ETV Bharat / state

ಮಂಡ್ಯದಲ್ಲಿ ಜೆಡಿಎಸ್​ ಬಂಡಾಯ: ಸಂಧಾನಕ್ಕೆ ಮುಂದಾದ ಹೆಚ್​​ಡಿಡಿ ಪುತ್ರ ರಮೇಶ್‌ - ವಿಧಾನ ಸಭೆ ಚುನಾವಣೆ 2023

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಪಕ್ಷದಲ್ಲಿ ಎದ್ದಿರುವ ಅಸಮಾಧಾನದ ಬಗ್ಗೆ ಸಂಧಾನ ನಡೆಸಲು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಪುತ್ರ ಡಾ.ರಮೇಶ್‌ ಎಂಟ್ರಿ ಕೊಟ್ಟಿದ್ದು, ಶಾಸಕ ಎಂ.ಶ್ರೀನಿವಾಸ್‌ ಜತೆ ಮಾತುಕತೆ ನಡೆಸಿದರು.

JDS delegation visited MLA M Srinivas house
ಶಾಸಕ ಎಂ.ಶ್ರೀನಿವಾಸ್ ಮನೆಗೆ ಜೆಡಿಎಸ್‌ ನಿಯೋಗ ಭೇಟಿ
author img

By

Published : Apr 24, 2023, 2:21 PM IST

ಶಾಸಕ ಎಂ.ಶ್ರೀನಿವಾಸ್ ಮನೆಗೆ ಜೆಡಿಎಸ್‌ ನಿಯೋಗ ಭೇಟಿ..

ಮಂಡ್ಯ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪುತ್ರ ಡಾ.ರಮೇಶ್ ಮಂಡ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಂಡಾಯ ಎದ್ದಿರುವ ಶಾಸಕ ಎಂ.ಶ್ರೀನಿವಾಸ್ ಮನೆಗೆ ಜೆಡಿಎಸ್‌ ನಿಯೋಗ ಭೇಟಿ ಕೊಟ್ಟು ಮನವೊಲಿಸುವ ಯತ್ನ ನಡೆಯಿತು.

ಶಾಸಕ ಶ್ರೀನಿವಾಸ್‌ ಮನೆಗೆ ಭೇಟಿ ನೀಡಿದ ಡಾ.ರಮೇಶ್‌ ಬಂಡಾಯ ಶಮನಕ್ಕೆ ಮುಂದಾದರು. ಜೆಡಿಎಸ್‌ ಟಿಕೆಟ್‌ ಅನ್ನು ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರಗೆ ನೀಡಿದ ಹಿನ್ನೆಲೆ ಶಾಸಕ ಶ್ರೀನಿವಾಸ್‌ ಬಂಡಾಯ ಎದ್ದು ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ಡಾ.ರಮೇಶ್‌ ನಿಯೋಗ, ಅಧಿಕೃತ ಅಭ್ಯರ್ಥಿ ರಾಮಚಂದ್ರಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಬಂಡಾಯಗಾರರ ಮನವೊಲಿಸಲು ಮುಂದಾದ ಡಾ.ರಮೇಶ್ ಅವರಿಗೆ ಅಭ್ಯರ್ಥಿ ರಾಮಚಂದ್ರ, ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಮತ್ತಿತರರ ಸಾಥ್ ನೀಡಿದರು.

ಈ ವೇಳೆ, ನನಗೆ ಸಫೋರ್ಟ್ ಮಾಡಿ ಎಂದು ಮಂಡ್ಯ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಬಂಡಾಯ ನಾಯಕನ ಕಾಲಿಗೆ ಕಾಲು ಹಿಡಿಯಲು ಹೋಗಿದ್ದಾರೆ. ಬಂಡಾಯ ಏಳಬೇಡಿ ಎಂದು ಕಾಲು ಹಿಡಿಯಲು ಹೋದಾಗ ಆಗ ನಾನು ಸಫೋರ್ಟ್ ಮಾಡಲ್ಲ ಹೋಗು ಎಂದು ಶ್ರೀನಿವಾಸ್ ನೂಕಿದ್ದಾರೆ. ರಾಮಚಂದ್ರಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಶ್ರೀನಿವಾಸ್ ಬಂಡಾಯ ಎದ್ದಿದ್ದಾರೆ.

