ETV Bharat / state

ಕೊರೊನಾ ವಿಚಾರದಲ್ಲಿ ಸರ್ಕಾರ ಎಡವಿದೆ: ಕುಮಾರಸ್ವಾಮಿ - ಮಂಡ್ಯ ಲೇಟೆಸ್ಟ್​ ನ್ಯೂಸ್

ಸಣ್ಣಪುಟ್ಟ ಸ್ಟೀಲ್ ಫ್ಯಾಕ್ಟರಿಗಳು ಮುಚ್ಚಿವೆ. ಅವುಗಳನ್ನು ತೆರೆದು ಆಕ್ಸಿಜನ್ ತಯಾರು ಮಾಡಬಹುದು. ಆದರೆ, ಇವರು ಇನ್ನೂ ಸಹ ಜನರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಈ ಪರಿಸ್ಥಿತಿ ನೋಡಿದ್ರೆ ರಾಜ್‌ಕುಮಾರ್ ಅವರ ಸಂಪತ್ತಿಗೆ ಸವಾಲ್​ ಸಿನಿಮಾದ ನಗುವುದೋ, ಅಳುವುದೋ ನೀವೇ ಹೇಳಿ ಎಂಬ ಹಾಡು ನೆನಪಾಗುತ್ತದೆ ಎಂದು ಹೆಚ್​ಡಿಕೆ ಬೇಸರ ವ್ಯಕ್ತಪಡಿಸಿದರು.

Mandya
ಕೊರೊನಾ ವಿಚಾರದಲ್ಲಿ ಸರ್ಕಾರ ಎಡವಿದೆ: ಹೆಚ್.ಡಿ.ಕುಮಾರಸ್ವಾಮಿ
author img

By

Published : May 5, 2021, 2:36 PM IST

ಮಂಡ್ಯ: ಲಾಕ್​ಡೌನ್ ಮಾಡಲು ಮಾರ್ಚ್ 15ರಲ್ಲೇ ಸರ್ಕಾರಕ್ಕೆ ಹೇಳಿದ್ದೆ. ಆಗ ಸರ್ಕಾರ ಲಾಕ್‌ಡೌನ್ ಮಾಡಲಿಲ್ಲ. ಕೊರೊನಾ ವಿಚಾರದಲ್ಲಿ ಸರ್ಕಾರ ಎಡವಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಕೊರೊನಾ ವಿಚಾರದಲ್ಲಿ ಸರ್ಕಾರ ಎಡವಿದೆ: ಹೆಚ್.ಡಿ.ಕುಮಾರಸ್ವಾಮಿ

ಶ್ರೀರಂಗಪಟ್ಟಣದಲ್ಲಿ 15 ಸಾವಿರ ಬಡ ಕುಟುಂಬಗಳಿಗೆ ದಿನಸಿ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿದ ಅವರು, ಆಕ್ಸಿಜನ್ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಸಾಕಷ್ಟು ಸಲಹೆ ನೀಡಿದ್ದೇನೆ. ಆದ್ರೆ ನಮ್ಮ ಮಾತು ಕೇಳಲಿಲ್ಲ. ಪಾಪ ನಮ್ಮ ಕಾಂಗ್ರೆಸ್ ನಾಯಕರು ನಿನ್ನೆ ಗುಂಪು ಮಾಡಿಕೊಂಡು ವೀರಾವೇಶದಲ್ಲಿ ಚಾಮರಾಜನಗರಕ್ಕೆ ಹೋಗಿದ್ರು. ಅವರೇನು ಹೋಗಿ 34 ಜನರ ಪ್ರಾಣವನ್ನು ಉಳಿಸಿಕೊಂಡು ಬಂದ್ರಾ ಎಂದು ಪ್ರಶ್ನಿಸಿದರು. ಸರ್ಕಾರ ಎಡವಿಯಾಗಿದ್ದು, ಕೆಟ್ಟ ರೀತಿಯಲ್ಲಿ ನಡೆದುಕೊಂಡಿದೆ. ಆದರೆ, ಬೆಂದ ಮನೆಯಲ್ಲಿ ಗಳ ಇರಿಯುವ ಕೆಲಸವನ್ನು ಈಗ ಮಾಡಬಾರದು ಎಂದರು.

ಸಣ್ಣಪುಟ್ಟ ಸ್ಟೀಲ್ ಫ್ಯಾಕ್ಟರಿಗಳು ಮುಚ್ಚಿವೆ. ಅವುಗಳನ್ನು ತೆರೆದು ಆಕ್ಸಿಜನ್ ತಯಾರು ಮಾಡಬಹುದು. ಆದರೆ, ಇವರು ಇನ್ನೂ ಸಹ ಜನರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಈ ಪರಿಸ್ಥಿತಿ ನೋಡಿದ್ರೆ ರಾಜ್‌ಕುಮಾರ್ ಅವರ ಸಂಪತ್ತಿಗೆ ಸವಾಲು ಸಿನಿಮಾದ ನಗುವುದೋ, ಅಳುವುದೋ ನೀವೇ ಹೇಳಿ ಎಂಬ ಹಾಡು ನೆನಪಾಗುತ್ತದೆ. ಆ ಪರಿಸ್ಥಿತಿಗೆ ರಾಜ್ಯವನ್ನು ತಂದಿಟ್ಟಿದ್ದಾರೆ. ಇದು ರಾಜಕೀಯ ಮಾಡುವ ಸಮಯ ಅಲ್ಲ, ಜನರನ್ನು‌ ಉಳಿಸಬೇಕಾದಂತಹ ಸಮಯ. ಆರೋಗ್ಯ ಇಲಾಖೆ, ವೈದ್ಯರನ್ನು ಜನರು ಬೈದರೆ ಉಪಯೋಗವಿಲ್ಲ. ಸರ್ಕಾರ ಸವಲತ್ತುಗಳನ್ನು ಕೊಡದೇ ಇದ್ದರೆ ಅವರು ಹೇಗೆ ಕೆಲಸ ಮಾಡುತ್ತಾರೆ. ಇಲ್ಲಿ ಸರ್ಕಾರದ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇನ್ನು, ಈ ಬಗ್ಗೆ ವಿರೋಧ ಪಕ್ಷದವರು ಸಲಹೆ ಕೊಡಬೇಕು, ಬದಲಾಗಿ ಪ್ರಚಾರಕ್ಕೆ ಹೋಗಬಾರದು. ನರೇಂದ್ರ ಮೋದಿ ಅವರು ಕೊನೆ ಹಂತದಲ್ಲಿ ಲಾಕ್‌ಡೌನ್ ಮಾಡುತ್ತಾರೋ ಏನೋ ಗೊತ್ತಿಲ್ಲ. ಇದರ ಬಗ್ಗೆ ಇಂದು ಸಭೆ ಕರೆದಿದ್ದಾರೆ. ಇಡೀ ದೇಶ ಈಗ ಮುಳುಗಿ ಹೋಗಿದೆ. ರಾಷ್ಟ್ರ ರಾಜಧಾನಿಯ ಆಸ್ಪತ್ರೆಗಳಲ್ಲೇ ಆಕ್ಸಿಜನ್ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಓದಿ: ಜೂನ್ 14ರವರೆಗೆ ರಾಜ್ಯದ ಶಾಲಾ ಮಕ್ಕಳಿಗೆ ಬೇಸಿಗೆ ರಜೆ; ಜೂ.15ರಿಂದ ಹೈಸ್ಕೂಲ್ ಶುರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.