ETV Bharat / state

ಮಂಡ್ಯದ ಮಹಾ ಕದನ.. ಸುಮಲತಾ ಮುಂದೆ-ನಿಖಿಲ್‌ ಹಿಂದೆ.. ಸಿಎಂ ಕೈಗೆ ಗುಪ್ತಚರ ವರದಿ?

ಜೆಡಿಎಸ್ ನಾಯಕರು ನಮ್ಮ ಅಭ್ಯರ್ಥಿ ನಿಖಿಲ್ ಗೆಲುವು ಸಾಧಿಸುತ್ತಾರೆ ಅಂತಾರೆ. ಅಂಬಿ ಫ್ಯಾನ್ಸ್‌ ಸುಮಲತಾ ಅಂಬಿನೇ ಗೆಲ್ಲೋದು ಅಂತಾ ದಾವೆ ಹೂಡುತ್ತಿದ್ದಾರೆ. ಆದರೆ, ಗುಪ್ತಚರ ಇಲಾಖೆ ವಿಧಾನಸಭಾವಾರು ಯಾವ ಯಾವ ಅಭ್ಯರ್ಥಿಗಳಿಗೆ ಎಷ್ಟೆಷ್ಟು ಮತ ಬರಬಹುದು ಅನ್ನೋದರ ಕುರಿತಂತೆ ವರದಿಯೊಂದನ್ನ ತಯಾರಿಸಿ ಸಿಎಂ ಕೈಗಿಟ್ಟಿದೆಯಂತೆ.

author img

By

Published : May 12, 2019, 9:39 PM IST

ಸುಮಲತಾ ಮತ್ತು ನಿಖಿಲ್​​

ಮಂಡ್ಯ: ಲೋಕಸಭಾ ಕ್ಷೇತ್ರದ ಫಲಿತಾಂಶದ ವರದಿಗಳು ಕ್ಷೇತ್ರದಲ್ಲಿ ತೀವ್ರ ಕುತೂಹಲ ಕೆರಳಿಸಿವೆ. ಜೆಡಿಎಸ್ ನಾಯಕರು ನಮ್ಮ ಅಭ್ಯರ್ಥಿ ನಿಖಿಲ್ ಗೆಲುವು ಸಾಧಿಸುತ್ತಾರೆ ಎನ್ನುತ್ತಿದ್ದಾರೆ. ಅಂಬಿ ಫ್ಯಾನ್ಸ್‌ ಸುಮಲತಾ ಅಂಬರೀಶ್ ಗೆಲುವಿನ ಬಗ್ಗೆ ಮಾತನಾಡುತ್ತಿದ್ದಾರೆ. ವಿಧಾನಸಭಾ ಕ್ಷೇತ್ರವಾರು ಗೆಲುವಿನ ಲೆಕ್ಕಾಚಾರ ಇಲ್ಲಿದೆ.

ಮಂಡ್ಯ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು- 2, 27, 645

ಚಲಾವಣೆಯಾದ ಮತ-1, 70, 283

ಲೀಡ್ ಸಾಧಿಸುವವರು- ಸುಮಲತಾ ಅಂಬಿ

ಸುಮಲತಾ ಪಡೆಯುವ ಲೀಡ್- 5000+

ಮಳವಳ್ಳಿ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು- 2, 42, 138

ಚಲಾವಣೆಯಾದ ಮತ- 1, 85, 678

ಲೀಡ್ ಪಡೆಯುವವರು- ಸುಮಲತಾ ಅಂಬಿ

ಸುಮಲತಾ ಪಡೆಯಬಹುದಾದ ಲೀಡ್- 15, 000

ಮದ್ದೂರು ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು - 2, 08, 080

ಚಲಾವಣೆಯಾದ ಮತ- 1, 71,307

ಲೀಡ್ ಸಾಧಿಸುವವರು- ಸುಮಲತಾ ಅಂಬಿ

ಸುಮಲತಾ ಪಡೆಯಬಹುದಾದ ಲೀಡ್- 12,000+

ನಾಗಮಂಗಲ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು-2, 10, 085

ಚಲಾವಣೆಯಾದ ಮತ: 1,71,142

ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು-ನಿಖಿಲ್‌ ಕುಮಾರಸ್ವಾಮಿ

ನಿಖಿಲ್ ಪಡೆಯಬಹುದಾದ ಲೀಡ್-20,000

ಮೇಲುಕೋಟೆ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು- 1, 96, 995

ಚಲಾವಣೆಯಾದ ಮತ- 1, 70, 477

ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು- ನಿಖಿಲ್ ಕುಮಾರಸ್ವಾಮಿ

ನಿಖಿಲ್ ಪಡೆಯಬಹುದಾದ ಲೀಡ್-10,000

ಕೆ ಆರ್‌ಪೇಟೆ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು-2, 08, 384

ಚಲಾವಣೆಯಾದ ಮತ- 1, 68, 404

ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು-ನಿಖಿಲ್ ಕುಮಾರಸ್ವಾಮಿ

ನಿಖಿಲ್ ಪಡೆಯಬಹುದಾದ ಲೀಡ್-8,000

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು-2, 11, 641

ಚಲಾವಣೆಯಾದ ಮತ-1,73,346

ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು-ಸುಮಲತಾ ಅಂಬಿ

ಸುಮಲತಾ ಪಡೆಯಬಹುದಾದ ಲೀಡ್-8,000

ಕೆಆರ್‌ನಗರ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು-2,06,222

ಚಲಾವಣೆಯಾದ ಮತ-1,63,547

ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು- ಸುಮಲತಾ ಅಂಬಿ

ಸುಮಲತಾ ಪಡೆಯಬಹುದಾದ ಲೀಡ್-5,000

ಹೀಗೆ ಯಾವ್ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತಗಳು ಯಾವ ಯಾವ ಅಭ್ಯರ್ಥಿಗಳಿಗೆ ಬರಬಹುದು ಅನ್ನೋದರ ಕುರಿತಂತೆ ಗುಪ್ತಚರ ವರದಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರ ಕೈ ಸೇರಿದೆಯಂತೆ.

