ETV Bharat / state

ಶ್ರೀ ರಂಗಪಟ್ಟಣದಲ್ಲಿ ಹುಚ್ಚ ವೆಂಕಟ್ ಹುಚ್ಚಾಟ: ವಿಡಿಯೋ ವೈರಲ್​

ಇಂದು ಮುಂಜಾನೆ ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿ ಏಕಾಂಗಿಯಾಗಿ ತಿರುಗಾಡುತ್ತ ಬಹಿರಂಗವಾಗಿಯೇ ಜೋರಾಗಿ ಏನೇನೋ ಬೈಯುತ್ತಾ ತಿರುಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Huccha Venkat
ಹುಚ್ಚ ವೆಂಕಟ್
author img

By

Published : Jun 8, 2020, 12:35 PM IST

ಮಂಡ್ಯ: ಈ ವಿಡಿಯೋ ನೋಡಿದರೆ ಹುಚ್ಚ ವೆಂಕಟ್ ಹೀಗೇಕೆ ಎಂಬ ಪ್ರಶ್ನೆ ಮೂಡೋದರಲ್ಲಿ ಅನುಮಾನವೇ ಇಲ್ಲ. ಸರಿಯಾದ ಎಂಬ ಮಾತುಗಳು ಕೇಳಿ ಬರುವಾಗಲೇ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾನೆ ನಟ ಹುಚ್ಚ ವೆಂಕಟ್.

ಶ್ರೀ ರಂಗಪಟ್ಟಣದಲ್ಲಿ ಹುಚ್ಚ ವೆಂಕಟ್ ಹುಚ್ಚಾಟ

ಹೌದು, ಇಂದು ಮುಂಜಾನೆ ಶ್ರೀ ರಂಗಪಟ್ಟಣದ ಸ್ನಾನಘಟ್ಟದ ಬಳಿ ಏಕಾಂಗಿಯಾಗಿ ತಿರುಗಾಡುತ್ತ ಬಹಿರಂಗವಾಗಿಯೇ ಜೋರಾಗಿ ಏನೇನೋ ಬೈಯುತ್ತಾ ತಿರುಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬರು ವೆಂಕಟ್ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.

ಏಕಾಂಗಿಯಾಗಿ ಕೈಯಲ್ಲಿ ನೀರಿನ ಬಾಟಲ್ ಹಿಡಿದು ಓಡಾಟ ಮಾಡುತ್ತಿರುವ ವೆಂಕಟ್, ಜೋರಾಗಿ ಕೂಗಾಡುತ್ತಿರೋ ಈ ವಿಡಿಯೋ ಈಟಿವಿ ಭಾರತ್​ಗೆ ಲಭ್ಯವಾಗಿದೆ. ಜನರು ಕೂಡ ವೆಂಕಟ್​ಗೆ ಬುದ್ದಿ ಮಾತು ಹೇಳಿದರೂ ಕೇಳದೆ ಹೀಗೆ ಜೋರಾಗಿ ಕೂಗಾಡಿದ್ದಾನೆ ಎಂದು ಹೇಳಲಾಗಿದೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಹೀಗೇಕೆ ಎಂಬ ಪ್ರಶ್ನೆ ಎದ್ದಿದೆ.

ವೆಂಕಟ್ ಹೀಗೆನಾ ಅಥವಾ ಪ್ರಚಾರಕ್ಕಾಗಿ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆಯನ್ನು ನಾಗರಿಕರು ಎತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.