ಮಂಡ್ಯ: ಕೊರೊನಾ ವಾರಿಯರ್ಸ್ ಬಸರಾಳು ಗ್ರಾಮದಲ್ಲಿ ಪಥಸಂಚಲನ ಮಾಡುತ್ತಿದ್ದಂತೆ ಹೂಮಳೆ ಸುರಿಯುವ ಮೂಲಕ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು.
ಮಧ್ಯಾಹ್ನ ಗ್ರಾಮದಲ್ಲಿ ಪಥಸಂಚಲನ ಮಾಡುತ್ತಿದ್ದಂತೆ ಪ್ರತಿಯೊಂದು ರಸ್ತೆಯಲ್ಲೂ ಜನರು ಹೂಮಳೆ ಸುರಿಯುವ ಮೂಲಕ ಹೃದಯ ಸ್ಪರ್ಶಿಯಾಗಿ ಅಭಿನಂದಿಸಿದರು. ಗ್ರಾಮದ ಪೊಲೀಸ್ ಠಾಣೆಯಿಂದ ನಾಗಮಂಗಲ ರಸ್ತೆಯಲ್ಲಿ ಪಥಸಂಚಲನ ಮಾಡಿದ ಪೊಲೀಸರು, ಕೊರೊನಾ ಸಂಬಂಧ ಜಾಗೃತಿ ಮೂಡಿಸಿದರು.
ಇನ್ನು ಗ್ರಾಮಸ್ಥರ ಸ್ವಾಗತಕ್ಕೆ ಪೊಲೀಸರು ಫಿದಾ ಆಗಿದ್ದು, ಅಭಿನಂದನೆ ಸಲ್ಲಿಸಿದರು. ಮುಂದೆಯೂ ಇನ್ನೂ ಕಟ್ಟುನಿಟ್ಟಾಗಿ ಜಾಗೃತಿ ಮೂಡಿಸುವ ಭರವಸೆ ನೀಡಿದರು.