ಮಂಡ್ಯ: ಲೋಕಸಭಾ ಕ್ಷೇತ್ರದ ಫಲಿತಾಂಶದ ವರದಿಗಳು ಕ್ಷೇತ್ರದಲ್ಲಿ ತೀವ್ರ ಕುತೂಹಲ ಕೆರಳಿಸಿವೆ. ಜೆಡಿಎಸ್ ನಾಯಕರು ನಮ್ಮ ಅಭ್ಯರ್ಥಿ ನಿಖಿಲ್ ಗೆಲುವು ಸಾಧಿಸುತ್ತಾರೆ ಎನ್ನುತ್ತಿದ್ದಾರೆ. ಅಂಬಿ ಫ್ಯಾನ್ಸ್‌ ಸುಮಲತಾ ಅಂಬರೀಶ್ ಗೆಲುವಿನ ಬಗ್ಗೆ ಮಾತನಾಡುತ್ತಿದ್ದಾರೆ. ವಿಧಾನಸಭಾ ಕ್ಷೇತ್ರವಾರು ಗೆಲುವಿನ ಲೆಕ್ಕಾಚಾರ ಇಲ್ಲಿದೆ.

ಮಂಡ್ಯ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು- 2, 27, 645

ಚಲಾವಣೆಯಾದ ಮತ-1, 70, 283

ಲೀಡ್ ಸಾಧಿಸುವವರು- ಸುಮಲತಾ ಅಂಬಿ

ಸುಮಲತಾ ಪಡೆಯುವ ಲೀಡ್- 5000+

ಮಳವಳ್ಳಿ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು- 2, 42, 138

ಚಲಾವಣೆಯಾದ ಮತ- 1, 85, 678

ಲೀಡ್ ಪಡೆಯುವವರು- ಸುಮಲತಾ ಅಂಬಿ

ಸುಮಲತಾ ಪಡೆಯಬಹುದಾದ ಲೀಡ್- 15, 000

ಮದ್ದೂರು ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು - 2, 08, 080

ಚಲಾವಣೆಯಾದ ಮತ- 1, 71,307

ಲೀಡ್ ಸಾಧಿಸುವವರು- ಸುಮಲತಾ ಅಂಬಿ

ಸುಮಲತಾ ಪಡೆಯಬಹುದಾದ ಲೀಡ್- 12,000+

ನಾಗಮಂಗಲ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು-2, 10, 085

ಚಲಾವಣೆಯಾದ ಮತ: 1,71,142

ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು-ನಿಖಿಲ್‌ ಕುಮಾರಸ್ವಾಮಿ

ನಿಖಿಲ್ ಪಡೆಯಬಹುದಾದ ಲೀಡ್-20,000

ಮೇಲುಕೋಟೆ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು- 1, 96, 995

ಚಲಾವಣೆಯಾದ ಮತ- 1, 70, 477

ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು- ನಿಖಿಲ್ ಕುಮಾರಸ್ವಾಮಿ

ನಿಖಿಲ್ ಪಡೆಯಬಹುದಾದ ಲೀಡ್-10,000

ಕೆ ಆರ್‌ಪೇಟೆ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು-2, 08, 384

ಚಲಾವಣೆಯಾದ ಮತ- 1, 68, 404

ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು-ನಿಖಿಲ್ ಕುಮಾರಸ್ವಾಮಿ

ನಿಖಿಲ್ ಪಡೆಯಬಹುದಾದ ಲೀಡ್-8,000

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು-2, 11, 641

ಚಲಾವಣೆಯಾದ ಮತ-1,73,346

ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು-ಸುಮಲತಾ ಅಂಬಿ

ಸುಮಲತಾ ಪಡೆಯಬಹುದಾದ ಲೀಡ್-8,000

ಕೆಆರ್‌ನಗರ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು-2,06,222

ಚಲಾವಣೆಯಾದ ಮತ-1,63,547

ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು- ಸುಮಲತಾ ಅಂಬಿ

ಸುಮಲತಾ ಪಡೆಯಬಹುದಾದ ಲೀಡ್-5,000

ಹೀಗೆ ಯಾವ್ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತಗಳು ಯಾವ ಯಾವ ಅಭ್ಯರ್ಥಿಗಳಿಗೆ ಬರಬಹುದು ಅನ್ನೋದರ ಕುರಿತಂತೆ ಗುಪ್ತಚರ ವರದಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರ ಕೈ ಸೇರಿದೆಯಂತೆ.

