ETV Bharat / state

ಮಂಡ್ಯಕ್ಕೆ ಇನ್ನೂ ಹೆಚ್ಚಿನ ಅನುದಾನ, ಗಾಸಿಪ್​ಗೆ ಕಿವಿಗೊಡಬೇಡಿ: ಪುಟ್ಟರಾಜು

ಹಲವರಿಗೆ ಗಾಸಿಪ್ ಹಬ್ಬಿಸೋದೇ ಕೆಲಸ. ಗಾಸಿಪ್​​ಗೆ ತಲೆ ಕೆಡಿಸಿಕೊಳ್ಳಬೇಡಿ. ಹೆಚ್ಚಿನ ಅನುದಾ‌ನ ಸಿಗಲಿದೆ. ಈಗಾಗಲೇ ಸಿಎಂ ತಮ್ಮ ಕಾರ್ಯವೈಖರಿ ವೇಗ ಹೆಚ್ಚಿಸಿಕೊಂಡಿದ್ದಾರೆ. ಇನ್ಮುಂದೆ ಸಿಎಂ ಕಾರ್ಯವೈಖರಿ ಬದಲಾಗಲಿದೆ ಎಂದು ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಪುಟ್ಟರಾಜು
author img

By

Published : Jun 4, 2019, 11:04 AM IST

ಮಂಡ್ಯ: ಅನುದಾನವನ್ನು ಸಿಎಂ ಬೇರೆ ಜಿಲ್ಲೆಗೆ ಕೊಟ್ಟಿದ್ದಾರೆ ಎಂಬ ಗಾಸಿಪ್​​ಗೆ ಆದ್ಯತೆ ಕೊಡಬೇಡಿ. ಇದುವರೆಗೆ ಕೊಟ್ಟ ಅನುದಾನಕ್ಕಿಂತ ಹೆಚ್ಚು ಅನುದಾನ ಕೊಡ್ತಾರೆ ಅಂತ ಸಚಿವ ಸಿ.ಎಸ್. ಪುಟ್ಟರಾಜು ಮಂಡ್ಯ ನಾಗರಿಕರಿಗೆ ಭರವಸೆ ನೀಡಿದ್ದಾರೆ.

ಮಂಡ್ಯ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಹಿಂಪಡೆಯುವ ವಿಚಾರವಾಗಿ ಮಾತನಾಡಿದ ಅವರು, ಕೆಲವರಿಗೆ ಗಾಸಿಪ್ ಹಬ್ಬಿಸೋದೇ ಕೆಲಸ. ಗಾಸಿಪ್​​ಗೆ ತಲೆ ಕೆಡಿಸಿಕೊಳ್ಳಬೇಡಿ. ಹೆಚ್ಚಿನ ಅನುದಾ‌ನ ಸಿಗಲಿದೆ. ಈಗಾಗಲೇ ಸಿಎಂ ತಮ್ಮ ಕಾರ್ಯವೈಖರಿ ವೇಗ ಹೆಚ್ಚಿಸಿಕೊಂಡಿದ್ದಾರೆ. ಇನ್ಮುಂದೆ ಸಿಎಂ ಕಾರ್ಯವೈಖರಿ ಬದಲಾಗಲಿದೆ. ಸಿಎಂ ಯಾವ ಕಾರಣಕ್ಕೂ ಮಂಡ್ಯ ಮರೆಯಲ್ಲ. ಮೈಶುಗರ್ ನಿರ್ಮಾಣಕ್ಕಾಗಿ ಡಿಪಿಆರ್ ತಯಾರಿಸಲು ಸೂಚನೆ ನೀಡಲಾಗಿದೆ ಎಂದರು.

ಸಚಿವ ಪುಟ್ಟರಾಜು ಮಾಧ್ಯಮಗೋಷ್ಠಿ

ಸಂಸದೆ ಶೋಭಾ ಕರಂದ್ಲಾಜೆಗೆ ಸವಾಲು ಹಾಕಿದ ಪುಟ್ಟರಾಜು, ಶಿಕಾರಿಪುರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಹೀಗಾಗಿ ಮೊದಲು ಯಡಿಯೂರಪ್ಪರ ರಾಜೀನಾಮೆ ಕೊಡಿಸಲಿ ಎಂದು ಹೇಳಿದರು.

ನಿಖಿಲ್​ಗೆ ಅಮಾವಾಸ್ಯೆ ಅಡ್ಡಿ:

ನಿಖಿಲ್ ಮಂಡ್ಯಕ್ಕೆ ಬರ್ತಾರೆ. ಮಂಡ್ಯ ಜನರ ಜೊತೆಯಲ್ಲಿಯೇ ಇರ್ತಾರೆ. ಅಮಾವಾಸ್ಯೆ ಮುಗಿಸಿ ಬರಲು ಕಾಯುತ್ತಿದ್ದರು. ನಿನ್ನೆಯಷ್ಟೇ ಅಮಾವಾಸ್ಯೆ ಮುಗಿದಿದೆ. ಇನ್ಮುಂದೆ ಮಂಡ್ಯಕ್ಕೆ ಬಂದು, ನಿಮ್ಮ ಜೊತೆಯಲ್ಲೇ ಇರ್ತಾರೆ. ತೋಟ ಖರೀದಿ, ಮನೆ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.

