ಮಂಡ್ಯ: ಕುರುಕ್ಷೇತ್ರ ಚಿತ್ರವನ್ನು ದಚ್ಚು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ದರ್ಶನ್ಗೆ ಇದು 50ನೇ ಚಿತ್ರವಾದ್ದರಿಂದ 50 ಜೋಡೆತ್ತುಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಜೊತೆಗೆ 50 ಸಾವಿರ ಲಡ್ಡುಗಳನ್ನು ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಹಂಚಲಾಯಿತು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಿಂದ 50 ಕಲಾ ತಂಡಗಳ ಜೊತೆಗೆ 50 ಆಟೋಗಳು ಹಾಗೂ 50 ಜೋಡೆತ್ತುಗಳ ಮೆರವಣಿಗೆ ಮೂಲಕ ಸಂಜಯ ವೃತ್ತದವರೆಗೂ ಅದ್ಧೂರಿ ಮೆರವಣಿಗೆ ಮಾಡಿ 'ಕುರುಕ್ಷೇತ್ರ'ಕ್ಕೆ ಸ್ವಾಗತ ಕೋರಲಾಯಿತು ಹಾಗೂ ನಗರದ ಮೂರು ಚಿತ್ರ ಮಂದಿರಗಳಲ್ಲಿ 'ಕುರುಕ್ಷೇತ್ರ' ಬಿಡುಗಡೆಯಾಗಿದೆ.
ಅದ್ದೂರಿ ಮೆರವಣಿಗೆಗೆ ಟೀಕೆ:
ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಜನತೆ ಜೀವ ಬಿಡುತ್ತಿದ್ದಾರೆ. ಆದರೆ, ಇಲ್ಲಿ ಅಭಿಮಾನಿಗಳು ದುಂದು ವೆಚ್ಚ ಮಾಡಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಟೀಕಿಸುತ್ತಿದ್ದರು. ಇದೇ ಹಣವನ್ನು ಉತ್ತರದ ಜನತೆಗೆ ಆಹಾರ ಕೊಂಡುಕೊಳ್ಳಲು ನೀಡಬಹುದಿತ್ತು ಎಂಬ ಮಾತುಗಳು ಕೇಳಿ ಬಂದವು. ಬಟ್ಟೆ, ಹೊದಿಕೆಯನ್ನೂ ಸಂಗ್ರಹ ಮಾಡಿ ನೀಡಿದ್ದರೆ ಉತ್ತಮ ಎಂಬುದರ ಜೊತೆಗೆ ಇಲ್ಲಿಗೆ ಖರ್ಚು ಮಾಡುವ ಹಣವನ್ನು ಸಿಎಂ ನಿಧಿಗೆ ನೀಡಬಹುದಿತ್ತು ಎಂಬ ಮಾತುಗಳು ಕೇಳಿ ಬಂದವು.