ETV Bharat / state

ಬೆಚ್ಚಿಬೀಳಿಸಿದ ನಿಗೂಢ ಶಬ್ದ: ಕೆಆರ್​ಎಸ್ ವ್ಯಾಪ್ತಿಯಲ್ಲಿ ಮತ್ತೆ ಅಕ್ರಮ ಕಲ್ಲು ಗಣಿಗಾರಿಕೆ!? - undefined

ಕೆಆರ್​ಎಸ್ ವ್ಯಾಪ್ತಿಯಲ್ಲಿ ಭಾರೀ ನಿಗೂಢ ಶಬ್ದ ಕೇಳಿ ಬಂದಿದ್ದು, ಇದರ ಹಿಂದೆ ಅಕ್ರಮ ಕಲ್ಲು ಗಣಿಗಾರಿಕೆಯ ಕೈವಾಡವಿದೆಯಾ ಎಂಬ ಶಂಕೆ ಸಾರ್ವಜನಿಕರಲ್ಲಿ ಮೂಡಿದೆ.

ಕೆಆರ್​ಎಸ್ ವ್ಯಾಪ್ತಿಯಲ್ಲಿ ಎರಡು ಭಾರಿ ನಿಗೂಢ ಶಬ್ದ, ಅಕ್ರಮ ಕಲ್ಲು ಗಣಿಗಾರಿಕೆಯ ಕೈವಾಡದ ಶಂಕೆ ವ್ಯಕ್ತ
author img

By

Published : Jul 11, 2019, 5:23 PM IST

ಮಂಡ್ಯ: ನಿಗೂಢ ಶಬ್ದ ಇಂದು ಮಧ್ಯಾಹ್ನ ಸುಮಾರು 2:05ರ ಸಮಯದಲ್ಲಿ ಕೇಳಿ ಬಂದಿದ್ದು, ಕೆಆರ್​ಎಸ್ ವ್ಯಾಪ್ತಿಯ ಜನರನ್ನು ಬೆಚ್ಚಿಬೀಳಿಸಿದೆ.

ಹೌದು, ಇಂದು ಕೆಆರ್​ಎಸ್ ವ್ಯಾಪ್ತಿಯಲ್ಲಿ ಎರಡು ಬಾರಿ ನಿಗೂಢ ಶಬ್ದ ಕೇಳಿಬಂದಿದ್ದು, ಈ ಶಬ್ದದ ಹಿಂದೆ ಅಕ್ರಮ ಕಲ್ಲು ಗಣಿಗಾರಿಕೆಯ ಕೈವಾಡದ ಶಂಕೆ ವ್ಯಕ್ತವಾಗಿದೆ. ಕಳೆದ, ಆರೇಳು ತಿಂಗಳ ಹಿಂದೆಯೂ ಇದೇ ರೀತಿಯ ಶಬ್ದ ಕೇಳಿಬಂದಿದ್ದು, ಭೂ ಕಂಪನ ಮಾಪಕ ಕೇಂದ್ರದಲ್ಲಿ ಶಬ್ದದ ಮೂಲ ದಾಖಲಾಗಿತ್ತು.

ಕೆಆರ್​ಎಸ್​ ಬಳಿ ಅಕ್ರಮ ಕಲ್ಲು ಗಣಿಗಾರಿಕೆಯ ಶಂಕೆ

ಹಾಗಾಗಿ, ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಳಲ್ಲಿ ಸ್ಫೋಟಕ ಬಳಕೆ ಮಾಡುತ್ತಿರುವುದೇ ಶಬ್ದಕ್ಕೆ ಕಾರಣ ಎಂದು ಹೇಳಲಾಗಿದೆ. ರಿಗ್ ಬೋರ್ ಹಾಕಿ ಸ್ಫೋಟಕ ಸಿಡಿಸಿದರೆ ಈ ರೀತಿಯ ಶಬ್ದ ಬರುವ‌ ಸಾಧ್ಯತೆ ಇದ್ದು, ಇಂದಿನ ಶಬ್ದಕ್ಕೆ ರಿಗ್ ಬೋರ್ ಸ್ಫೋಟಕ ಕಾರಣ ಎನ್ನಲಾಗಿದೆ.

