ಮಂಡ್ಯ: ಜಿಲ್ಲೆಯಲ್ಲಿ ಬ್ಯಾಂಕ್‌ಗಳು ಸದ್ದಿಲ್ಲದೇ ರೈತರ ಗಿರವಿ ಆಭರಣಗಳನ್ನು ಹರಾಜು ಹಾಕುತ್ತಿವೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.
ರೈತರ ಚಿನ್ನಾಭರಣಗಳನ್ನು ಕಾನೂನಾತ್ಮಕವಾಗಿಯೇ ಹರಾಜು ಹಾಕಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ದಿನ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಹರಾಜು ಹಾಕಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಕೇಂದ್ರ ಸರ್ಕಾರವೇ ಸಾಲ ಮರುಪಾವತಿಗೆ ನಿಯಮ ಸಡಿಲಿಸಿದ್ದು, ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.