ETV Bharat / state

ಪ್ರತಿಷ್ಠೆಯ ಕಣ ಮಂಡ್ಯ ಮತದಾನದಲ್ಲೂ ಮುಂದು... ಸಕ್ಕರೆ ನಾಡಿನ ಗ್ರೌಂಡ್​ ರಿಪೋರ್ಟ್​

ಇಂದು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪೂರ್ಣಗೊಂಡಿದೆ. ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಸದ್ದು ಮಾಡಿದ್ದ ಸಕ್ಕರೆ ನಾಡಲ್ಲಿ ಶಾಂತಿಯುತವಾಗಿ ಅಧಿಕ ಪ್ರಮಾಣದಲ್ಲಿ ಮತದಾನವಾಗಿದೆ. ಇದೇ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ ದಾಖಲಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು
author img

By

Published : Apr 18, 2019, 9:45 PM IST

ಮಂಡ್ಯ: ಇಂದು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯಿತು. ಪ್ರತಿಷ್ಠೆಯ ಕಣ ಸಕ್ಕರೆ ಜಿಲ್ಲೆಯಲ್ಲಿ ಅತ್ಯಧಿಕ ಮತದಾನ ಆಗಿದೆ. ಈ ವೇಳೆ ಕೆಲವೊಂದು ಅಹಿತಕರ ಘಟನೆಗಳು ಜರುಗಿದ್ದು ಬಿಟ್ಟರೆ ಬಹುತೇಕ ಶಾಂತಿಯುತ ಮತದಾನವಾಗಿದೆ. ಈ ಕುರಿತ ಒಂದು ರಿಪೋರ್ಟ್​ ಇಲ್ಲಿದೆ...

ಮಂಡ್ಯದಲ್ಲಿ ನಡೆದ ಪ್ರಮುಖ ಘಟನೆಗಳ ಕುರಿತ ಮಾಹಿತಿ

ಸುಮಲತಾ ಮತ್ತು ನಿಖಿಲ್​ ಅಭಿಮಾನಿಗಳ ನಡುವೆ ಗಲಾಟೆ:
ಮದ್ದೂರು ತಾಲೂಕಿನ ದೊಡ್ಡ ಅರಸಿನಕೆರೆಯಲ್ಲಿ ಅಂಬಿ ಅಭಿಮಾನಿಗಳು ಹಾಗೂ ನಿಖಿಲ್ ಅಭಿಮಾನಿಗಳ ನಡುವೆ ಗಲಾಟೆ ನಡೆಯಿತು. ನಿಖಿಲ್ ಕುಮಾರಸ್ವಾಮಿ ಎದುರೇ ಗಲಾಟೆ ನಡೆದಿದ್ದು, ಸುಮಲತಾ ಬೆಂಬಲಿಗರ ಮೇಲೆ ಹಲ್ಲೆ ನಡೆದು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತವಾಗಿಸಿದರು.

ಮತದಾನ ಮಾಡಿದ ಅಯ್ಯಪ್ಪ ಮಾಲಾಧಾರಿಗಳು:
ಇನ್ನು ಮಳವಳ್ಳಿ ತಾಲೂಕಿನ ಚಿಕ್ಕ ಮುಲಗೂಡು ಗ್ರಾಮದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಮೊದಲು ಮತ ಚಲಾವಣೆ ಮಾಡಿ ಶಬರಿಮಲೆಯತ್ತ ಹೊರಟಿದ್ದು, ವಿಶೇಷವಾಗಿತ್ತು. ಇವರಲ್ಲಿ 60 ಮಂದಿ ಮಾಲಾಧಾರಿಗಳು ಮತದಾನದಲ್ಲಿ ಪಾಲ್ಗೊಂಡಿದ್ದರು.