ಕಳೆದ ಆರೇಳು ತಿಂಗಳ ಹಿಂದೆ ಕೇಳಿ ಬಂದಿದ್ದ ಶಬ್ದಗಳ ಮೂಲ ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ದಾಖಲಾಗಿತ್ತು. ಈ ಸ್ಫೋಟಕಗಳಿಂದ ಕೆಆರ್​ಎಸ್​ಗೆ ಅಪಾಯವಿದೆ ಎಂದು ರೈತರು, ಹೋರಾಟಗಾರರು ಹೋರಾಟ ಮಾಡಿದ್ದರು. ಅಂದಿನಿಂದ ಅಲ್ಲಿ ಸ್ಫೋಟಕ ಬಳಕೆಗೆ ನಿಷೇಧ ಹೇರಲಾಗಿತ್ತು. ಆದರೆ ಮತ್ತೆ ಸ್ಫೋಟಕದ ಶಬ್ದ ಬಂದಿರೋದು ಅನುಮಾನಕ್ಕೆ ಕಾರಣವಾಗಿದೆ.

Intro:ಮಂಡ್ಯ: ಮಟ ಮಟ ಮಧ್ಯಾಹ್ನ ಅಬ್ಬರಿಸಿದ ಎರಡು ನಿಗೂಢ ಶಬ್ದ ಕೆ.ಅರ್.ಎಸ್ ವ್ಯಾಪ್ತಿಯ ಜನರನ್ನು ಬೆಚ್ಚಿ ಬೀಳಿಸಿದೆ. ಮಧ್ಯಾಹ್ನ ಸುಮಾರು 2.05 ರ ಸಮಯದಲ್ಲಿ ಬಾರೀ ಶಬ್ದ ಕೇಳಿ ಬಂದಿದೆ. ಶಬ್ದದ ಹಿಂದೆ ಅಕ್ರಮ ಕಲ್ಲುಗಣಿಗಾರಿಕೆಯ ವಾಸನೆ ಕೇಳಿ ಬಂದಿದೆ. ಆರೇಳು ತಿಂಗಳ ಹಿಂದೆಯೂ ಇದೇ ರೀತಿಯ ಶಬ್ದ ಬಂದು, ಭೂ ಕಂಪನ ಮಾಪಕ ಕೇಂದ್ರದಲ್ಲಿ ಶಬ್ದದ ಮೂಲ ದಾಖಲಾಗಿತ್ತು.

Body:ಬಾರೀ ಶಬ್ದದ ಹಿಂದೆ ಅಕ್ರಮ ಕಲ್ಲು ಗಣಿಗಾರಿಕೆಯ ಕೈವಾಡದ ಶಂಕೆ ವ್ಯಕ್ತವಾಗಿದೆ. ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಳಲ್ಲಿ ಸ್ಫೋಟಕ ಬಳಕೆ ಮಾಡುತ್ತಿರುವುದೇ ಶಬ್ದಕ್ಕೆ ಕಾರಣ ಎಂದು ಹೇಳಲಾಗಿದೆ. ರಿಗ್ ಬೋರ್ ಹಾಕಿ ಸ್ಫೋಟಕ ಸಿಡಿಸಿದರೆ ಈ ರೀತಿಯ ಶಬ್ದ ಬರುವ‌ ಸಾಧ್ಯತೆ ಇದ್ದು, ಇಂದಿನ ಶಬ್ದಕ್ಕೆ ರಿಗ್ ಬೋರ್ ಸ್ಫೋಟಕ ಕಾರಣ ಎನ್ನಲಾಗಿದೆ.
ಕಳೆದ ಆರೇಳು ತಿಂಗಳ ಹಿಂದೆ ಎರಡು ಶಬ್ದಗಳ ಮೂಲ ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ದಾಖಲಾಗಿತ್ತು. ಈ ಸ್ಫೋಟಕಗಳಿಂದ ಕೆ.ಅರ್.ಎಸ್‌ಗೆ ಅಪಾಯ ಎಂದು ರೈತರು, ಹೋರಾಟಗಾರರು ಹೋರಾಟ ಮಾಡಿದ್ದರು. ಅಂದಿನಿಂದ ಅಲ್ಲಿ ಸ್ಫೋಟಕ ಬಳಕೆಗೆ ನಿಷೇಧ ಏರಲಾಗಿತ್ತು. ಆದರೆ ಮತ್ತೆ ಸ್ಫೋಟಕದ ಶಬ್ದ ಬಂದಿರೋದು ಅನುಮಾನಕ್ಕೆ ಕಾರಣವಾಗಿದ.

Conclusion:(ಗಮನಕ್ಕೆ; ಕೆ.ಆರ್.ಎಸ್ ಫೈಲ್ ಶಾಟ್ ಹಾಕಿಕೊಳ್ಳಲು ಮನವಿ)

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.