ಮಂಡ್ಯ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಬಸಪ್ಪನ ಮೊರೆ ಹೋಗಿದ್ದಾರೆ. ಮಂಡ್ಯದ ಕಾಲಭೈರವೇಶ್ವರಿನಿಗೆ ಪೂಜೆ ಸಲ್ಲಿಸಿ ನಂತರ ಪಾದ ಕೇಳುವ ವಾಡಿಕೆ ಇದೆ. ಬಸಪ್ಪ ಪಾದ ನೀಡಿದರೆ ಇಷ್ಟಾರ್ಥ ನೆರವೇರಲಿದೆ ಅನ್ನೋದು ಭಕ್ತರ ನಂಬಿಕೆ. ರೋಹಿಣಿ ಸಿಂಧೂರಿ ಅವರು ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಗ್ರಾಮದ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಬಸಪ್ಪನ ಆಶೀರ್ವಾದ ಪಡೆದರು.
ಇದನ್ನೂ ಓದಿ: ಟಿಕೆಟ್ಗಾಗಿ ಕೆಜಿಎಫ್ನಲ್ಲಿ ಬಿಜೆಪಿ ಹೈಡ್ರಾಮಾ; ಕಾಂಗ್ರೆಸ್ನಿಂದ ಭರ್ಜರಿ ಮತ ಪ್ರಚಾರ
ಸಿಂಧೂರಿ ದೇವರಿಗೆ ಪೂಜೆ ಸಲ್ಲಿಸಿ ಪಾದ ಕೇಳಲು ಬಸಪ್ಪನ ಮುಂದೆ ಕುಳಿತು ಬೇಡಿಕೊಂಡರು. ಮನಸ್ಸಿನಲ್ಲಿ ಏನಾದರೂ ಬೇಡಿಕೊಂಡರಷ್ಟೇ ಬಸಪ್ಪ ಪಾದ ನೀಡುತ್ತಾನೆ ಅನ್ನೋದು ನಂಬಿಕೆ. ಮೊದಲು ಮನಸ್ಸಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುಮಾರು 10 ನಿಮಿಷ ಬಸಪ್ಪನ ಎದುರು ಕುಳಿತರು. ಆ ಬಳಿಕ ರೋಹಿಣಿ ಮನಸ್ಸಿನಲ್ಲಿ ಪ್ರಾರ್ಥನೆ ಸಲ್ಲಿಸಿ ಕುಳಿತಿದ್ದಾಗ ಬಸಪ್ಪ ಆಶೀರ್ವಾದ ನೀಡಿತಂತೆ. ಬಸಪ್ಪನ ಆಶೀರ್ವಾದ ಪಡೆದ ನಂತರ ದೇವಾಲಯಕ್ಕೆ ಬಂದು ತಮ್ಮ ಕೈಲಾದ ಸೇವೆ ಮಾಡುವುದಾಗಿ ಸಿಂಧೂರಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಫೈಟರ್ ರವಿ ವಿರುದ್ಧ ರೌಡಿಶೀಟ್ ಮುಂದುವರೆಸಲು ಹೈಕೋರ್ಟ್ ತಡೆಯಾಜ್ಞೆ
ಪವಾಡಗಳಿಂದಲೇ ಫೇಮಸ್ ಬಸಪ್ಪ: ಹಿಂದೂ ಧರ್ಮದಲ್ಲಿ ಗೋವುಗಳಿಗೆ ಮಹತ್ವದ ಸ್ಥಾನವಿದೆ. ಅವುಗಳಿಗೆ ದೈವಿಕ ಸ್ಥಾನ ನೀಡಿ ಆರಾಧಿಸಲಾಗುತ್ತದೆ. ಬಸಪ್ಪ ತನ್ನ ಪವಾಡಗಳಿಂದಲೇ ಫೇಮಸ್ ಆಗಿದ್ದು, ಹಲವು ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾನೆ ಎನ್ನುತ್ತಾರೆ ಭಕ್ತರು.
ಇದನ್ನೂ ಓದಿ: ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧೆಗೆ ಅಭಿಮಾನಿಗಳ ಸಭೆ; ಚಿಮ್ಮಕಟ್ಟಿಗೆ ಟಿಕೆಟ್ ನೀಡಿದ್ದಕ್ಕೆ ಆಕ್ಷೇಪ