ETV Bharat / state

ಮಂಡ್ಯದಲ್ಲಿ ಕಮಲ ಕಲಿಗಳಿಗೆ ಮತ್ತು ದಳಪತಿಗಳಿಗೆ ಭಾರಿ ಮುಖಭಂಗ: 7 ಕ್ಷೇತ್ರದಲ್ಲಿ 5ರಲ್ಲಿ ಕಾಂಗ್ರೆಸ್ ಜಯಭೇರಿ - karnataka election result

ಜೆಡಿಎಸ್​​ನ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯಲ್ಲಿ 7 ಕ್ಷೇತ್ರದಲ್ಲಿ ಕಾಂಗ್ರೆಸ್​​ 5 ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿದೆ.

7 ಕ್ಷೇತ್ರದಲ್ಲಿ 5ರಲ್ಲಿ ಕಾಂಗ್ರೆಸ್ ಜಯಭೇರಿ
ಮಂಡ್ಯದಲ್ಲಿ ಕಮಲ ಕಲಿಗಳಿಗೆ ಮತ್ತು ದಳಪತಿಗಳಿಗೆ ಭಾರಿ ಮುಖಭಂಗ: 7 ಕ್ಷೇತ್ರದಲ್ಲಿ 5ರಲ್ಲಿ ಕಾಂಗ್ರೆಸ್ ಜಯಭೇರಿ
author img

By

Published : May 13, 2023, 8:53 PM IST

Updated : May 13, 2023, 11:06 PM IST

ಮಂಡ್ಯದಲ್ಲಿ ಕಮಲ ಕಲಿಗಳಿಗೆ ಮತ್ತು ದಳಪತಿಗಳಿಗೆ ಭಾರಿ ಮುಖಭಂಗ: 7 ಕ್ಷೇತ್ರದಲ್ಲಿ 5ರಲ್ಲಿ ಕಾಂಗ್ರೆಸ್ ಜಯಭೇರಿ

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 1 ಜೆಡಿಎಸ್, 1 ರೈತ ಸಂಘ, ಹಾಗೂ 5 ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡುವ ಮೂಲಕ ಕಮಲ ಕಲಿಗಳಿಗೆ ಮತ್ತು ದಳಪತಿಗಳಿಗೆ 'ಕೈ' ನಾಯಕರು ಬಿಗ್ ಶಾಕ್ ನೀಡಿದ್ದಾರೆ.

ಜಿಲ್ಲೆಯ 7 ಕ್ಷೇತ್ರಗಳಲ್ಲಿ, ಈ ಬಾರಿ ಶತಾಯಗತಾಯ ಕನಿಷ್ಠ 4 ರಿಂದ 5 ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ, ಉತ್ತರ ಪ್ರದೇಶದ ಸಿಎಂ ಯೋಗಿ ಹಾಗೂ ಸಂಸದೆ ಸುಮಲತಾ ಸೇರಿದಂತೆ ಸ್ಟಾರ್ ಪ್ರಚಾರಕ್ಕರನ್ನ ಕರೆಸಿ ಸಾಲು ಸಾಲು ಬೃಹತ್ ಸಮಾವೇಶ, ರೋಡ್ ಶೋ ನಡೆಸಿ ಹೆಚ್ಚಿನ ಮತಗಳನ್ನು ಸೆಳೆಯಲು ತಂತ್ರಗಾರಿಕೆಯನ್ನು ರೂಪಿಸಿದ್ದರು. ಆದರೆ ಮಂಡ್ಯದಲ್ಲಿ ದೆಹಲಿ ದೊರೆಗಳ ತಂತ್ರಗಾರಿಕೆಗೆ ಸಕ್ಕರೆ ನಾಡಿನ ಮತದಾರರು ಮನ್ನಣೆ ನೀಡಲಿಲ್ಲ.

ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್, ಮದ್ದೂರು ಉದಯ್ ಗೌಡ, ಮಳವಳ್ಳಿ ಪಿಎಂ.ನರೇಂದ್ರ ಸ್ವಾಮಿ, ನಾಗಮಂಗಲ ಚಲುವರಾಯಸ್ವಾಮಿ, ಶ್ರೀರಂಗಪಟ್ಟಣ ರಮೇಶ್ ಬಾಬು ಗೆದ್ದರೇ, ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಟಿ. ಮಂಜು, ಹಾಗೂ ಮೇಲುಕೋಟೆ ಕ್ಷೇತ್ರದದಲ್ಲಿ ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಗೆಲುವು ಸಾಧಿಸಿದ್ದಾರೆ.

