ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಳ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನ ಒಳ ಹರಿವು ಹೆಚ್ಚಳವಾಗಿದೆ. ಮಂಗಳವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 82.44 ಅಡಿ ತಲುಪಿದ್ದು, 6,379 ಕ್ಯೂಸೆಕ್ ನೀರು ಹರಿದು ಬಂದಿದೆ.
ಸೋಮವಾರ 1,228 ಕ್ಯೂಸೆಕ್ ಇದ್ದ ಒಳಹರಿವು, ಒಂದೇ ದಿನಕ್ಕೆ 5,151 ಕ್ಯೂಸೆಕ್ಗೆ ಹೆಚ್ಚಳವಾಗಿರುವುದರಿಂದ ರೈತರಲ್ಲಿ ಮೊಗದಲ್ಲಿ ಮಂದಹಾಸ ಮೂಡಿದೆ. ಅಣೆಕಟ್ಟಿನ ಗರಿಷ್ಠ ಮಟ್ಟ 124.80 ಅಡಿ. ಪ್ರಸ್ತುತ ನೀರಿನ ಇಂದಿನ ಮಟ್ಟ -82.44 ಅಡಿ ಇದೆ. ಒಳಹರಿವು - 6,379 ಕ್ಯೂಸೆಕ್ ಆಗಿದೆ ಮತ್ತು ಹೊರ ಹರಿವು -353 ಕ್ಯೂಸೆಕ್ ಇದೆ.
ಮಂಡ್ಯ, ಮೈಸೂರು ಜಿಲ್ಲೆಯ ರೈತರು ಕೆಎಸ್ಆರ್ಎಸ್ ಜಲಾಶಯದ ನೀರನ್ನು ಅವಲಂಬಿಸಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಈ ಬಾರಿ ನಿರೀಕ್ಷೆಯ ಸಮಯಕ್ಕಿಂತ ಮೊದಲೇ ಜಲಾಶಯದಲ್ಲಿ ನೀರು ಹೆಚ್ಚಳವಾಗಿರುವುದು ರೈತರಿಗೆ ಸಂತಸ ತಂದಿದೆ.
ಇತ್ತೀಚೆಗೆ ಸಿಎಂ ಬಿಎಸ್ವೈಗೆ ಪತ್ರ ಬರೆದಿದ್ದ ಶಾಸಕ ಡಿಸಿ ತಮ್ಮಣ್ಣ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಮುನ್ನ ಕಾವೇರಿ ಜಲಾನಯದ ಪ್ರದೇಶದ ಜನಪ್ರತಿನಿಧಿಗಳ ಸಭೆ ಕರೆಯುವಂತೆ ಆಗ್ರಹಿಸಿದ್ದರು. ತಮ್ಮಣ್ಣ ಪತ್ರಕ್ಕೆ ಸಿಎಂ ಸಕಾರಾತ್ಮವಾಗಿ ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ: ಇಂದಿನಿಂದ ಐದು ದಿನಗಳ ಕಾಲ ಕೊಪ್ಪಳದಲ್ಲಿ ಭಾರಿ ಮಳೆ ಸಾಧ್ಯತೆ