ಇನ್ನು ಲೋಕ‌ ಸಮರಕ್ಕೂ ಮೊದಲೇ ವಿಶ್ವನಾಥ್ ರಾಜೀನಾಮೆಗೆ ನಿರ್ಧರಿಸಿದ್ರು. ಆಗ ನಾವೆಲ್ಲ ಚುನಾವಣೆ ಮುಗಿಯೋವರೆಗೂ ಕಾಯಿರಿ ಅಂದಿದ್ದೆವು ಎಂದರು. ಇವತ್ತಿನ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡಿ, ತೀರ್ಮಾನ ಮಾಡ್ತಾರೆ. ಅವರ ಅಭಿಪ್ರಾಯ ಹಂಚಿಕೊಳ್ಳಲು ಸುದ್ದಿಗೋಷ್ಠಿ ಕರೆದಿದ್ದಾರೆ ಅಷ್ಟೇ. ಅದನ್ನ ನಾವು ಬೇಡ ಅನ್ನೋಕೆ ಆಗುತ್ತಾ ಎಂದು ಪ್ರಶ್ನಿಸಿದರು.

Intro:ಮಂಡ್ಯ: ಅನುದಾನವನ್ನು ಸಿಎಂ ಬೇರೆ ಜಿಲ್ಲೆಗೆ ಕೊಟ್ಟಿದ್ದಾರೆ ಎಂಬ ಗಾಸಿಪ್ ಗೆ ಆದ್ಯತೆ ಕೊಡಬೇಡಿ. ಇದುವರೆಗೆ ಕೊಟ್ಟ ಅನುದಾನಕ್ಕಿಂತ ಹೆಚ್ಚು ಅನುದಾನ ಕೊಡ್ತಾರೆ ಅಂತ ಸಚಿವ ಸಿ.ಎಸ್.ಪುಟ್ಟರಾಜು ಮಂಡ್ಯ ನಾಗರೀಕರಿಗೆ ಭರವಸೆ ನೀಡಿದ್ದಾರೆ.
ಮಂಡ್ಯ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಹಿಂಪಡೆಯುವ ವಿಚಾರವಾಗಿ ಮಾತನಾಡಿ, ಕೆಲವರಿಗೆ ಗಾಸಿಪ್ ಹಬ್ಬಿಸೋದೇ ಕೆಲಸ. ಗಾಸಿಫ್‌ಗೆ ತಲೆ ಕೆಡಿಸಿಕೊಳ್ಳಬೇಡಿ. ಹೆಚ್ಚಿನ ಅನುದಾ‌ನ ಸಿಗಲಿದೆ ಎಂದ ಅವರು, ಈಗಾಗಲೇ ಸಿಎಂ ತಮ್ಮ ಕಾರ್ಯ ವೈಖರಿ ವೇಗ ಹೆಚ್ಚಿಸಿಕೊಂಡಿದ್ದಾರೆ. ಇನ್ಮುಂದೆ ಸಿಎಂ ಕಾರ್ಯ ವೈಖರಿ ಬದಲಾಗಿದೆ ಎಂದರು.
ಸಿಎಂ ಯಾವ ಕಾರಣಕ್ಕೂ ಮಂಡ್ಯ ಮರೆಯಲ್ಲ. ಮೈಶುಗರ್ ನಿರ್ಮಾಣಕ್ಕಾಗಿ ಡಿಪಿಆರ್ ತಯಾರಿಸಲು ಸೂಚನೆ ನೀಡಲಾಗಿದೆ ಎಂದರು.
ಸಂಸದೆ ಶೋಭ ಕರಂದ್ಲಾಜೆಗೆ ಸವಾಲಾಕಿದ ಪುಟ್ಟರಾಜು, ಶಿಕಾರಿಪುರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಹೀಗಾಗಿ ಮೊದಲು ಯಡಿಯೂರಪ್ಪರ ರಾಜೀನಾಮೆ ಕೊಡಿಸಲಿ ಎಂದರು.
ನಿಖಿಲ್ ಗೆ ಅಮಾವಾಸ್ಯೆ ಅಡ್ಡಿ:
ನಿಖಿಲ್ ಮಂಡ್ಯಕ್ಕೆ ಬರ್ತಾರೆ. ಮಂಡ್ಯ ಜನರ ಜೊತೆಯಲ್ಲಿಯೇ ಇರ್ತಾರೆ. ಅಮಾವಾಸ್ಯೆ ಮುಗಿಸಿ ಬರಲು ಕಾಯುತ್ತಿದ್ದರು. ನಿನ್ನೆಯಷ್ಟೇ ಅಮಾವಾಸ್ಯೆ ಮುಗಿದಿದೆ. ಇನ್ಮುಂದೆ ಮಂಡ್ಯಕ್ಕೆ ಬಂದು, ನಿಮ್ಮ ಜೊತೆಯಲ್ಲೇ ಇರ್ತಾರೆ. ತೋಟ ಖರೀದಿ, ಮನೆ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.
ಲೋಕ‌ ಸಮರಕ್ಕೂ ಮೊದಲೇ ವಿಶ್ವನಾಥ್ ರಾಜೀನಾಮೆಗೆ ನಿರ್ಧರಿಸಿದ್ರು. ಆಗ ನಾವೆಲ್ಲ ಚುನಾವಣೆ ಮುಗಿಯೋವರೆಗೂ ಕಾಯಿರಿ ಅಂದಿದ್ವಿ ಎಂದರು.
ಇವತ್ತಿನ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡಿ, ತೀರ್ಮಾನ ಮಾಡ್ತಾರೆ. ಅವರ ಅಭಿಪ್ರಾಯ ಹಂಚಿಕೊಳ್ಳಲು ಸುದ್ದಿಗೋಷ್ಠಿ ಕರೆದಿದ್ದಾರೆ ಅಷ್ಟೇ. ಅದನ್ನ ನಾವು ಬೇಡ ಅನ್ನೋಕೆ ಆಗುತ್ತ ಎಂದು ಪ್ರಶ್ನಿಸಿದರು.Body:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.