ETV Bharat / state

ಕೋವಿಡ್ ನಿಯಂತ್ರಣದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲ: ಚಲುವರಾಯಸ್ವಾಮಿ

ಚಾಮರಾಜನಗರ, ಕಲಬುರಗಿ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಹಲವಾರು ಜನರು ಮೃತಪಟ್ಟಿದ್ದಾರೆ. ಆದರೆ, ಈ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಟೀಕಿಸಿದರು.

Mandya
ಮಾಜಿ ಸಚಿವ ಚಲುವರಾಯಸ್ವಾಮಿ
author img

By

Published : May 18, 2021, 9:21 AM IST

ಮಂಡ್ಯ: ಕೋವಿಡ್ ನಿಯಂತ್ರಣದಲ್ಲಿ ನೂರಕ್ಕೆ ನೂರರಷ್ಟು ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಮಾಜಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ, ಕಲಬುರಗಿ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಹಲವಾರು ಜನರು ಮೃತಪಟ್ಟಿದ್ದಾರೆ. ಆದರೆ, ಈ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವ್ಯಾಕ್ಸಿನ್ ವಿದೇಶಗಳಿಗೆ ಕೊಡದೇ, ನಮ್ಮ ದೇಶದ ಜನರಿಗೆ ವಿತರಿಸಿದ್ದರೆ ಸಾವಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಮೋದಿಯವರೇ ಅಮೆರಿಕಾದಲ್ಲಿ ಸೋಂಕು ನಿಯಂತ್ರಿಸಿದ್ದಾರೆ, ನೀವೇನು ಮಾಡಿದ್ದೀರಾ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿರುವ 7 ಕೋಟಿ ಜನರಲ್ಲಿ 17 ಲಕ್ಷ ಜನರಿಗೆ ಮಾತ್ರ ವ್ಯಾಕ್ಸಿನ್ ನೀಡಿದ್ದಾರೆ. ಮುಖ್ಯಮಂತ್ರಿ ಹಾಗು ಸಚಿವರು ನಮಗೆ ನಂಬಿಕೆ ಬರುವ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಸಿಎಂಗೆ ವ್ಯಾಕ್ಸಿನ್​ ಯಾವಾಗ ಬರುತ್ತೆ ಅಂತ ಕೇಳಿದ್ರೆ, ಗೊತ್ತಿಲ್ಲ ಅಂತಾರೆ. ಸರ್ಕಾರ ಇಲ್ಲಸಲ್ಲದ ಕಾರಣ ಕೊಡುತ್ತಿದೆ. ಈಗಾಗಲೇ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಇನ್ನು ಮೂರನೇ ಅಲೆ ಶುರುವಾದರೆ ರಾಜ್ಯದ ಜನರನ್ನು ಉಳಿಸಲು ಸಾಧ್ಯವೇ? ಎಂದರು.

ಇದನ್ನೂ ಓದಿ: ಎಷ್ಟು ಪರದಾಡಿದ್ರೂ ಸಿಗದ ಆಸ್ಪತ್ರೆ ಬೆಡ್‌: ಆ್ಯಂಬುಲೆನ್ಸ್‌ನಲ್ಲೇ ಆಕ್ಸಿಜನ್‌ ನೀಡಿ ಪ್ರಾಣ ಉಳಿಸಿದ ಯುವಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.