ETV Bharat / state

ಸಾಲಬಾಧೆಗೆ ರೈತ ಬಲಿ: ವಿದ್ಯುತ್ ತಂತಿ ಹಿಡಿದು ಸಾವಿಗೆ ಶರಣಾದ ಅನ್ನದಾತ - mandya suicide case

ಸಾಲಬಾಧೆಗೆ ರೈತ ಬಲಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಕಟ್ಟಹಳ್ಳಿ ಗ್ರಾಮದ ರೈತ ಚಿಕ್ಕಲಿಂಗಪ್ಪ (58) ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದು, ಸಾಲಗಾರರ ಕಿರುಕುಳ ತಾಳಲಾರದೆ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

farmer committed suicide at mandya
ಕಟ್ಟಹಳ್ಳಿ ಗ್ರಾಮದ ಚಿಕ್ಕಲಿಂಗಪ್ಪ (58) ಮೃತ ದುರ್ದೈವಿ
author img

By

Published : Jan 16, 2021, 7:01 AM IST

ಮಂಡ್ಯ: ಸಾಲಬಾಧೆ ತಾಳಲಾರದೇ ರೈತನೋರ್ವ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಕಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿವಕುಮಾರ್, ಗ್ರಾಮಸ್ಥ

ಕಟ್ಟಹಳ್ಳಿ ಗ್ರಾಮದ ಚಿಕ್ಕಲಿಂಗಪ್ಪ (58) ಮೃತ ರೈತ. ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದು ಇವರು, ಸಾಲಗಾರರ ಕಿರುಕುಳ ತಾಳಲಾರದೆ ವಿದ್ಯುತ್ ತಂತಿ ಹಿಡಿದು ಸಾವಿಗೆ ಶರಣಾಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: 9 ವರ್ಷಗಳ ಹಿಂದೆ ಮನೆ ಕಳ್ಳತನ : ಆರೋಪಿ ಬಂಧನ

ಸಬ್ ಇನ್ಸ್​​​ಪೆಕ್ಟರ್ ಸುರೇಶ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿಕ್ಕಲಿಂಗಪ್ಪ ಅವರ ಮೃಹದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್. ಪೇಟೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದ್ದು, ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.