ಬಂಡಾಯವೇ ಹೊರತು ಸಂಧಾನವಲ್ಲ: "ನನ್ನ ನಿರ್ಧಾರ ಅಚಲ, ಬದಲಾಗುವ ಪ್ರಶ್ನೆಯೇ ಇಲ್ಲ. ದೇವೇಗೌಡರ ಮಗ ರಮೇಶ್ ಸಂಧಾನಕ್ಕೆ ಬಂದಿದ್ದರು. ದೂರವಾಣಿ ಮೂಲಕ ಸಹ ನಾಯಕರ ಜತೆ ಮಾತನಾಡಿಸಿದರು. ನಾನು ಯಾರ ಮಾತಿಗೆ ಒಪ್ಪಲ್ಲ. ನಾವು ಬಂಡಾಯವಾಗಿ ಸ್ಪರ್ಧಿಸೋದು ಖಚಿತ. ಮೂರು ಜನರ ಪೈಕಿ ಒಬ್ಬರು ಕಣದಲ್ಲಿ ಇರ್ತಾರೆ. ಬೆಂಬಲಿಗರ ಸಭೆ ಕರೆದಿದ್ದೇನೆ. ಆ ಸಭೆಯಲ್ಲಿ ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತೇವೆ. ನಮ್ಮ ಅಂತಿಮ ತೀರ್ಮಾನ ಬಂಡಾಯವೇ ಹೊರತು ಸಂಧಾನವಲ್ಲ" ಎಂದು ಜೆಡಿಎಸ್‌ ನಿಯೋಗದ ಭೇಟಿ ಬಳಿಕ ಶಾಸಕ ಎಂ.ಶ್ರೀನಿವಾಸ್ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಜೆಡಿಎಸ್ ಟಿಕೆಟ್ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ ಶಾಸಕ..​ ಇಂದು ಪಕ್ಷೇತರನಾಗಿ ಎಂ ಶ್ರೀನಿವಾಸ್ ನಾಮಪತ್ರ ಸಲ್ಲಿಕೆ

ಜೆಡಿಎಸ್‌‌ನಿಂದ ರಾಮಚಂದ್ರಗೆ ಟಿಕೆಟ್ ನೀಡಿರುವುದಕ್ಕೆ‌ ಶಾಸಕ ಎಂ.ಶ್ರೀನಿವಾಸ್ ಜತೆ ಸೇರಿ ಬಂಡಾಯ ಎದ್ದಿರುವ ಮತ್ತೊಬ್ಬ ಜೆಡಿಎಸ್ ನಾಯಕ ಮಾಜಿ ಸಚಿವ ದಿ.ಕೆ.ವಿ.ಶಂಕರೇಗೌಡರ ಮೊಮ್ಮಗ ಪಿಇಟಿ ಅಧ್ಯಕ್ಷ ವಿಜಯಾನಂದ ಅವರನ್ನು ಡಾ.ರಮೇಶ್ ಭೇಟಿ ಮಾಡಿದರು. ಪಕ್ಷೇತರ ಅಭ್ಯರ್ಥಿಯಾಗಿ ವಿಜಯಾನಂದ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ವಾಪಸ್​ ಪಡೆದು ಜೆಡಿಎಸ್‌ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಇವರಿಗೆ ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿ ಗೌಡ, ಕೆ.ಟಿ.ಶ್ರೀಕಂಠೇಗೌಡ ಹಾಗೂ ಜೆಡಿಎಸ್‌ ಅಭ್ಯರ್ಥಿ ಬಿ.ಆರ್ ರಾಮಚಂದ್ರ ಸಾಥ್ ನೀಡಿದರು.

ಆದರೆ ಅಂತಿಮವಾಗಿ ಇಂದು ನಡೆಯಲಿರುವ ಬಂಡಾಯ ಅಭ್ಯರ್ಥಿ ಸಭೆಯಲ್ಲಿ ಯಾವ ರೀತಿ ತೀರ್ಮಾನ ತೆಗೆದುಕೊಳ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ‌.

ಇದನ್ನೂ ಓದಿ: ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್​​ಡಿಕೆ ಸ್ಪರ್ಧಿಸಬೇಕು: ಶಾಸಕ ಎಂ ಶ್ರೀನಿವಾಸ್ ಒತ್ತಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.