ಮಂಡ್ಯ : ಅವನು ಅವತ್ತು ನನ್ನ ಜೊತೆ ಬಂದಿದ್ರೆ ನಿರಂತರವಾಗಿ ಶಾಸಕ ಆಗ್ತಿದ್ದ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಳವಳ್ಳಿ ಜೆಡಿಎಸ್ ಶಾಸಕ ಅನ್ನದಾನಿ ಅವರ ಕಾಲೆಳೆದರು.
ಮಳವಳ್ಳಿಯ ಸಾಹಳ್ಳಿ ಗ್ರಾಮದ ಮಾರಮ್ಮನ ದೇವಾಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2004ರಲ್ಲಿ ಅನ್ನದಾನಿ ಗೆದ್ದಾಗ ನಮ್ಮ ಜೊತೆ ಇದ್ದ ಗಿರಾಕಿ.. ರಾಜಕೀಯ ಕಾರಣಕ್ಕೆ ದೇವೇಗೌಡರ ಜೊತೆ ಉಳಿದುಕೊಂಡೆ ಅಂದಿದ್ದಾನೆ. ಅವನು ಅವತ್ತು ನನ್ನ ಜೊತೆ ಬಂದಿದ್ರೆ, ನಿರಂತರವಾಗಿ ಶಾಸಕ ಆಗ್ತಿದ್ದ ಎಂದರು.
ಓದಿ : ಸಿದ್ದರಾಮಯ್ಯ ಅಭಿಮಾನಿ ಜೆಡಿಎಸ್ ಶಾಸಕ ಅನ್ನದಾನಿ.. ಅದನ್ನ ಅವರೇ ಹೀಗೆ ಹೇಳಿದರು..
ಕಳೆದ ಬಾರಿ ಬಿಟ್ಟರೆ, ಈ ಹಿಂದೆ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದ ಮಳವಳ್ಳಿಯ ಜನತೆಗೆ ಚಿರ ಋಣಿ. ಸುಮಲತಾ ಗೆದ್ದಾಗ ಮಾತ್ರ ಇಲ್ಲಿನ ಜನ ನನ್ನ ಮಾತು ಕೇಳಲಿಲ್ಲ. ಒಮ್ಮೆ ನಾನು ಭಾಷಣ ಮಾಡಲು ದೇವೇಗೌಡರ ಜೊತೆ ಬಂದಾಗ 4 ಜನ ಇರಲಿಲ್ಲ.
ಹೆಲಿಕಾಪ್ಟರ್ ನೋಡಲು ಒಂದಷ್ಟು ಜನ ಬಿಟ್ಟರೆ, ಇನ್ಯಾರೂ ಬರಲಿಲ್ಲ. ಜನ ಸೇರಲಿ ಎಂದು ಮುಖಂಡರೊಬ್ಬರ ಮನೆಯಲ್ಲಿ ಕಾದರೂ ಯಾರೂ ಬಂದಿರಲಿಲ್ಲ. ಜನ ಆಗಲೇ ಸಮಲತಾರನ್ನು ಗೆಲ್ಲಿಸಿ, ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲು ನಿರ್ಧಾರ ಮಾಡಿದ್ದರೇನೋ ಎಂದು ಹೇಳಿದರು.