Intro:ಮಂಡ್ಯ: ಲೋಕಸಭಾ ಕ್ಷೇತ್ರದ ಫಲಿತಾಂಶದ ವರದಿಗಳು ಕ್ಷೇತ್ರದಲ್ಲಿ ತೀವ್ರ ಕುತೂಹಲ ಕೆಡಿಸಿದೆ. ಜೆಡಿಎಸ್ ನಾಯಕರು ನಮ್ಮ ಅಭ್ಯರ್ಥಿ ನಿಖಿಲ್ ಗೆಲುವು ಸಾಧಿಸುತ್ತಾರೆ ಎನ್ನುತ್ತಿದ್ದರೆ, ಅಂಬಿ ಅಭಿಮಾನಿಗಳು ಸುಮಲತಾ ಅಂಬರೀಶ್ ಗೆಲುವಿನ ಬಗ್ಗೆ ಮಾತನಾಡುತ್ತಿದ್ದಾರೆ.
ಗೆಲುವಿನ ಲೆಕ್ಕಾಚಾರ ವಿಧಾನಸಭಾ ಕ್ಷೇತ್ರವಾರು ಇಲ್ಲಿದೆ ನೋಡಿ. ಯಾವ ಕ್ಷೇತ್ರದಲ್ಲಿ ಯಾರು ಮುನ್ನಡೆ, ಕಾರಣವೇನು ಎಂಬುದರ ವರದಿ ಇಲ್ಲಿದೆ.
*ಮಂಡ್ಯ ವಿಧಾನಸಭಾ ಕ್ಷೇತ್ರ*

ಕ್ಷೇತ್ರದಲ್ಲಿರುವ ಮತ: ೨೨೭೬೪೫
ಚಲಾವಣೆಯಾದ ಮತ: ೧೭೦೨೮೩
ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು: ಸುಮಲತಾ ಅಂಬರೀಷ್
ಸುಮಲತಾ ಪಡೆಯಬಹುದಾದ ಲೀಡ್: ೫೦೦೦+
*ಸುಮಲತಾ ಅಂಬರೀಷ್ ಮುನ್ನಡೆಗೆ ಕಾರಣ*
೧. ಮಂಡ್ಯ ವಿಧಾನಸಭಾ ಕ್ಷೇತ್ರ ಸುಮಲತಾ ಪತಿ ದಿ.ಅಂಬರೀಷ್ ಪ್ರತಿನಿಧಿಸಿದ್ದ ಕ್ಷೇತ್ರ. ಜೊತೆಗೆ ಗ್ರಾಮೀಣ ಭಾಗಕ್ಕಿಂತ ಮಂಡ್ಯ ನಗರ ಕಾಂಗ್ರೆಸ್ ಭದ್ರಕೋಟೆ.
೨. ಕ್ಷೇತ್ರದಲ್ಲಿ ಮುಸ್ಲೀಂ ಮತದಾರರು ನಿರ್ಣಾಯಕ. ೩೫ ಸಾವಿರದಷ್ಟು ಮುಸ್ಲೀಂ ಮತದಾರರಿದ್ದು, ಆ ಪೈಕಿ ೩೦ರಷ್ಟು ಸುಮಲತಾ ಕೈ ಹಿಡಿದಿದ್ದಾರೆ. ನಗರ ಪ್ರದೇಶವಾಗಿರೋದ್ರಿಂದ ಸುಮಲತಾ ಪರ ಒಲವು ಹೆಚ್ಚಿತ್ತು.
೩. ಕ್ಷೇತ್ರದ ಕಳೆದ ಭಾರಿಯ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ ಗಣಿಗ ರವಿಕುಮಾರ್ ವರ್ಚಸ್ಸು ಹಾಲಿ ಶಾಸಕರಿಗಿಂತ ಹೆಚ್ಚಿದೆ. ಅವರ ಬೆಂಬಲಿಗರು ಸುಮಲತಾ ಕೈ ಹಿಡಿದಿರುವ ಸಾಧ್ಯತೆ ಹೆಚ್ಚಿದೆ.
೪. ಹಾಲಿ ಶಾಸಕ ಎಂ.ಶ್ರೀನಿವಾಸ್ ವರ್ಚಸ್ಸು ಕಳೆದುಕೊಂಡಿರೋದು. ಕ್ಷೇತ್ರದಲ್ಲಿ ಸಮರ್ಪಕವಾಗಿ ಪ್ರಚಾರ ಮಾಡದಿರುವುದು. ಜೊತೆಗೆ ಕಾಂಗ್ರೆಸ್ಸಿಗರನ್ನು ಶ್ರೀನಿವಾಸ್ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಮೈತ್ರಿ ಅಭ್ಯರ್ಥಿ ನಿಖಿಲ್ ಗೆ ಹಿನ್ನಡೆಯಾಗಲು ಕಾರಣವಾಗಬಹುದು.
೫. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಗಿದ್ದ ಚಂದಗಾಲು ಶಿವಣ್ಣ ಸಹ ೩೯ಸಾವಿರ ಮತ ಪಡೆದಿದ್ದರು. ಬಿಜೆಪಿ ಸುಮಾಗೆ ಬೆಂಬಲ ಕೊಟ್ಟಿರೋದ್ರಿಂದ ಬಿಜೆಪಿಯ ಮತ ಬ್ಯಾಂಕ್ ಕೂಡ ಅಂಬಿ ಪತ್ನಿ ಕೈ ಹಿಡಿದಿರೋದು ಮುನ್ನಡೆಗೆ ಇನ್ನೊಂದು ಕಾರಣ.