Mandya
ಮತದಾನ ಮಾಡಿದ ಅಯ್ಯಪ್ಪ ಮಾಲಾಧಾರಿಗಳು

ಮತದಾನ ಮಾಡಿದ ಪ್ರಮುಖರೆಂದರೆ:
ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್, ಸಚಿವರಾದ ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಸಂಸದ ಶಿವರಾಮೇಗೌಡ ಮತ್ತು ಐವರು ಶಾಸಕರು, ಇಬ್ಬರು ಪರಿಷತ್ ಸದಸ್ಯರು ಮಂಡ್ಯದಲ್ಲಿ ಹಕ್ಕನ್ನು ಚಲಾಯಿಸಿದರು‌.

Mandya
ಮತದಾನ ಮಾಡಿದ ಶಿವರಾಮೇಗೌಡ ಕುಟುಂಬ

ಕೆಲಕಾಲ ಕೈಕೊಟ್ಟ ಮತ ಯಂತ್ರಗಳು:
ಕೆಲವೆಡೆ ಮತಯಂತ್ರ ದೋಷದಿಂದ ಮತದಾನ ತಡವಾಗಿ ಆರಂಭವಾಯಿತು. ಮತ್ತೆ ಕೆಲವೆಡ ಮತಯಂತ್ರಗಳ ಸ್ಥಳಾಂತರ ಮಾಡಿದ್ದರಿಂದ ಮತದಾರರಲ್ಲಿ ಗೊಂದಲ ಮೂಡಿಸಿತ್ತು.‌ ಕೊನೆಗೆ ಚುನಾವಣಾಧಿಕಾರಿಗಳು ಗೊಂದಲವನ್ನು ಸರಿಡಪಿಸಿದರು.

ಮತ ಚಲಾಯಿಸಿದ ಗರ್ಭಿಣಿ ಮಹಿಳೆ:

ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದ ಗೀತಾ ಎಂಬ ಗರ್ಭಿಣಿ ಮತದಾನ ಮಾಡಿದ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದಳು.

ಇನ್ನು ಕೆ.ಆರ್.ಎಸ್‌ನಲ್ಲಿ ಪತಿಯ ಅಂತ್ಯ ಸಂಸ್ಕಾರದ ನಂತರ ಮತದಾನ ಮಾಡಿ ಮತದ ಮೌಲ್ಯವನ್ನು ಗೃಹಿಣಿ ಹೆಚ್ಚಿಸಿದರು‌.

ದಿವ್ಯಾಂಗ ಚೇತನರಿಗಾಗಿಯೇ ಬ್ರೈಲ್ ಲಿಪಿಯನ್ನು ಮತ ಯಂತ್ರಕ್ಕೆ ಅಳವಡಿಸಿದ್ದರೂ ಎರಡೂ ಯಂತ್ರದಲ್ಲಿ ಒಂದೇ ರೀತಿಯ ನಂಬರ್ ಇದ್ದದ್ದು ಗೊಂದಲ ಮೂಡಿಸಿತ್ತು. ಕೊನೆಗೆ ಅಧಿಕಾರಿಗಳ ಸಹಾಯದಿಂದ ವೋಟಿಂಗ್​ ಮಾಡಿಸಲಾಯಿತು.‌

