ಮಂಡ್ಯ: ಕೊರೊನಾ ಆತಂಕ ಕಡಿಮೆಯಾಗಿ ಈಗಷ್ಟೇ ಚೇತರಿಸಿಕೊಳ್ತಿದ್ದ ಹೈನುಗಾರಿಕೆ(Dairy farming) ನಂಬಿದ ರೈತರಿಗೆ ಇದೀಗ ಮನ್ಮುಲ್(manmul) ಶಾಕ್ ನೀಡಿದೆ. ನಷ್ಟದ ಕಾರಣ ನೀಡಿ, ರೈತರಿಂದ ಖರೀದಿ ಮಾಡ್ತಿದ್ದ ಹಾಲಿಗೆ ಪ್ರತಿ ಲೀ.ಗೆ 2 ರೂ, ಕಡಿಮೆ ಮಾಡಿರೋದು ಹೈನುಗಾರಿಕೆ ನಂಬಿದವರಿಗೆ ಮತ್ತಷ್ಟು ಸಂಕಷ್ಟಕ್ಕೀಡುಮಾಡಿದೆ.
![mandya farmers outrage on manmul due to revision of milk price](https://etvbharatimages.akamaized.net/etvbharat/prod-images/13610311_dhfgrbgfg.jpg)
ಜಿಲ್ಲೆಯಲ್ಲಿ ಹೈನುಗಾರಿಕೆ ನಂಬಿ ಹೆಚ್ಚಿನವರು ತಮ್ಮ ಜೀವನ ನಡೆಸುತ್ತಿದ್ದಾರೆ. ಆದರೆ, ಹಾಲನ್ನು ಕೊಂಡುಕೊಳ್ಳುತ್ತಿದ್ದ ಮಂಡ್ಯ ಹಾಲು ಒಕ್ಕೂಟ ರೈತರಿಂದ ಖರೀದಿ ಮಾಡ್ತಿದ್ದ ಪ್ರತಿ ಲೀಟರ್ ಹಾಲಿಗೆ 2 ರೂ. ದರ ಕಡಿತ(milk price) ಮಾಡಿದೆ. ಇದು ಜಿಲ್ಲೆಯಲ್ಲಿ ಹೈನುಗಾರಿಕೆ ನಂಬಿದ ರೈತರ ಬದುಕಿಗೆ ಬರೆ ಎಳೆದಂತಾಗಿದೆ.
ಆದ್ರೆ ಮನ್ಮುಲ್ನ ಆಡಳಿತ ಮಂಡಳಿಯವರು, ಹಾಲು ಮಾರಾಟವಾಗದೇ ನಮಗೆ ನಷ್ಟವಾಗ್ತಿದೆ. ಆ ಕಾರಣಕ್ಕೆ ರೈತರಿಂದ ಕೊಳ್ಳುವ ಹಾಲಿಗೆ 2 ರೂ. ದರ ಕಡಿತ ಮಾಡಿದ್ದೇವೆಂದು ಸಮರ್ಥಿಸಿಕೊಳ್ಳುತ್ತಿದ್ದು, ರೈತರು ಸಹಕರಿಸಿ ಎನ್ನುತ್ತಿದ್ದಾರೆ.
ಇದನ್ನೂ ಓದಿ: ವಿಟ್ಲ ಯುವತಿ ಆತ್ಮಹತ್ಯೆ ಪ್ರಕರಣ: ಡೆತ್ ನೋಟ್ ಆಧರಿಸಿ ನಾಲ್ವರ ವಿರುದ್ಧ ಪ್ರಕರಣ
ಮನ್ಮುಲ್‌ನಲ್ಲಿ ನಡೆದಿರೋ ಕೋಟ್ಯಂತರ ರೂ. ಹಗರಣದ ನಷ್ಟವನ್ನು ತುಂಬಿಕೊಳ್ಳಲು ಈ ರೀತಿ ರೈತರ ಹಾಲಿನ ದರದಲ್ಲಿ ಕಡಿತ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಬೆಲೆ ಕಡಿತವನ್ನು ವಾಪಸ್ ಪಡೆಯದಿದ್ರೆ ಮನ್ಮುಲ್ ಮುಂದೆ ಹಾಲು ಉತ್ಪಾದಕ ರೈತರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.