ETV Bharat / state

ಮಂಡ್ಯ ವಿದ್ಯಾರ್ಥಿನಿ ಮನೆಗೆ 'ಮಹಾ' ಕೈ ಶಾಸಕ ಭೇಟಿ: ಘೋಷಣೆ ಕೂಗಿದ್ದಕ್ಕೆ ಐಫೋನ್‌, ಸ್ಮಾರ್ಟ್‌ವಾಚ್‌ ಗಿಫ್ಟ್‌! - mla jishin siddiq visited student musthan home

ಹಿಜಾಬ್‌ ಪರ-ವಿರೋಧದ ಪ್ರತಿಭಟನೆ ವೇಳೆ ಘೋಷಣೆ ಕೂಗಿದ ಮಂಡ್ಯ ವಿದ್ಯಾರ್ಥಿನಿ ಮುಸ್ಕಾನ್ ಮನೆಗೆ ಮಹಾರಾಷ್ಟ್ರ ರಾಜ್ಯದ ಬಾಂದ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೀಶನ್ ಸಿದ್ದಿಕ್ ಭೇಟಿ ನೀಡಿದ್ದಾರೆ.

Maharashtra Congress MLA visits mandya student musthan's residence
ದ್ಯಾರ್ಥಿನಿ ಮುಸ್ಕಾನ್ ಮನೆಗೆ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ಭೇಟಿ
author img

By

Published : Feb 11, 2022, 1:32 PM IST

Updated : Feb 11, 2022, 1:49 PM IST

ಮಂಡ್ಯ: 'ಅಲ್ಲಾಹು ಅಕ್ಬರ್​' ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಮನೆಗೆ ಮಹಾರಾಷ್ಟ್ರ ರಾಜ್ಯದ ಬಾಂದ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೀಶನ್ ಸಿದ್ದಿಕ್ ಭೇಟಿ ನೀಡಿದ್ದಾರೆ. ಹಿಜಾಬ್-ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿದ ಶಾಸಕ, ಮುಸ್ಕಾನ್​​ಗೆ ಐಫೋನ್​, ಸ್ಮಾರ್ಟ್ ವಾಚ್ ಉಡುಗೊರೆ ನೀಡಿದರು.

ಕೇಸರಿ ಶಾಲು ಧರಿಸಿದ್ದ ನೂರಾರು ವಿದ್ಯಾರ್ಥಿಗಳ ಮುಂದೆ ವಿದ್ಯಾರ್ಥಿನಿ ಮುಸ್ಕಾನ್ ಧಾರ್ಮಿಕ ಘೋಷಣೆ ಕೂಗಿದ್ದರು. ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವ ಮುಸ್ಕಾನ್ ನಿವಾಸಕ್ಕೆ ಭೇಟಿ ಕೊಟ್ಟ ಶಾಸಕ ಜೀಶನ್ ಸಿದ್ದಿಕ್ ಕುಟುಂಬಸ್ಥರಿಗೆ ಧೈರ್ಯ ಹೇಳಿ, ಅವರ ಜೊತೆ ಇರುವ ಭರವಸೆ ನೀಡಿದರು.

ಇದನ್ನೂ ಓದಿ: ಮಂಡ್ಯದಲ್ಲಿ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಬಹುಮಾನ ನೀಡಿದ ಮುಸ್ಲಿಂ ಸಂಘಟನೆ ವಿರುದ್ಧ ದೂರು

ನಂತರ ಮಾತನಾಡಿದ ಶಾಸಕ, ಈ ಬಗ್ಗೆ ನನಗೆ ಮಾಧ್ಯಮಗಳಿಂದ ಗೊತ್ತಾಯ್ತು. ಆಗ ಬಹಳ ಗರ್ವ ಅನಿಸಿತು. ಅಷ್ಟು ಜನ ಎದುರಿದ್ದರೂ ವಿದ್ಯಾರ್ಥಿನಿ ಅಲ್ಲಾ ಹು ಅಕ್ಬರ್ ಅಂತಾ ಕೂಗಿದ್ದಾರೆ. ಹಿಜಾಬ್ ಹಾಕಿಕೊಳ್ಳೋದು ಅವರ ಹಕ್ಕು. ಅವರ ಹಕ್ಕಿನ ಬಗ್ಗೆ ಧೈರ್ಯದಿಂದ ದನಿ ಎತ್ತಿದ್ದಾರೆ. ಮಂಡ್ಯದಿಂದ ಇಂಡಿಯಾವರೆಗೂ ಆಕೆ ಬಗ್ಗೆ ಜನರು ಹೆಮ್ಮೆ ಪಡುತ್ತಿದ್ದಾರೆ. ಎಲ್ಲಾ ಮಹಿಳೆಯರು ಈ ವಿದ್ಯಾರ್ಥಿನಿ ರೀತಿ ಧೈರ್ಯದಿಂದ ಸಮಾಜವನ್ನು ಎದುರಿಸಬೇಕು ಎಂದು ಹೇಳಿದರು.

Last Updated : Feb 11, 2022, 1:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.