ETV Bharat / state

ಸರಿಯಾಗಿ ಬೈಕ್ ಓಡಿಸಿ ಎಂದಿದ್ದೇ ತಪ್ಪಾಯ್ತಾ?: ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ - ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ

ಸರಿಯಾಗಿ ಬೈಕ್ ಓಡಿಸಿ ಎಂದು ಬುದ್ದಿಮಾತು ಹೇಳಿದ್ದಕ್ಕೆ ಆಕ್ರೋಶಗೊಂಡ ದುಷ್ಕರ್ಮಿಗಳು ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ.

Miscreants assault on old man
ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ದುಷ್ಕರ್ಮಿಗಳು
author img

By

Published : Jun 29, 2022, 12:16 PM IST

ಮಂಡ್ಯ: ಸರಿಯಾಗಿ ಬೈಕ್ ಓಡಿಸಿ ಎಂದಿದ್ದೇ ತಪ್ಪಾಯ್ತಾ?, ಹಿರಿಯ ವ್ಯಕ್ತಿ ಎಂಬುದನ್ನು ನೋಡದೇ ಇಬ್ಬರು ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆತಂಕಕಾರಿ ಘಟನೆ ಮಂಡ್ಯ ತಾಲೂಕಿನ ಯಲಿಯೂರು ಬಳಿಯ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.

ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ದುಷ್ಕರ್ಮಿಗಳು

ದುಷ್ಕರ್ಮಿಗಳು ಲಾಂಗ್ ಹಿಡಿದು ಹಲ್ಲೆ ಮಾಡಿದ್ದಾರೆ. ತೂಬಿನಕೆರೆ ಗ್ರಾಮದ ಶಂಕರೇಗೌಡ (60) ಹಲ್ಲೆಗೊಳಗಾದವರು. ಪುಂಡರು ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸುತ್ತಿದ್ದರು. ಈ ವೇಳೆ ಬೈಕ್ ಸರಿಯಾಗಿ ಓಡಿಸಿ, ನಿಮ್ಮಿಂದ ಎಲ್ಲರಿಗೂ ತೊಂದರೆಯಾಗುತ್ತದೆ. ಈ ರೀತಿ ಓಡಿಸಿದರೆ ಬೇರೆಯವರು ಸಾಯುತ್ತಾರೆ ಎಂದು ಶಂಕರೇಗೌಡ ಬುದ್ಧಿ ಹೇಳಿದ್ದರು. ಇಷ್ಟಕ್ಕೆ ಆಕ್ರೋಶಗೊಂಡು ದುಷ್ಟರು ಶಂಕರೇಗೌಡರನ್ನು ಅಡ್ಡಗಟ್ಟಿ ಲಾಂಗ್​ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಶಂಕರೇಗೌಡ ಅವರಿಗೆ ಮಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ವಾಹನ ಸವಾರರೊಬ್ಬರು ತಮ್ಮ ಮೊಬೈಲ್​​ನಲ್ಲಿ ಸೆರೆಹಿಡಿದಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೈಸೂರು ಕಾಂಗ್ರೆಸ್ ಕಚೇರಿ ಬಳಿ ನೂಕು ನುಗ್ಗಲು - ಬಿಜೆಪಿ ಕಾರ್ಯಕರ್ತರ ಬಂಧನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.