ETV Bharat / state

ಕಾವೇರಿ ಜಲಾನಯನ ಭಾಗದಲ್ಲಿ ವ್ಯಾಪಕ ಮಳೆ: ತುಂಬುತ್ತಿದೆ ಕೆಆರ್​ಎಸ್

author img

By

Published : Jul 25, 2021, 8:26 PM IST

ಕಾವೇರಿ ಜಲಾನಯನ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಕೆಆರ್‌ಎಸ್‌ ಒಳ ಹರಿವಿನ ಪ್ರಮಾಣ ಹೆಚ್ಚಿದೆ. ಹೀಗಾಗಿ, ಈ ವರ್ಷವೂ ಕುಡಿಯುವ ನೀರು ಹಾಗೂ ಕೃಷಿಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎನ್ನುತ್ತಾರೆ ಹವಾಮಾನ ತಜ್ಞರು.

krs-dam
ಕೆಆರ್​ಎಸ್ ಜಲಾಶಯ

ಮಂಡ್ಯ: ಕಾವೇರಿ ನದಿ ಜಲಾನಯನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಕೃಷ್ಣರಾಜ ಸಾಗರ (ಕೆಆರ್​ಎಸ್)ಜಲಾಶಯದ ನೀರಿನ ಮಟ್ಟ 110.10 ಅಡಿಗೆ ತಲುಪಿದೆ.

ಜಲಾಶಯದ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಪ್ರಮಾಣದ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ.

ಕೃಷ್ಣರಾಜ ಸಾಗರ (ಕೆಆರ್​ಎಸ್)ಜಲಾಶಯದ ನೀರಿನ ಮಟ್ಟ ಏರಿಕೆ

ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳು ಸೇರಿದಂತೆ ಜಲಾನಯನ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ನಿನ್ನೆಯವರೆಗೆ ಕೆಆರ್​ಎಸ್​ ಜಲಾಶಯದಲ್ಲಿ 109.55 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಇಂದು 110.10 ಅಡಿಗೆ ಏರಿಕೆಯಾಗಿದೆ.

ಜಲಾಶಯದ ಒಳ ಹರಿವು 37048 ಸಾವಿರ ಕ್ಯೂಸೆಕ್ಸ್​ಗೂ ಹೆಚ್ಚಿನ‌ ಪ್ರಮಾಣದಲ್ಲಿದೆ. ಜಲಾನಯನ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಒಳ ಹರಿವಿನ ಪ್ರಮಾಣ ಹೆಚ್ಚಿದೆ. ಹೀಗಾಗಿ, ಈ ವರ್ಷವೂ ಕುಡಿಯುವ ನೀರು ಹಾಗೂ ಕೃಷಿಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎನ್ನುತ್ತಾರೆ ಹವಾಮಾನ ತಜ್ಞರು.

ಕೆಆರ್​ಎಸ್​ ಡ್ಯಾಂನ ನೀರಿನ ಮಟ್ಟ..

ಗರಿಷ್ಠ ಮಟ್ಟ 124.80 ಅಡಿ.
ಇಂದಿನ ಮಟ್ಟ 110.10 ಅಡಿ.
ಒಳ ಹರಿವು 37048 ಕ್ಯೂಸೆಕ್.
ಹೊರ ಹರಿವು 9984 ಕ್ಯೂಸೆಕ್
ಪ್ರಸ್ತುತ ನೀರಿನ ಸಂಗ್ರಹ 31.821 ಟಿಎಂಸಿ
ನೀರು ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ

ಇದನ್ನೂ ಓದಿ: ಹೈಕಮಾಂಡ್ ಸಂದೇಶಕ್ಕೆ ಕ್ಷಣಗಣನೆ.. ಸಿಎಂ ನಿವಾಸಕ್ಕೆ ಕುಟುಂಬ ಸದಸ್ಯರ ಆಗಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.