*ಮಳವಳ್ಳಿ ವಿಧಾನಸಭಾ ಕ್ಷೇತ್ರ*
ಕ್ಷೇತ್ರದಲ್ಲಿರುವ ಮತ: ೨೪೨೧೩೮
ಚಲಾವಣೆಯಾದ ಮತ: ೧೮೫೬೭೮
ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು: ಸುಮಲತಾ ಅಂಬರೀಷ್
ಸುಮಲತಾ ಪಡೆಯಬಹುದಾದ ಲೀಡ್: ೧೫೦೦೦
*ಸುಮಲತಾ ಅಂಬರೀಷ್ ಮುನ್ನಡೆಗೆ ಕಾರಣ*
೧. ಕ್ಷೇತ್ರದಲ್ಲಿರುವ ಜಾತಿವಾರು ಲೆಕ್ಕಾಚಾರ ಸುಮಲತಾಗೆ ದೊಡ್ಡ ಲಾಭ ತಂದು ಕೊಡಲಿದೆ. ಕ್ಷೇತ್ರದಲ್ಲಿರುವ ೩೦ ಸಾವಿರದಷ್ಟು ಲಿಂಗಾಯಿತ ಮತಗಳ ಪೈಕಿ ಶೇ.೮೦ರಷ್ಟು ಮತ ಸುಮಾ ಪರ ಬಂದಿದೆ ಎಂಬ ಲೆಕ್ಕಾಚಾರ.
೨. ದಲಿತ, ಕುರುಬ ಹಾಗೂ ಒಕ್ಕಲಿಗ ಮತಗಳ ಪೈಕಿ ದಲಿತ, ಕುರುಬ ಮತಗಳು ಶೇ.೭೦ರಷ್ಟು ಹಾಗೂ ಒಕ್ಕಲಿಗ ಮತಗಳು ಶೇ.೩೫ರಷ್ಟು ಸುಮಲತಾ ಪರ ಬಂದಿದೆ ಎಂಬ ಲೆಕ್ಕಾಚಾರ.
೩. ಸುಮಲತಾ ಅಂಬರೀಷ್ ತಾನು ಮಳವಳ್ಳಿ ಹುಚ್ಚೇಗೌಡರ ಸೊಸೆ ಎಂದು ಪ್ರಚಾರದಲ್ಲಿ ಪದೇ ಪದೇ ಹೇಳಿಕೆ ಕೊಡುತ್ತಿದ್ದದ್ದು ಸುಮಲತಾಗೆ ದೊಡ್ಡ ಲಾಭ ಕೊಡಲಿದೆ.
೪. ಕ್ಷೇತ್ರದ ಪರಾಜಿತ ಅಭ್ಯರ್ಥಿ ನರೇಂದ್ರಸ್ವಾಮಿ ಬೆಂಬಲಿಗರು ಸುಮಲತಾ ಪರ ನಿಂತಿದ್ದು, ೨೦೧೩ರ ಉಪಚುನಾವಣೆ ಮತ್ತು ೨೦೧೪ರ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರಸ್ವಾಮಿ ಕಾಂಗ್ರೆಸ್ ಗೆ ಕ್ಷೇತ್ರದಲ್ಲಿ ಲೀಡ್ ಕೊಡಿಸಲು ಯಶಸ್ವಿಯಾಗಿದ್ದರು.
೫. ಕ್ಷೇತ್ರದಲ್ಲಿ ವರ್ಚಸ್ಸನ್ನು ಕಳೆಗುಂದಿಸಿಕೊಂಡಿರುವ ಹಾಲಿ ಜೆಡಿಎಸ್ ಶಾಸಕ ಡಾ.ಅನ್ನದಾನಿ. ಸಮರ್ಪಕವಾಗಿ ಚುನಾವಣೆಯಲ್ಲಿ ತೊಡಗಿಸಿಕೊಂಡಿಲ್ಲ ಎಂಬ ಆರೋಪ. ನಿಖಿಲ್ ಗೆ ಹಿನ್ನಡೆಗೆ ಕಾರಣವಾಗಬಹುದು.

