ETV Bharat / state

ಒಂದೇ ವರ್ಷದಲ್ಲಿ 3 ಮಕ್ಕಳ ಸಾವು, ಹೆಗಲಿಗೆ ಬಿತ್ತು ಸೊಸೆ-ಮೊಮ್ಮಕ್ಕಳ ಜವಾಬ್ದಾರಿ: ಮನೆಗಾಗಿ ವೃದ್ಧೆಯ ಅಳಲು - ಮೊಮ್ಮಕ್ಕಳ ಜೀವನದ ಜವಾಬ್ದಾರಿ ಹೊತ್ತಿರುವ ಅಜ್ಜಿ

ಸಣ್ಣದೊಂದು ಪೆಟ್ಟಿಗೆ ಅಂಗಡಿಯಿಂದ ಬರುವ ಆದಾಯದಲ್ಲಿ ತನ್ನ ಸೊಸೆ, ಮೊಮ್ಮಕ್ಕಳ ಜೀವನದ ಜವಾಬ್ದಾರಿಯೂ ಇವರದ್ದೇ.!

Old woman Sarojamma
ವೃದ್ಧೆ ಸರೋಜಮ್ಮ
author img

By

Published : Feb 7, 2023, 5:17 PM IST

ಮಂಡ್ಯ: ಈಕೆ ಸರೋಜಮ್ಮ. ಮೂರು ತಿಂಗಳಿಗೆ ಒಬ್ಬರಂತೆ ಒಂದೇ ವರ್ಷದಲ್ಲಿ ಮೂವರು ಮಕ್ಕಳನ್ನು ಕಳೆದುಕೊಂಡ ವೃದ್ಧೆ. ತನ್ನ ಮಕ್ಕಳ ಆಶ್ರಯದಲ್ಲಿರಬೇಕಾದಾಗ ಇಳಿವಯಸ್ಸಲ್ಲಿ ಮೊಮ್ಮಕ್ಕಳಿಗೆ ಬದುಕು ಕಟ್ಟಿಕೊಡುತ್ತಿದ್ದಾರೆ. ತಲೆ ಮೇಲೊಂದು ಸೂರಿಲ್ಲ. ಆದರೆ ಬದುಕಬೇಕಲ್ಲ?. ಪೆಟ್ಟಿಗೆ ಅಂಗಡಿಯಲ್ಲಿ ಪೇಪರ್, ಹಾಲು ಮಾರುತ್ತಾರೆ.

ಜೀವನದ ಸಂಧ್ಯಾಕಾಲದಲ್ಲೂ ಸ್ವಾಭಿಮಾನವನ್ನೇ ಉಸಿರಾಡುತ್ತಿದ್ದಾರೆ. ಆದರೂ ತನ್ನ ಅಸಹಾಯಕತೆಗೆ ಕೆಲವೊಮ್ಮೆ ಮರುಗುತ್ತಾರೆ. ಮಂಡ್ಯದ ನೂರಡಿ ರಸ್ತೆಯ ವಾಟರ್ ಟ್ಯಾಂಕ್ ಬಳಿಯ ಪೆಟ್ಟಿಗೆ ಅಂಗಡಿಯೇ ಈಕೆಯ ಬದುಕಿಗಾಸರೆ. ಮೂಲತಃ ಟಿ.ನರಸೀಪುರದವರು. 50-60 ವರ್ಷಗಳ ಹಿಂದೆ ಮಂಡ್ಯಕ್ಕೆ ಬಂದು ನೆಲೆಸಿದ್ದಾರೆ. ಇವರಿಗೆ ಮೂವರು ಗಂಡು ಮಕ್ಕಳಿದ್ದರು. ಓರ್ವ ಕುಮಾರ್ ಎಂಬಾತ ವಿಶೇಷಚೇತನ. ವಿಶೇಷಚೇತನನಾದರೂ ನನ್ನಂತೆ ಅಂಗವೈಕಲ್ಯದಿಂದ ನರಳುತ್ತಿದ್ದ ಬೇರೆಯವರ ಕಷ್ಟ-ಕಾರ್ಪಣ್ಯಕ್ಕೆ ಸದಾ ತುಡಿಯುತ್ತಿದ್ದ ಜೀವವದು. ದೇಹದ ಅಂಗಾಗಗಳು ಸರಿ ಇದ್ದಿದ್ರೆ, ಮದುವೆಯಾಗಿ ಕುಟುಂಬ, ಸಂಸಾರ ಅಂತಿ ಇರ್ತಿದ್ರು. ಮಗನಿಗೆ ಸದಾ ಆಸರೆಯಾಗಿದ್ದವರು ಸರೋಜಮ್ಮ. ವಿಶೇಷಚೇತನ ಪುತ್ರನಿಗೆ ಸ್ಥಳೀಯಾಡಳಿತ ಪೆಟ್ಟಿಗೆ ಅಂಗಡಿ ಕೊಟ್ಟಿತು. ಆತನಿಗೆ ಬರುತ್ತಿದ್ದ ಮಾಸಾಶನ ಮತ್ತು ಅಂಗಡಿ ವ್ಯಾಪಾರದಲ್ಲೇ ತಾಯಿ-ಮಗನ ಜೀವನ ಸಾಗುತಿತ್ತು. ಆದರೆ, ಕಳೆದ ಒಂದೂವರೆ ವರ್ಷದಿಂದ ಸರೋಜಮ್ಮನವರ ಮೂವರು ಮಕ್ಕಳು ಮೂರು ತಿಂಗಳಿಗೆ ಒಬ್ಬರಂತೆ ಪ್ರಾಣ ಕಳೆದುಕೊಂಡಿದ್ದಾರೆ.