Intro:ಮಂಡ್ಯ: ದೇಶದ ಗಮನ ಸೆಳೆದಿದ್ದ ಸಕ್ಕರೆ ಜಿಲ್ಲೆಯ ಲೋಕಸಭಾ ಚುನಾವಣೆ ಅತ್ಯಧಿಕ ಮತದಾನ ನಡೆಯುವ ಮೂಲಕ ಮುಗಿದಿದೆ. ಅಂಬಿ ತವರು ದೊಡ್ಡ ಅರಸಿನಕೆರೆಯಲ್ಲಿ ಕೈ ಕೈ ಮಿಲಾಯಿಸಿದ ಘಟನೆ ಹೊರತುಪಡಿಸಿದರೆ, ಬಹುತೇಕ ಶಾಂತಿಯುತವಾಗಿದೆ.‌
ಮದ್ದೂರು ತಾಲೂಕಿನ ದೊಡ್ಡ ಅರಸಿನಕೆರೆಯಲ್ಲಿ ಅಂಬಿ ಅಭಿಮಾನಿಗಳು ಹಾಗೂ ನಿಖಿಲ್ ಅಭಿಮಾನಿಗಳ ನಡುವೆ ಗಲಾಟೆ ನಡೆಯಿತು. ನಿಖಿಲ್ ಕುಮಾರಸ್ವಾಮಿ ಎದುರೇ ಗಲಾಟೆ ನಡೆದು, ಸುಮಲತಾ ಬೆಂಬಲಿಗರ ಮೇಲೆ ಹಲ್ಲೆ ನಡೆದು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ಶಾಂತವಾಯಿತು.
ಮಳವಳ್ಳಿ ತಾಲ್ಲೂಕಿನ ಚಿಕ್ಕ ಮುಲಗೂಡು ಗ್ರಾಮದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಮೊದಲು ಮತ ಚಲಾವಣೆ ಮಾಡಿ, ಶಬರಿಮಲೆಯತ್ತ ಹೊರಟರು. ಮತದಾನದಲ್ಲಿ 60 ಮಂದಿ ಮಾಲಾಧಾರಿಗಳು ಪಾಲ್ಗೊಂಡಿದ್ದರು.
ಮತದಾನ ಮಾಡಿದ ಪ್ರಮುಖರೆಂದರೆ ಸುಮಲತಾ ಅಂಬರೀಶ್, ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಶಿವರಾಮೇಗೌಡ ಸೇರಿದಂತೆ ಐವರು ಶಾಸಕರು, ಇಬ್ಬರು ಪರಿಷತ್ ಸದಸ್ಯರು ಹಕ್ಕನ್ನು ಚಲಾಯಿಸಿದರು‌.
ಕೆಲವು ಕಡೆ ಮತಯಂತ್ರ ದೋಷದಿಂದ ಮತದಾನ ತಡವಾಗಿ ಆರಂಭವಾಯಿತು. ಮತ್ತೆ ಕೆಲವು ಕಡೆ ಮತಯಂತ್ರಗಳ ಸ್ಥಳಾಂತರ ಮತದಾರರಲ್ಲಿ ಗೊಂದಲ ಮೂಡಿಸಿತ್ತು.‌ ಕೊನೆಗೆ ಚುನಾವಣಾಧಿಕಾರಿಗಳು ಗೊಂದಲವನ್ನು ನಿವಾರಣೆ ಮಾಡಿದರು.
ಪಾಂಡವಪುರ ತಾಲ್ಲೂಕಿನ ಚಿಕ್ಕಮರಳಿ ಗ್ರಾಮದ ಗೀತಾ ಎಂಬ ಗರ್ಭಿಣಿ ಮತದಾನ ಮಾಡಿದ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆಯಿತು. ಕೆ.ಆರ್.ಎಸ್‌ನಲ್ಲಿ ಪತಿಯ ಅಂತ್ಯ ಸಂಸ್ಕಾರದ ನಂತರ ಮತದಾನ ಮಾಡಿ ಮತದ ಮೌಲ್ಯವನ್ನು ಗೃಹಿಣಿ ಹೆಚ್ಚಿಸಿದರು‌.
ದಿವ್ಯಾಂಗ ಚೇತನರಿಗಾಗಿಯೇ ಬ್ರೈಲ್ ಲಿಪಿಯನ್ನು ಮತ ಯಂತ್ರಕ್ಕೆ ಅಳವಡಿಸಿದ್ದರೂ ಎರಡೂ ಯಂತ್ರದಲ್ಲಿ ಒಂದೇ ರೀತಿಯ ನಂಬರ್ ಇದ್ದದ್ದು ಗೊಂದಲ ಮೂಡಿಸಿತ್ತು. ಕೊನೆಗೆ ಮತದಾಧಿಕಾರಿಗಳ ಸಹಾಯದಿಂದ ಮತದಾನ ಮಾಡಲಾಯಿತು.‌Body:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.