ETV Bharat / state

ಪಿಎಸ್‌ಐ ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ : ಬರೋಬ್ಬರಿ 30.25 ಲಕ್ಷ ರೂ. ಕಳೆದುಕೊಂಡ ರೈತ - ಪಿಎಸ್​ಐ ಕೆಲಸ ಕೊಡಿಸುವುದಾಗಿ ಮಂಡ್ಯದ ರೈತನನ್ನು ವಂಚಿಸಿದ ವ್ಯಕ್ತಿ

ಪಿಎಸ್​ಐ ಕೆಲಸ ಕೊಡಿಸುವುದಾಗಿ ಹೇಳಿ ವ್ಯಕ್ತಿಯೊಬ್ಬ ರೈತನನ್ನು ವಂಚಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿಂಗರಾಜು ಎಂಬ ರೈತ ಮೋಸ ಹೋಗಿದ್ದು, ಅಕ್ಷಯ್ ಮಂಜುನಾಥ್ ಎಂಬ ವ್ಯಕ್ತಿ ಮೋಸ ಮಾಡಿದ್ದಾನೆ ಎನ್ನಲಾಗ್ತಿದೆ..

ಮಂಡ್ಯ
ಮಂಡ್ಯ
author img

By

Published : Jun 24, 2022, 5:45 PM IST

Updated : Jun 24, 2022, 6:00 PM IST

ಮಂಡ್ಯ : ಮಗನಿಗೆ ಪಿಎಸ್‌ಐ ಕೆಲಸ ಕೊಡಿಸುವ ಆಸೆಯಲ್ಲಿ ರೈತನೋರ್ವ ಬರೋಬ್ಬರಿ 30.25 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದೀಗ ರೈತನ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ನಿಂಗರಾಜು ಎಂಬ ರೈತ ಮೋಸ ಹೋಗಿದ್ದಾರೆ. ಕೋಲಾರ ಮೂಲದ ಮಂಜುನಾಥ್ ಅಲಿಯಾಸ್ ಅಕ್ಷಯ್ ಮಂಜುನಾಥ್ ಎಂಬಾತನ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ.

ಪೊಲೀಸರಿಗೆ ನೀಡಿದ ದೂರಿನ ಪ್ರತಿ
ಪೊಲೀಸರಿಗೆ ನೀಡಿದ ದೂರಿನ ಪ್ರತಿ

ನಿಂಗರಾಜು ಮಗ ಅರುಣ್ ಕುಮಾರ್ PSI ಪರೀಕ್ಷೆ ಬರೆದಿದ್ದರು. ಇದರ ನಡುವೆ ನಿಂಗರಾಜು ಅವರಿಗೆ ಬಿಜೆಪಿ ಮುಖಂಡರೊಬ್ಬರ ಮೂಲಕ ಅಕ್ಷಯ್ ಮಂಜುನಾಥ ಪರಿಚಯವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಬಿ.ವೈ.ವಿಜಯೇಂದ್ರ ಅವರ ಆಪ್ತ ಎಂದು ಮಂಜುನಾಥ ಹೇಳಿಕೊಂಡಿದ್ದಾನೆ. ಅಲ್ಲದೇ 40 ಲಕ್ಷ ರೂಪಾಯಿ ಕೊಟ್ಟರೆ ಕೆಲಸ ಕೊಡಿಸುವುದಾಗಿ ಭರವಸೆ ಸಹ ನೀಡಿದ್ದಾನೆ.

30.25 ಲಕ್ಷ ರೂ. ನೀಡಿದ್ದ ನಿಂಗರಾಜು : ಮಂಜುನಾಥ್ ಹೇಳಿದ ಮಾತನ್ನು ನಂಬಿ 38 ಲಕ್ಷ ಕೊಡುವುದಾಗಿ ಒಪ್ಪಿಸಿ, ಬಳಿಕ 30.25 ಲಕ್ಷ ರೂಪಾಯಿಯನ್ನು ನಿಂಗರಾಜು ನೀಡಿದ್ದಾರೆ. 17 ಲಕ್ಷ ರೂಪಾಯಿಯನ್ನು ಬ್ಯಾಂಕ್ ಮೂಲಕ RTGS ಮಾಡಿದ್ದರು. ಉಳಿದ 13.25 ಲಕ್ಷ ರೂಪಾಯಿಯನ್ನು ನಗದು ರೂಪದಲ್ಲಿ ನೀಡಿದ್ದರು. ಸಾಲ ಮಾಡಿ ಹಾಗೂ ತಮ್ಮ ಒಂದೂವರೆ ಎಕರೆ ಜಮೀನು ಮಾರಿ ನಿಂಗರಾಜು ಹಣ ನೀಡಿದ್ದರು.

ಪೊಲೀಸರಿಗೆ ನೀಡಿದ ದೂರಿನ ಪ್ರತಿ
ಪೊಲೀಸರಿಗೆ ನೀಡಿದ ದೂರಿನ ಪ್ರತಿ

ಕ್ರಮ ತೆಗೆದುಕೊಳ್ಳದ ಪೊಲೀಸರು : ಇದಾದ ಬಳಿಕ PSI ಆಯ್ಕೆ ಪಟ್ಟಿಯಲ್ಲಿ ಮಗನ ಹೆಸರು ಬಾರದಿದ್ದಾಗ ನಿಂಗರಾಜು ಹಣ ವಾಪಸ್ ಕೇಳಿದ್ದಾರೆ. ಆದರೆ, ಹಣ ವಾಪಸ್ ಕೊಡದ ಮಂಜುನಾಥ್ ಸಬೂಬು ಹೇಳಿಕೊಂಡು ಬರುತ್ತಿದ್ದಾನೆ. ಇತ್ತ ಮಗನಿಗೆ ಕೆಲಸವೂ ಸಿಗದೆ, ಅತ್ತ ಹಣವೂ ಇಲ್ಲದೆ ನಿಂಗರಾಜು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಕುಟುಂಬಕ್ಕೆ ಬಂದಿದೆ.

ಇದನ್ನೂ ಓದಿ: ಲಂಚ ಪ್ರಕರಣ: ಬೆಂಗಳೂರು ನಗರ ಡಿಸಿ ಹೇಳಿಕೆ ದಾಖಲಿಸಿಕೊಂಡ ಎಸಿಬಿ

ಈ ಸಂಬಂಧ ದೂರು ನೀಡಿದ್ರೂ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕುಟುಂಬ ಕಣ್ಣೀರಿಡುತ್ತಿದೆ. ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ಹಾಗೂ ಮಂಡ್ಯ ಎಸ್ಪಿಗೆ ನಿಂಗರಾಜು ದೂರು ನೀಡಿದ್ದು, FIR ಸಹ ದಾಖಲಾಗಿದೆ. ಮಂಜುನಾಥ್ ಕರೆಸಿ, ಮಾತನಾಡುವುದಾಗಿ ಪೊಲೀಸರು ಹೇಳುತ್ತಿದ್ದಾರೆ ಹೊರತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿಂಗರಾಜು ಅಳಲು ತೋಡಿಕೊಂಡಿದ್ದಾರೆ.

Last Updated : Jun 24, 2022, 6:00 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.