ETV Bharat / state

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸದ್ಬಳಕ್ಕೆಯಲ್ಲಿ ಮಂಡ್ಯ ಫಸ್ಟ್

author img

By

Published : Apr 1, 2022, 9:26 PM IST

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಾಧನಾ ಸಮಾವೇಶ ನೆರವೇರಿತು.

Mandya First in Dharmasthala Rural Development Project
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸದ್ಬಳಕ್ಕೆಯಲ್ಲಿ ಮಂಡ್ಯ ಫಸ್ಟ್

ಮಂಡ್ಯ: ಕ್ಷೇತ್ರ ಧರ್ಮಸ್ಥಳ ಕೇವಲ ಧಾರ್ಮಿಕ ಕ್ಷೇತ್ರಕ್ಕಷ್ಟೇ ಸೀಮಿತವಾಗಿಲ್ಲ. ಮಹಿಳಾ ಸಬಲೀಕರಣ ಮತ್ತು ಗ್ರಾಮಾಭಿವೃದ್ದಿ ನಿಟ್ಟಿನಲ್ಲೂ ನಿರಂತರ ಸೇವೆ ಮಾಡುತ್ತಿದೆ. ಅದನ್ನ ಸದ್ಭಳಕೆ ಮಾಡಿಕೊಳ್ಳುವಲ್ಲಿ ಸಕ್ಕರೆ ನಾಡು ಮಂಡ್ಯ ಪ್ರಥಮ ಸ್ಥಾನದಲ್ಲಿದೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೂಲಕ ಸಾಲ ಸೌಲಭ್ಯಗಳನ್ನು ಪಡೆದಂತಹ ಮಂಡ್ಯ ಜನರು ಅದನ್ನು ಶಿಸ್ತು ಬದ್ದವಾಗಿ ಮರುಪಾವತಿಸುವ ಮೂಲಕ, ತಮ್ಮ ಆರ್ಥಿಕ ಸ್ಥಿತಿ ಸುಧಾರಣೆ ಜೊತೆಗೆ ಸಂಘದ ಅಭ್ಯುದಯಕ್ಕೂ ಪೂರಕವಾಗಿದ್ದಾರೆ‌.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಾಧನಾ ಸಮಾವೇಶ ಮತ್ತು ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಜಿಲ್ಲೆಯ 2 ಲಕ್ಷಕ್ಕೂ ಅಧಿಕ ಜನರು ಸಂಘದಿಂದ 710 ಕೋಟಿಯಷ್ಟು ಹಣವನ್ನು ಸಾಲವಾಗಿ ಪಡೆದು ಮರುಪಾವತಿ ಮಾಡಿದ್ದಾರೆ. ಈ ಮೂಲಕ ಸಂಘದಲ್ಲಿ 94 ಕೋಟಿಯಷ್ಟು ಹಣವನ್ನ ಉಳಿತಾಯ ಮಾಡಿದ್ದಾರೆ. ಇಲ್ಲಿಯ ಜನ ಸಾಲವನ್ನು ಶೂಲ ಮಾಡಿಕೊಳ್ಳದೇ ಸದ್ಭಳಕೆ ಮಾಡಿರುವುದು ಶ್ಲಾಘನೀಯ ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರಿಗೆ ಬೆಳ್ಳಿ ಕಿರೀಟವನ್ನು ಸಮರ್ಪಿಸಿ ಮಾತನಾಡಿದ ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ರಾಜ್ಯಾದ್ಯಂತ ಗ್ರಾಮೀಣ ಭಾಗದ‌ ಜೀವ ಜಲವಾಗಿರುವ ಕೆರೆಗಳ ಅಭಿವೃದ್ದಿಗೆ ಕೈಗೊಂಡಿರುವ ಕಾರ್ಯಕ್ರಮಗಳು ಮಾದರಿಯಾಗಿದೆ. ಇದು ರೈತಾಪಿ ವರ್ಗದ ಸಂಕಷ್ಟ ನಿವಾರಣೆಗೆ ಸಹಕಾರಿಯಾಗಿದೆ ಎಂದರು.

ಇದನ್ನೂ ಓದಿ: ಕಾಪೋರೇಟ್ ಹಿಡಿತದಲ್ಲಿ ಭಾರತದ ಮಾಧ್ಯಮ ನರಳುತ್ತಿದೆ: ಪಿ.ಸಾಯಿನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.