ಗೆಲುವಿನ ಬಳಿಕ ಮಾಧ್ಯಮದವರೊಂದಿಗೆ ಕೈ ಶಾಸಕ ಚಲುವರಾಯಸ್ವಾಮಿ ಮತಾನಾಡಿ, "ಮಂಡ್ಯ ಜನ ಬದಲಾವಣೆ ಬಯಸಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಜೆಡಿಎಸ್‌ ಶಾಸಕರು ನಡೆದುಕೊಂಡ ನಡವಳಿಕೆ ಇದಕ್ಕೆ ಕಾರಣ. ನಾವು ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಶಾಂತ ರೀತಿಯಿಂದ ವರ್ತಿಸಬೇಕು. ನಿಖಿಲ್ ಸೋಲು ನನಗೆ ನೋವು ತಂದಿದೆ. ಈ ವಯಸ್ಸಿಗೆ ಎರಡು ಸೋಲು ಆಗಬಾರದಿತ್ತು. ನನಗೆ ವೈಯಕ್ತಿಕವಾಗಿ ನೋವು ತಂದಿದೆ" ಎಂದು ಹೇಳಿದರು.

ಇದೇ ವೇಳೆ ಮೇಲುಕೋಟೆ ಕ್ಷೇತ್ರದ ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, "ಇದು ನನ್ನ ಗೆಲುವಲ್ಲ, ಜನರ ಗೆಲುವು. ಕಾಂಗ್ರೆಸ್ ಕಾರ್ಯಕರ್ತರು ರೈತ ಸಂಘದ ಕಾರ್ಯಕರ್ತರು ನನಗಾಗಿ ದುಡಿದಿದ್ದಾರೆ. ಎಲ್ಲರಿಗೂ ಸಹ ಧನ್ಯವಾದ ತಿಳಿಸುತ್ತೇನೆ ಎಂದರು. ಇತ್ತ ರಮೇಶ್ ಬಾಬು ಮಾತನಾಡಿ ನನ್ನ ಹಾಗೂ ನನ್ನ ಕುಟುಂಬದ ಮೇಲೆ ವಿಶ್ವಾಸ ಇಟ್ಟು ಆಶೀರ್ವಾದ ಮಾಡಿದ್ದಿರಿ ನಿಮ್ಮ ಜೊತೆ ನಿರಂತರವಾಗಿ ಇದ್ದು ಕೆಲಸ ಮಾಡುತ್ತಾರೆ.

ಇನ್ನೂ ಬಿಜೆಪಿ ಸರ್ಕಾರದ ಹತ್ತಾರು ಹಗರಣಗಳು, 40 ಪರ್ಸೆಂಟ್​​ ಕಮಿಷನ್, ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ವಿರುದ್ದ ತಿರುಗಿಬಿದ್ದಿದ್ದ ಜನತೆ, ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಜನಪರ ಘೋಷಣೆಗಳಿಗೆ ಜಿಲ್ಲೆಯ ಮತದಾರರು ಜೈ ಎಂದಿದ್ದಾರೆ. ಜೆಡಿಎಸ್​ ಪಕ್ಷದ ಭದ್ರಕೋಟೆಯಾಗಿದ್ದ ಮಂಡ್ಯ ಇದೀಗ ಕಾಂಗ್ರೆಸ್ ಪಕ್ಷ ವಶಪಡಿಸಿಕೊಂಡಿದೆ. ಆದರೆ ಕಮಲ ಅರಳಿಸಲು ಕಸರತ್ತು ನಡೆಸಿದ್ದ ಬಿಜೆಪಿ, ಇದೀಗ ಸೋಲನ್ನುಂಡು ರಾಷ್ಟ್ರ ಹಾಗೂ ರಾಜ್ಯ ನಾಯಕರು ಮತ್ತು ಸಂಸದೆ ಸುಮಲತಾಗೆ ಮುಖಭಂಗವಾಗಿದೆ.

ಇದನ್ನು ಓದಿ: ಕೊಪ್ಪಳದಲ್ಲಿ 3 ಕಾಂಗ್ರೆಸ್; ಬಿಜೆಪಿ, ಕೆಆರ್​ಪಿಪಿ ತಲಾ ಒಂದು ಸ್ಥಾನದಲ್ಲಿ ಗೆಲುವು

Last Updated : May 13, 2023, 11:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.