ಮಂಡ್ಯ:ರಾಜ್ಯ ಸರ್ಕಾರದ ಪ್ರಭಾವಿ ಸಚಿವ, ಮುಖ್ಯಮಂತ್ರಿ ಅವರ ಆಪ್ತ ಸಿ ಎಸ್. ಪುಟ್ಟರಾಜು ಅವರ ಮನೆ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ.
ಬೆಳಗ್ಗೆ ಐದು ಗಂಟೆಗೆ ದಾಳಿಗಿಳಿದ ಐಟಿ ಅಧಿಕಾರಿಗಳು ಸಿ. ಎಸ್. ಪುಟ್ಟರಾಜು ಅಣ್ಣನ ಮಗ ಅಶೋಕ್ ಅವರ ಮೈಸೂರಿನ ವಿಜಯನಗರದಲ್ಲಿರುವ ಮನೆ ಮೇಲೂ ದಾಳಿ ನಡೆಸಿದ್ದಾರೆ.
ಪುಟ್ಟರಾಜು ಸ್ವಗ್ರಾಮ ಚಿನಕುರುಳಿಯಲ್ಲಿರುವ ಮನೆ ಮೇಲೂ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಕಡತಗಳ ಪರಿಶೀಲನೆ ಮುಂದುವರಿದಿದೆ. ಇತ್ತ ಬೆಂಗಳೂರಿನಲ್ಲೂಬುಧವಾರ ತಡರಾತ್ರಿಕೆಲ ಉದ್ಯಮಿಗಳು ಸೇರಿದಂತೆ ಏಕಕಾಲದಲ್ಲಿ ಸುಮಾರು 15ಕ್ಕೂ ಹೆಚ್ಚುಕಡೆ ಐಟಿ ದಾಳಿ ನಡೆದಿದೆ.