*ಮದ್ದೂರು ವಿಧಾನಸಭಾ ಕ್ಷೇತ್ರ*
ಕ್ಷೇತ್ರದಲ್ಲಿರುವ ಮತ: ೨೦೮೦೮೦
ಚಲಾವಣೆಯಾದ ಮತ: ೧೭೧೩೦೭
ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು: ಸುಮಲತಾ ಅಂಬರೀಷ್
ಸುಮಲತಾ ಪಡೆಯಬಹುದಾದ ಲೀಡ್: ೧೨೦೦೦+
*ಸುಮಲತಾ ಅಂಬರೀಷ್ ಮುನ್ನಡೆಗೆ ಕಾರಣ*
೧. ಸುಮಲತಾ ಪತ್ನಿ ದಿ.ಅಂಬರೀಷ್ ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆಯವರು. ಅಂಬರೀಷ್ ಹುಟ್ಟೂರು ಆಗಿರೋದ್ರಿಂದ ಸುಮಲತಾ ಮೇಲೆ ಅನುಕಂಪ ಹೆಚ್ಚಿದೆ. ಜೊತೆಗೆ ಅಂಬರೀಷ್ ಕುಟುಂಬದ ಪರಿವಾರ ಕೆ.ಎಂ.ದೊಡ್ಡಿ ವ್ಯಾಪ್ತಿಯಲ್ಲಿ ಹೆಚ್ಚಿದೆ.
೨. ಕ್ಷೇತ್ರದ ಶಾಸಕರೂ ಆದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸುಮಲತಾ ಅಂಬರೀಷ್ ರನ್ನು ಪದೇ ಪದೇ ವೈಯಕ್ತಿಕವಾಗಿ ಟೀಕೆ ಮಾಡಿದ್ದು, ಕೀಳು ಮಟ್ಟದ ಪದಗಳ ಪ್ರಯೋಗ ಕ್ಷೇತ್ರದಲ್ಲಿ ಸುಮಲತಾ ಪರ ಅಲೆ ಸೃಷ್ಟಿಯಾಗಲು ಕಾರಣವಾಯಿತು.
೩. ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಅವರ ನೂರಾರು ಬೆಂಬಲಿಗರು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ಸುಮಲತಾ ಬೆನ್ನಿಗೆ ನಿಂತಿದ್ದು, ಮುನ್ನಡೆಗೆ ಮತ್ತೊಂದು ಕಾರಣ
೪. ಮದ್ದೂರು ಭಾಗದಲ್ಲಿ ನಟ ದರ್ಶನ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿರೋದು. ಜೊತೆಗೆ ನಟ ದರ್ಶನ್ ಮದ್ದೂರಿನಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದು, ಸುಮಲತಾಗೆ ಮುನ್ನಡೆ ತರಲು ಕಾರಣವಾಗಬಹುದು.
೫. ಮದ್ದೂರಿನ ಹೊನ್ನಲಗೆರೆ, ಕೆಸ್ತೂರು, ಬೆಸಗರಹಳ್ಳಿ ಭಾಗದಲ್ಲಿ ಗ್ರಾಮ ಬಿಟ್ಟು ಬೆಂಗಳೂರಿಗೆ ಕೆಲಸಕ್ಕೆ ಹೋಗೋರ ಸಂಖ್ಯೆ ಹೆಚ್ಚಿದ್ದು, ಹೊರಗಿನಿಂದ ಬಂದು ಮತದಾನ ಮಾಡಿದ್ದಾರೆ. ಹೊರಗಿನಿಂದ ಬಂದು ಮತದಾನ ಮಾಡಿರೋರ ಪೈಕಿ ಶೇ.೯೫ರಷ್ಟು ಸುಮಲತಾ ಪರ ಇದ್ದಾರೆ ಎಂಬ ಲೆಕ್ಕಾಚಾರ.

*ನಾಗಮಂಗಲ ವಿಧಾನಸಭಾ ಕ್ಷೇತ್ರ*
ಕ್ಷೇತ್ರದಲ್ಲಿರುವ ಮತ: ೨೧೦೦೮೫
ಚಲಾವಣೆಯಾದ ಮತ: ೧೭೧೧೪೭
ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು: ನಿಖಿಲ್ ಕುಮಾರಸ್ವಾಮಿ
ನಿಖಿಲ್ ಪಡೆಯಬಹುದಾದ ಲೀಡ್: ೨೦೦೦೦
*ನಿಖಿಲ್ ಕುಮಾರಸ್ವಾಮಿ ಮುನ್ನಡೆಗೆ ಕಾರಣ*
೧. ಕ್ಷೇತ್ರದಲ್ಲಿ ದಟ್ಟವಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವರ್ಚಸ್ಸು
೨. ನಾಗಮಂಗಲ ಹಾಸನ ಜಿಲ್ಲೆಗೆ ಹೊಂದುಕೊಂಡತಿರುವುದರಿಂದ ಗೌಡರ ಕುಟುಂಬದ ಪ್ರಭಾವ ಇಲ್ಲಿ ಕೆಲಸ ಮಾಡಿದೆ. ಆದ್ದರಿಂದ ಸುಮಲತಾ ಇಲ್ಲಿ ಪ್ರಭುತ್ವ ಸಾಧಿಸಲು ಮೇಲ್ನೋಟಕ್ಕೆ ಸಾಧ್ಯವಾಗಿಲ್ಲ.
೩. ಮಾಜಿ ಸಚಿವ ಚಲುವರಾಯಸ್ವಾಮಿ ಸುಮಲತಾ ಪರ ಇದ್ದರೂ ಎನ್ನಲಾಗದರೂ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸುಮಲತಾಗೆ ಬೆಂಬಲಿಗರ ಕೊರತೆ ಕಾಡಿತು. ಬೇರೆ ಕ್ಷೇತ್ರಕ್ಕಿಂತ ಈ ಕ್ಷೇತ್ರದಲ್ಲಿ ಸುಮಲತಾ ಪರ ಚುನಾವಣೆ ಮಾಡಿದ ಕಾರ್ಯಕರ್ತರ ಸಂಖ್ಯೆ ಕಡಿಮೆ
೪. ಹಾಲಿ ಸಂಸದ ಎಲ್.ಆರ್.ಶಿವರಾಮೇಗೌಡ, ಕ್ಷೇತ್ರದ ಶಾಸಕ ಸುರೇಶ್ ಗೌಡ, ಎಂ.ಎಲ್.ಸಿ.ಗಳಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ ಇವರಿಷ್ಟು ಮಂದಿ ಸಹ ನಾಗಮಂಗಲದವರೇ ಆಗಿದ್ದು ಸುಮಲತಾಗೆ ಹಿನ್ನಡೆಗೆ ಕಾರಣವಾಯಿತು.
೫. ಈ ಭಾಗದಲ್ಲಿ ನಿಖಿಲ್ ಪ್ರಚಾರಕ್ಕೆ ಬಂದಾಗ ಸಾವಿರಾರು ಮಂದಿ ಇರುತ್ತಿದ್ದರು. ಬಟ್ ಸುಮಾ ಪ್ರಚಾರಕ್ಕೆ ಬಂದಾಗ ಬರ್‍ತಿದ್ದ ಜನ ಕೇವಲ ನೂರಾರು ಮಂದಿಗೆ ಮಾತ್ರ ಸೀಮಿತ.

