ಮಂಡ್ಯ: ಚಿರತೆ ದಾಳಿ ಮಾಡಿ ಕರುವನ್ನು ತಿಂದು ಹಾಕಿರುವ ಘಟನೆ ಮಂಡ್ಯ ತಾಲ್ಲೂಕಿನ ಬಂಕಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕುಮಾರ್ ಎಂಬುವವರ ಮನೆಯ ಕೊಟ್ಟಿಗೆಗೆ ದಾಳಿ ಮಾಡಿದ ಚಿರತೆ ಕಟ್ಟಿ ಹಾಕಿದ್ದ ಕರುವನ್ನು ತಿಂದಿದೆ. ರಾತ್ರಿ ಗ್ರಾಮದಲ್ಲೇ ಸಂಚಾರ ಮಾಡಿರುವ ಚಿರತೆ, ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.
ಕೆಲವು ದಿನಗಳಿಂದ ಚಿರತೆ ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದನ್ನ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.