ಮಂಡ್ಯ: ಮೂರನೇ ವಾರದ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೇಟೆಯ ಅಲ್ಲಲ್ಲಿ ಪೊಲೀಸರು ಭದ್ರತೆ ನೋಡಿಕೊಳ್ಳುತ್ತಿದ್ದರು. ಹಣ್ಣು ವ್ಯಾಪಾರಿಗಳು, ಮಾಂಸದ ಅಂಗಡಿಗಳು, ತರಕಾರಿ ಅಂಗಡಿಗಳ ವ್ಯಾಪಾರ ಎಂದಿನಂತಿತ್ತು. ಸಣ್ಣ ಅಂಗಡಿಗಳ ವ್ಯಾಪಾರಿಗಳು ದಿನನಿತ್ಯದಂತೆ ವ್ಯಾಪಾರದಲ್ಲಿ ತೊಡಗಿದ್ದು ಕಂಡು ಬಂತು.
ತಾಲ್ಲೂಕು ಕೇಂದ್ರಗಳಲ್ಲೂ ಜನ ಸಂಚಾರ ಮಾಮೂಲಿಯಾಗಿತ್ತು. ಕೆ.ಆರ್.ಪೇಟೆ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ನಾಗಮಂಗಲ ಹಾಗು ಪಾಂಡವಪುರದಲ್ಲಿ ಜನರು ತಿರುಗಾಡುತ್ತಿದ್ದುದು ಕಂಡುಬಂತು.