ಸೊಸೆ, ಮೊಮ್ಮಕ್ಕಳ ಜವಾಬ್ದಾರಿ: ಮೂವರು ಮಕ್ಕಳ ಅಕಾಲಿಕ ಸಾವು ಸರೋಜಮ್ಮನವರ ಜೀವನವನ್ನು ನರಕ ಮಾಡಿತು. ದೈಹದ ಶಕ್ತಿ ಕುಂದುವ ಹೊತ್ತಲ್ಲಿ ಮಕ್ಕಳು, ಸೊಸೆ ಮತ್ತು ಮೊಮ್ಮಕ್ಕಳ ಆಶ್ರಯದಲ್ಲಿ ದಿನ ಕಳೆಯಬೇಕಾದ ವೃದ್ಧೆಗೆ ಕುಟುಂಬ ನಿರ್ವಹಣೆಯ ಜವಾಬ್ದಾರಿಯ ಭಾರ ಬಿತ್ತು. ಮಕ್ಕಳ ಆದಾಯದಲ್ಲಿ ಬಾಡಿಗೆ ಮನೆ, ಸಂಸಾರ ಅಂತಾ ಸಾಗುತ್ತಿತ್ತು. ಆದ್ರೀಗ ಮೂವರು ಮಕ್ಕಳ ಅಗಲಿಕೆಯಿಂದಾಗಿ ಸೊಸೆ ಮತ್ತು ಮೊಮ್ಮಕ್ಕಳ ಜವಾಬ್ದಾರಿಯನ್ನೂ ಹೊರುತ್ತಿದ್ದಾರೆ.

ಇದೀಗ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಇವರದ್ದು. ಆಸರೆ ಇಲ್ಲದೇ ಸೂರಿಗೂ ಪರಿತಪಿಸುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ಪೆಟ್ಟಿ ಅಂಗಡಿಯಲ್ಲೇ ವ್ಯಾಪಾರ ಮಾಡಿ, ರಾತ್ರಿ ಅದರಲ್ಲೇ ಇವರ ಜೀವನ. ನಮಗೊಂದು ಮನೆ ಕಟ್ಟಿ ಕೊಡಿ ಅಂತ ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿ ಅಂಗಲಾಚುತ್ತಿದ್ದಾರೆ. ಸ್ವಂತದ್ದೊಂದು ಸೂರು, ಸೊಸೆ ಮತ್ತು ಮೊಮ್ಮಕ್ಕಳ ಭವಿಷ್ಯಕ್ಕಾಗಿ ಹಾತೊರೆಯುತ್ತಿರುವ ವೃದ್ಧೆಗೆ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ನೆರವಾಗಲಿ.

ಇದನ್ನೂ ಓದಿ: ಮೃತಪಟ್ಟ 109 ವರ್ಷದ ವೃದ್ಧೆ ಮತ್ತೆ ಜೀವಂತ; ನೆಚ್ಚಿನ ಚಾಟ್‌ ತಿಂದು ಮಾತು ಶುರು ಮಾಡಿದ ಅಜ್ಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.