ETV Bharat / state

ಮಳವಳ್ಳಿ ತಾಲ್ಲೂಕಿನಲ್ಲಿ ಶವ ಸಂಸ್ಕಾರಕ್ಕೆ ಕೋವಿಡ್-19 ಪರೀಕ್ಷೆ ಕಡ್ಡಾಯ - Malavalli

ಮಳವಳ್ಳಿಯಲ್ಲಿ ಸಹಜ ಹಾಗೂ ಅಸಹಜ ಸಾವು ಸಂಭವಿಸಿದರೂ ಕೂಡ ಶವ ಸಂಸ್ಕಾರಕ್ಕೂ ಮುನ್ನ ಕೋವಿಡ್-19 ಪರೀಕ್ಷೆ ಕಡ್ಡಾಯ ಎಂದು ಮಂಡ್ಯ ಉಪವಿಭಾಗಾಧಿಕಾರಿ ಸೂರಜ್ ಆದೇಶ ಹೊರಡಿಸಿದ್ದಾರೆ.

suraj
ಸೂರಜ್
author img

By

Published : May 2, 2020, 12:56 PM IST

ಮಂಡ್ಯ: ಜಿಲ್ಲೆಯಲ್ಲಿ ರೆಡ್ ಜೋನ್ ಆಗಿರುವ ಮಳವಳ್ಳಿ ತಾಲ್ಲೂಕಿನ ಯಾವುದೇ ಸಾವಿನ ಪ್ರಕರಣ ಕಂಡು ಬಂದರೂ ಕಡ್ಡಾಯವಾಗಿ ಕೋವಿಡ್ 19 ಪರೀಕ್ಷೆ ಮಾಡಿಸಬೇಕಾಗಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಮಂಡ್ಯ ಉಪವಿಭಾಗಾಧಿಕಾರಿ ಸೂರಜ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

order letter
ಆದೇಶ ಪ್ರತಿ

ಮಳವಳ್ಳಿ ತಹಶೀಲ್ದಾರ್​ ಹಾಗೂ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮಾರ್ಚ್ 1 ರಂದು ಆದೇಶ ಮಾಡಲಾಗಿದೆ. ಸಹಜ ಹಾಗೂ ಅಸಹಜ ಸಾವು ಸಂಭವಿಸಿದರೂ ಪರೀಕ್ಷೆ ಕಡ್ಡಾಯವಾಗಿದೆ.

ತಬ್ಲಿಘಿಗಳ ಸಂಪರ್ಕದಿಂದ ಮಳವಳ್ಳಿ ಪಟ್ಟಣದಲ್ಲಿಯೇ ಈಗಾಗಲೇ 20 ಕೊರೊನಾ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸರ್ವೆಯನ್ನೂ ಮಾಡಿಸಲು ಇಲಾಖೆ ಮುಂದಾಗಿದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.