್ಟುಕೊಂಡರೆ ಮಂಡ್ಯ ಜಿಲ್ಲೆಯ ಜನ ಅವರನ್ನ ಕ್ಷಮಿಸೋದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಓದಿ: ಮೈಸೂರಿನ ಫುಟ್ಸಲ್ ಕ್ರೀಡಾಪಟು ರೋಮ್​ನಲ್ಲಿ ಸಾವು

Last Updated : Aug 11, 2021, 6:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.