ETV Bharat / state

ಕಲ್ಲು ಕುಸಿತ ಸ್ಥಳಕ್ಕೂ ಡ್ಯಾಂಗೂ ಯಾವುದೇ ಸಂಬಂಧವಿಲ್ಲ: ರವೀಂದ್ರ ಶ್ರೀಕಂಠಯ್ಯ

author img

By

Published : Jul 19, 2021, 3:53 PM IST

Updated : Jul 19, 2021, 4:15 PM IST

ಪಾದಚಾರಿ ಮಾರ್ಗಕ್ಕೆ ಬಳಸುತ್ತಿದ್ದ ಹಳೆ ರಸ್ತೆಯ ಕಲ್ಲುಗಳು ಕುಸಿದಿವೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಕಲ್ಲುಗಳು ಕುಸಿತ ಕಂಡಿರುವುದರಿಂದ ಸಹಜವಾಗಿಯೇ ಆತಂಕ ಉದ್ಭವಿಸಿತ್ತು ಅಷ್ಟೇ. ಆದ್ರೆ ಯಾರಿಗೂ ಆತಂಕ ಬೇಡ- ಶಾಸಕ ರವೀಂದ್ರ ಶ್ರೀಕಂಠಯ್ಯ

ಶಾಸಕ ರವೀಂದ್ರ ಶ್ರೀಕಂಠಯ್ಯ ಸ್ಪಷ್ಟನೆ
ಶಾಸಕ ರವೀಂದ್ರ ಶ್ರೀಕಂಠಯ್ಯ ಸ್ಪಷ್ಟನೆ

ಮಂಡ್ಯ: ಕಲ್ಲು ಕುಸಿತ ಸ್ಥಳಕ್ಕೂ ಡ್ಯಾಂಗೂ ಯಾವುದೇ ಸಂಬಂಧವಿಲ್ಲ. ಡ್ಯಾಂ ಸುರಕ್ಷತೆಗೆ ಧಕ್ಕೆಯಾಗದ ಸ್ಥಳದಲ್ಲಿ ಕಲ್ಲುಗಳು ಕುಸಿದಿವೆ. ಈ ಘಟನೆಯಿಂದ ಯಾವುದೇ ಆತಂಕವಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಸ್ಪಷ್ಟನೆ

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಚಾರಿ ಮಾರ್ಗಕ್ಕೆ ಬಳಸುತ್ತಿದ್ದ ಹಳೆ ರಸ್ತೆಯ ಕಲ್ಲುಗಳು ಕುಸಿದಿವೆ. ಗೇಟ್‌ಗಳ ಕಾಮಗಾರಿ ವೇಳೆ ಘಟನೆ ಸಂಭವಿಸಿದೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಕಲ್ಲುಗಳು ಕುಸಿತ ಕಂಡಿರುವುದರಿಂದ ಸಹಜವಾಗಿಯೇ ಆತಂಕ ಉದ್ಭವಿಸಿತ್ತು ಅಷ್ಟೇ. ಆದ್ರೆ ಯಾರಿಗೂ ಆತಂಕ ಬೇಡ ಎಂದರು.

ಕೆಆರ್​ಎಸ್​ ಡ್ಯಾಂ ಕಲ್ಲು ಕುಸಿತ ಸ್ಥಳಕ್ಕೆ  ಶಾಸಕ ರವೀಂದ್ರ ಶ್ರೀಕಂಠಯ್ಯ  ಭೇಟಿ

ಕೆಆರ್‌ಎಸ್ ಡ್ಯಾಂನ ಉದ್ಯಾನವನಕ್ಕೆ ಹೋಗುವ ಭಾಗದಲ್ಲಿರುವ ಜಾಗವಾಗಿದ್ದು, ಮಣ್ಣಿನಿಂದ ಕೂರಿಸಲಾಗಿತ್ತು. ಹೀಗಾಗಿ ಗೇಟ್ ದುರಸ್ತಿ ಕಾರ್ಯದ ವೇಳೆ ಕುಸಿತವಾದ ಅನುಮಾನ ಎದುರಾಗಿತ್ತು. ಈ ಬಗ್ಗೆ ಸೂಪರಿಂಟೆಂಡೆಂಟ್ ಇಂಜಿನಿಯರ್ ವಿಜಯ್ ಕುಮಾರ್ ಸ್ಪಷ್ಟನೆ ನೀಡಿದ್ದು, ಜನರು ಕೊಂಚ ನಿರಾಳರಾಗಿದ್ದಾರೆ.

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ದುರಸ್ತಿ ಕಾರ್ಯವನ್ನು ಆರಂಭಿಸಿದ್ದಾರೆ. ಯಾವುದೇ ಭಯ ಬೇಡ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದಲೇ ಅಣೆಕಟ್ಟೆಗೆ ಅಪಾಯವಾಗುತ್ತಿದೆ ಎಂದು ಜಿಲ್ಲೆಯ ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.

'ಡ್ಯಾಂಗೆ ತಕ್ಷಣವೇ ದೃಷ್ಟಿ ತೆಗೆಸಬೇಕು'

ಮನುಷ್ಯನ ಕಣ್ಣಿಗೆ ಮರನೂ ಸಿಡೀತು ಎಂಬ ಗಾದೆ ಇದೆ. ಒಂದಷ್ಟು ಜನರು ಪಾಪ ವೃತ್ತಿ ಮಾಡ್ಕೊಂಡಿದ್ದಾರೆ. ಹಾಗಾಗಿ ಡ್ಯಾಂಗೆ ದೃಷ್ಟಿ ಬಿದ್ದಾಗಿದೆ. ತಕ್ಷಣವೇ ದೃಷ್ಟಿ ಗೊಂಬೆ ಮಾಡಿಸುವಂತೆ ಸರ್ಕಾರಕ್ಕೆ ಹೇಳಿದ್ದೇನೆ. ಸರ್ಕಾರ ಯಾಕೋ ಇದರ ಬಗ್ಗೆ ನಿಗಾ ವಹಿಸ್ತಿಲ್ಲ. ಹೀಗಾಗಿ ನಾವೇ ದೃಷ್ಟಿ ಪೂಜೆ ಮಾಡ್ತೇವೆ ಎಂದರು.

ಇದನ್ನೂ ಓದಿ: ವ್ಯಕ್ತಿಗತ ಗೌಪ್ಯತೆಗೆ ರಾಜ್ಯದಲ್ಲಿ ಭದ್ರತೆ ಎಲ್ಲಿದೆ?.. ಬಿಜೆಪಿ ರಾಜ್ಯಾಧ್ಯಕ್ಷರ ಪರ ಬ್ಯಾಟ್ ಬೀಸಿದ ಯತ್ನಾಳ!

Last Updated : Jul 19, 2021, 4:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.