ಮಂಡ್ಯ: ಈ ಸರ್ಕಾರ ಯಾರ ಮಾತನ್ನು ಕೇಳುವ ಸರ್ಕಾರವಲ್ಲ, ಮೊದಲೇ ಗೊಂದಲದಲ್ಲಿದೆ. ಈಗ ಶಾಲೆ ಆರಂಭ ಮಾಡ್ತಿದ್ದಾರೆ. ಏನೇ ಆದ್ರೂ ಸರ್ಕಾರವೇ ಜವಾಬ್ದಾರಿಯಾಗಬೇಕಾಗುತ್ತೆ ಎಂದು ಶಾಸಕ ಸುರೇಶ್ ಗೌಡ ಎಚ್ಚರಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಅಲೆ ರೂಪಾಂತರಗೊಂಡಿರುವ ಕೊರೊನಾ ಬರ್ತಿದೆ. ಹಿಂದೆ ಇದ್ದ ಕೊರೊನಾ ಈಗಿರುವ ಕೊರೊನಾಗೂ ಬಹಳ ವ್ಯತ್ಯಾಸ ಇದೆ. ಇದು ಬಹಳ ವೇಗವಾಗಿ ಹಬ್ಬುತ್ತಿದೆ. ಇದು ಬಹಳ ಅಪಾಯಕಾರಿಯಾದುದು ಎಂದು ಶಾಸಕರು ಹೇಳಿದರು.
ಈ ಸಮಯದಲ್ಲಿ ಮಕ್ಕಳಿಗೆ ಹೆಚ್ಚು ಕಡಿಮೆ ಆದರೆ ಯಾರು ಜವಾಬ್ದಾರಿ ಆಗ್ತಾರೆ? ಎಂದು ಪ್ರಶ್ನೆ ಮಾಡಿದ ಅವರು, ವಿಶ್ವದೆಲ್ಲಡೆ ರೋಗ ಹಬ್ಬುತ್ತಿದೆ, ಕಠಿಣ ನಿರ್ಧಾರವನ್ನ ಸರ್ಕಾರ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಮೊದಲ ತರಹ ವರ್ಷಕ್ಕೆ ಒಂದು ಸಾರಿ ಪರೀಕ್ಷೆ ಇಲ್ಲ. ಆಯ್ಕೆಗಳು ಬೇಜಾನ್ ಇದೆ. ಆನ್ಲೈನ್ನಲ್ಲಿ ಪರೀಕ್ಷೆ ಮಾಡಿದರೆ ಏನಾಗುತ್ತೆ, ಒಂದು ವರ್ಷ ವಿದ್ಯಾರ್ಥಿಗಳನ್ನ ಪಾಸ್ ಮಾಡಿದ್ರೆ ತಪ್ಪೇನು? ಎಂದು ಪ್ರಶ್ನೆ ಮಾಡಿದರು.
ತಕ್ಷಣಕ್ಕೆ ಶಾಲೆ ಪ್ರಾರಂಭ ಮಾಡುವುದು ಸರಿಯಲ್ಲ. ಸರ್ಕಾರ ಯಾರ ಮಾತನ್ನು ಕೇಳಲ್ಲ ಹೀಗಿರುವಾಗ ಅವರು ನಮ್ಮ ಸಲಹೆ ಹೇಗೆ ಪಡೆಯುತ್ತಾರೆ..? ಎಂದು ಪ್ರಶ್ನಿಸಿದರು. ಈ ಮೂಲಕ ಅವರು ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.