*ಮೇಲುಕೋಟೆ ವಿಧಾನಸಭಾ ಕ್ಷೇತ್ರ*
ಕ್ಷೇತ್ರದಲ್ಲಿರುವ ಮತ: ೧೯೬೯೯೫
ಚಲಾವಣೆಯಾದ ಮತ: ೧೭೦೪೭೭
ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು: ನಿಖಿಲ್ ಕುಮಾರಸ್ವಾಮಿ
ನಿಖಿಲ್ ಪಡೆಯಬಹುದಾದ ಲೀಡ್: 10000
*ನಿಖಿಲ್ ಕುಮಾರಸ್ವಾಮಿ ಮುನ್ನಡೆಗೆ ಕಾರಣ*
೧. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಸ್ವ ಕ್ಷೇತ್ರವಾಗಿರುವುದರಿಂದ ಸಚಿವರು ಪ್ರತಿಷ್ಠೆಯಾಗಿ ತೆಗೆದುಕೊಂಡು ಚುನಾವಣೆ ಮಾಡಿದ್ದಾರೆ. ಇದು ನಿಖಿಲ್ ಗೆ ವರದಾನವಾಗಲಿದೆ. 
೨. ಸಚಿವ ಪುಟ್ಟರಾಜು ನಿಖಿಲ್ ಲಕ್ಷ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ. ಗೆಲ್ಲದಿದ್ದರೆ ರಾಜಕೀಯ ನಿವೃತ್ತಿ ಘೋಷಿಸ್ತೇನೆ ಎಂದಿದ್ದು, ಅವರು ಹಠಕ್ಕೆ ಬಿದ್ದು ನಿಖಿಲ್ ಗೆ ಭಾರಿ ಶ್ರಮ ವಹಿಸಿ ಚುನಾವಣೆ ಮಾಡಿದ್ದು, ಇದು ಕ್ಷೇತ್ರದಲ್ಲಿ ನಿಖಿಲ್ ಗೆ ಮುನ್ನಡೆ ಕೊಡಬಹುದೆಂಬ ಲೆಕ್ಕಾಚಾರ
೩. ಕ್ಷೇತ್ರದಲ್ಲಿ ೨೫ ಸಾವಿರದಷ್ಟು ನಾಯ್ಡು ಸಮುದಾಯದ ಮತಗಳಿದ್ದು, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರನ್ನು ಪಾಂಡವಪುರಕ್ಕೆ ಪ್ರಚಾರಕ್ಕೆ ಕರೆಸಿದ್ದು, ನಿಖಿಲ್ ಗೆ ವರದಾನ
೪. ರೈತ ಸಂಘ ಹಾಗೂ ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಶ್ರಮ ವಹಿಸಿ ಚುನಾವಣೆ ಮಾಡದಿರುವುದು ಸುಮಲತಾಗೆ ಹಿನ್ನಡೆಗೆ ಕಾರಣವಾಗಬಹುದು. 
೫. ದರ್ಶನ್ ಪುಟ್ಟಣ್ಣಯ್ಯ ಅಮೇರಿಕಾದಲ್ಲಿ ಇದ್ದ ಕಾರಣ ಚುನಾವಣೆ ಘೋಷಣೆಯಾದ ಮೇಲೆ ಕ್ಷೇತ್ರಕ್ಕೆ ಬಂದರು. ಜೊತೆಗೆ ತಮ್ಮ ಕಾರ್ಯಕರ್ತರ ಮೇಲೆ ದರ್ಶನ್ ಹಿಡಿತ ಕಡಿಮೆ ಆಗಿದ್ದರಿಂದ ಅದು ಜೆಡಿಎಸ್ ಗೆ ಇಲ್ಲಿ ವರದಾನವಾಗಿದೆ.

*ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ*
ಕ್ಷೇತ್ರದಲ್ಲಿರುವ ಮತ: ೨೦೮೩೮೪
ಚಲಾವಣೆಯಾದ ಮತ: ೧೬೮೪೦೪
ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು: ನಿಖಿಲ್ ಕುಮಾರಸ್ವಾಮಿ
ನಿಖಿಲ್ ಪಡೆಯಬಹುದಾದ ಲೀಡ್: 8000
*ನಿಖಿಲ್ ಕುಮಾರಸ್ವಾಮಿ ಮುನ್ನಡೆಗೆ ಕಾರಣ*
೧. ದೇವೇಗೌಡರ ಕುಟುಂಬದ ಹೊಳೇನರಸೀಪುರ ಕ್ಷೇತ್ರದ ಪಕ್ಕದ ಕ್ಷೇತ್ರವಾದ ಇಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವ ಎಚ್.ಡಿ.ರೇವಣ್ಣ ಪ್ರಭಾವ ಹೆಚ್ಚಾಗಿದೆ. ಇದು ನಿಖಿಲ್ ಮುನ್ನಡೆ ಸಾಧಿಸಲು ಪ್ರಮುಖ ಕಾರಣ
೨. ಹಾಸನ ಪ್ರಾಬಲ್ಯದ ಕ್ಷೇತ್ರದಲ್ಲಿ ಗೌಡರ ಕುಟುಂಬದ ಪ್ರಭಾವ ಈಗಾಗಲೇ ಹೇಳಿದಂತೆ ಹೆಚ್ಚಿದೆ. ಗೌಡರ ಕುಟುಂಬದ ಕುಡಿಯೇ ಅಭ್ಯರ್ಥಿ ಆಗಿರೋದು ಇಲ್ಲಿ ನಿಖಿಲ್ ಮುನ್ನಡೆಗೆ ಸಹಕಾರಿ ಆಗಲಿದೆ.
೩. ಕಳೆದ ಲೋಕಸಭೆ, ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಭಾರೀ ಅಂತರದ ಮುನ್ನಡೆ ಸಾಧಿಸಿದ್ದು, ಇಲ್ಲಿ ಕಾಂಗ್ರೆಸ್ ವರ್ಚಸ್ಸು ದಿನೇ ದಿನೇ ಕುಸಿಯುತ್ತಾ ಬಂದಿದ್ದು, ಇದು ಕಾಂಗ್ರೆಸ್ಸಿಗರನ್ನು ನಂಬಿದ್ದ ಸುಮಾಗೆ ಹಿನ್ನಡೆ ತರಲಿದೆ.
೪. ಅಂಬರೀಷ್ ಸಹ ಸಂಸದರಾಗಿದ್ದಾಗಲೂ ಕೆ.ಆರ್.ಪೇಟೆಯಲ್ಲಿ ಹೆಚ್ಚಿನ ಮುನ್ನಡೆ ಬರುತ್ತಿರಲಿಲ್ಲ. ಜೊತೆಗೆ ಅಂಬಿ ಈ ಕ್ಷೇತ್ರದಲ್ಲಿ ಹಿಡಿತ ಹಾಗೂ ಹೆಚ್ಚಿನ ಬೆಂಬಲಿಗರನ್ನು ಹೊಂದಿಲ್ಲದಿರುವುದು ಸುಮಲತಾಗೆ ಮೈನಸ್ ಪಾಯಿಂಟ್
೫. ಕಿಕ್ಕೇರಿ, ಸಂತೆಬಾಚಹಳ್ಳಿ, ಶೀಳನೆರೆ, ಕಸಬಾ ಹಾಗೂ ಅಕ್ಕಿ ಹೆಬ್ಬಾಳು ಈ ಭಾಗದಲ್ಲಿ ಜೆಡಿಎಸ್ ಕಾರ್ಯಕರ್ತರು ಹೆಚ್ಚಿದ್ದು, ನಿಖಿಲ್ ಪ್ರಚಾರಕ್ಕೆ ಬಂದಾಗ ಇದು ಸಾಬೀತಾಗಿದೆ. ಸುಮಾ ಪ್ರಚಾರದಲ್ಲಿ ಬೆಂಬಲಿಗರ ಕೊರತೆ ಎದ್ದು ಕಂಡಿತು.

*ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ*
ಕ್ಷೇತ್ರದಲ್ಲಿರುವ ಮತ: ೨೧೧೬೪೧
ಚಲಾವಣೆಯಾದ ಮತ: ೧೭೩೩೪೬
ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು: ಸುಮಲತಾ ಅಂಬರೀಷ್
ಸುಮಲತಾ ಪಡೆಯಬಹುದಾದ ಲೀಡ್: ೮೦೦೦
*ಸುಮಲತಾ ಅಂಬರೀಷ್ ಮುನ್ನಡೆಗೆ ಕಾರಣ*
೧. ದಿ.ಅಂಬರೀಷ್ ಮೂರು ಬಾರಿ ಸಂಸದರಾಗಿದ್ದಾಗ ಇಡೀ ಜಿಲ್ಲೆಯಲ್ಲಿ ಅಂಬಿಗೆ ಅತಿ ಹೆಚ್ಚು ಲೀಡ್ ಕೊಡುತ್ತಿದ್ದ ಕ್ಷೇತ್ರ ಶ್ರೀರಂಗಪಟ್ಟಣ. ಇದು ಅಂಬಿ ಪತ್ನಿ ಸುಮಲತಾಗೆ ಮುನ್ನಡೆ ಪಡೆಯಲು ಟ್ರಂಪ್ ಕಾರ್ಡ್
೨. ಲೀಡ್ ಕೊಡುತ್ತಿದ್ದ ಕಾರಣಕ್ಕೆ ಅಂಬಿ ಇಲ್ಲಿ ಒಮ್ಮೆ ವಿಧಾನಸಭೆಗೂ ಸ್ಪರ್ಧಿಸಿ ಸೋಲನುಭವಿಸಿದ್ದರೂ ಅದಾದ ಬಳಿಕ ಸ್ಪರ್ಧಿಸಿದ ಲೋಕಸಭೆ ಚುನಾವಣೆಯಲ್ಲಿ ಅಂಬಿಗೆ ಈ ಕ್ಷೇತ್ರದಲ್ಲಿ ಹಿನ್ನಡೆಯಾಗಿತ್ತು. ಈ ನಿಟ್ಟಿನಲ್ಲಿ ಅಂಬರೀಷ್ ಮೇಲೆ ಶ್ರೀರಂಗಪಟ್ಟಣ ಮತದಾರರಲ್ಲಿ ಅನುಕಂಪವಿತ್ತು. ಇದೀಗ ಅಂಬಿ ಸಾವಿನ ಅನುಕಂಪ ಸಹ ವರದಾನವಾಗಿ ಸುಮಲತಾ ಮುನ್ನಡೆ ಸಾಧಿಸಬಹುದು.
೩. ಕ್ಷೇತ್ರದ ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅಂಬರೀಷ್ ಮೇಲೆ ದ್ವೇಷ ಸಾಧಿಸಿದ್ದು, ಜೊತೆಗೆ ಪ್ರಸ್ತುತ ಕ್ಷೇತ್ರದ ಮತದಾರರ ವಿಶ್ವಾಸ ಕಳೆದುಕೊಂಡಿರುವ ರವೀಂದ್ರ ಮೇಲಿನ ಮುನಿಸಿಗೆ ಜನ ಸುಮಲತಾ ಪರ ನಿಂತರು ಎಂಬ ಲೆಕ್ಕಾಚಾರ
೪. ಇದಲ್ಲದೇ ರವೀಂದ್ರ ಶ್ರೀಕಂಠಯ್ಯ ನಿಖಿಲ್ ಕುಮಾರಸ್ವಾಮಿ ಪರವಾಗಿ ಕಾಳಜಿ ವಹಿಸಿ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಯಲಿಲ್ಲ ಎಂಬುದು ಮೇಲ್ನೋಟದ ವಾದ
೫. ಕ್ಷೇತ್ರದ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಇಂಡುವಾಳು ಸಚ್ಚಿದಾನಂದ, ಶೆಟ್ಟಹಳ್ಳಿ ಲಿಂಗರಾಜು, ಕೆ.ಎಸ್.ನಂಜುಂಡೇಗೌಡ ಮತ್ತು ನಟರಾದ ದರ್ಶನ್ ಯಶ್ ಪ್ರಚಾರ ಸುಮಾಗೆ ವರದಾನ

*ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ*
ಕ್ಷೇತ್ರದಲ್ಲಿರುವ ಮತ: ೨೦೬೨೨೨
ಚಲಾವಣೆಯಾದ ಮತ: ೧೬೩೫೪೭
ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು: ಸುಮಲತಾ ಅಂಬರೀಷ್
ಸುಮಲತಾ ಪಡೆಯಬಹುದಾದ ಲೀಡ್: ೫೦೦೦
*ಸುಮಲತಾ ಅಂಬರೀಷ್ ಮುನ್ನಡೆಗೆ ಕಾರಣ*
೧. ಕಳೆದ ಬಾರಿಯ ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿ ರವಿಶಂಕರ್ ಬೆಂಬಲಿಗರು ಸುಮಲತಾ ಪರ ಬಹಿರಂಗವಾಗಿ ಗುರುತಿಸಿಕೊಂಡು ಚುನಾವಣೆ ಮಾಡಿದ್ದು ಸುಮಲತಾಗೆ ವರದಾನ
೨. ಕ್ಷೇತ್ರದ ಶಾಸಕರೂ ಸಹ ಆದ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ರವಿಶಂಕರ್ ಮೇಲೆ ಗೆದ್ದಿದ್ದು ಕೇವಲ ೧೨೦೦ ಮತಗಳ ಅಂತರದಿಂದ. ಮಹೇಶ್ ಗಿನ್ನ ರವಿಶಂಕರ್ ವರ್ಚಸ್ಸು ಕ್ಷೇತ್ರದಲ್ಲಿ ಹೆಚ್ಚಿದೆ ಎಂಬ ವಾದ ಸುಮಾಗೆ ಪ್ಲಸ್ ಪಾಯಿಂಟ್
೩. ಜಾತಿವಾರು ಲೆಕ್ಕಾಚಾರದಲ್ಲಿ ಕ್ಷೇತ್ರದಲ್ಲಿ ಕುರುಬ ಮತ್ತು ಲಿಂಗಾಯಿತ ಸಮುದಾಯದ ಮತಗಳು ಹೆಚ್ಚಾಗಿದ್ದು, ಇವು ಸುಮಲತಾ ಕೈ ಹಿಡಿದಿವೆ ಎಂಬ ಮಾತಿದೆ.
೪. ಈ ಕಾರಣಕ್ಕೆ ಕ್ಷೇತ್ರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನ ನಿಖಿಲ್ ಪರ ಪ್ರಚಾರಕ್ಕೆ ಕರೆಸಲಾಗಿತ್ತು. ಅದು ಯಾವ ಪ್ರಯೋಜನವಾಗಿಲ್ಲ ಎಂಬ ಮಾತು.
೫. ಸಾಲಿಗ್ರಾಮ ಭಾಗದಲ್ಲಿ ಭವಾನಿ ರೇವಣ್ಣ ಹಿಡಿತ ಇರೋದ್ರಿಂದ ಆ ಭಾಗದಲ್ಲಿ ನಿಖಿಲ್ ಸೋಲಿಸಲು ಭವಾನಿ ರೇವಣ್ಣ ಕೈ ಆಡಿಸಿದ್ದಾರೆ ಎಂಬ ವದಂತಿ ಮತ್ತು ಆರೋಪ ಇದೆ. ಇದು ನಿಖಿಲ್ ಗೆ ಹಿನ್ನಡೆಯಾಗಬಹುದು..Body:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.