ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಬಂಗಾರದ ಬೆಟ್ಟಕ್ಕೆ ಬೆಂಕಿ ಬಿದ್ದು, ಇತ್ತೀಚೆಗಷ್ಟೇ ಹಾಕಲಾಗಿದ್ದ ಸಸ್ಯಗಳು ಸುಟ್ಟು ಕರಕಲಾಗಿವೆ.
ಮೂರು ದಿನಗಳಿಂದ ಬೆಂಕಿ ಬಿದ್ದಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಬೆಂಕಿ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಅಪರೂಪದ ಸಸ್ಯ ಸಂಕುಲ ಈ ಬೆಟ್ಟದಲ್ಲಿದೆ. ಅಲ್ಲದೆ ವರ್ಷದ ಹಿಂದೆ ಇಲ್ಲಿ ನೆಡು ತೋಪು ಮಾಡಲಾಗಿತ್ತು. ಅಕ್ರಮ ಕಲ್ಲು ಗಣಿ ಮಾಲೀಕರು ಬೆಂಕಿ ಹಚ್ಚಿರುವ ಆರೋಪ ಕೇಳಿ ಬಂದಿದೆ. ಗಿಡವಿಲ್ಲದೇ ಇದ್ದರೆ ಗಣಿಗಾರಿಕೆ ಮಾಡಲು ಅವಕಾಶ ಸಿಗುತ್ತದೆ ಎಂಬ ಕಾರಣಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಅರಣ್ಯ ಸಂರಕ್ಷಣೆಗೆ ಕ್ರಮ ಕೈಗೊಂಡು, ಬೆಂಕಿ ಹಚ್ಚಿದವರನ್ನು ಪತ್ತೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.