ಮಂಡ್ಯ: ನಾನು ಪಕ್ಷದ ಅಧ್ಯಕ್ಷ. ಬೇಲ್ಗೆ ಅರ್ಜಿ ಹಾಕಿದೆ, ಆದ್ರೆ ಬೇಲ್ ಸಿಕ್ಕಿಲ್ಲ. ನಾನು ಹೋಗಿ ಮಾನಸಿಕವಾಗಿ ಧೈರ್ಯ ಹೇಳ ಬೇಕಾಗಿರುವುದು ನನ್ನ ಕರ್ತವ್ಯ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಭೇಟಿಗಾಗಿ, ಕೋರ್ಟ್ಗೆ ಅರ್ಜಿ ಹಾಕಿರುವ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಸಮಾಜದಲ್ಲಿ ದೊಡ್ಡ ನಾಯಕರು, ಅವರ ಭೇಟಿಗೆ ಕೋರ್ಟ್ಗೆ ಮನವಿ ಮಾಡಿದ್ದೆ. ಸೂಪರ್ ಡೆಂಟ್ಗೆ ಕರೆ ಮಾಡಿದ್ದೆ. ಕೋರ್ಟ್ನಿಂದ ಅನುಮತಿ ಬೇಕು. ಅದಕ್ಕಾಗಿ ಅರ್ಜಿ ಹಾಕಿದ್ದೇನೆ ಎಂದರು.
ಈ ಸಮಯದಲ್ಲಿ ರಾಜಕಾರಣ ಮಾತನಾಡುವುದು ಬೇಡ, ನಾವು ಕೂಡ ಕಾಂಗ್ರೆಸ್ ವತಿಯಿಂದ ಜನರ ಸೇವೆಗೆ ಸದಾ ಸಿದ್ದರಿದ್ದೇವೆ. ಯಾರಿಗೂ ತೊಂದರೆಯಾಗದಂತೆ ಜನರನ್ನ ಕಾಪಡುತ್ತೇವೆ. ಕೋವಿಡ್ ನಿಯಮ ಅನುಸರಿಸಿ ಪ್ರತಿ ಮನೆ ಬಾಗಿಲಿಗೆ ಖುದ್ದಾಗಿ ಆಹಾರ ಸಾಮಗ್ರಿ ತಲುಪಿಸಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ನಿಂದ ಫುಡ್ ಕಿಟ್ ವಿತರಣೆ: ಇದಕ್ಕೂ ಕೋವಿಡ್ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆರು, ಪೌರಕಾರ್ಮಿಕರಿಗೆ ಹಾಗೂ ಬಡ ಕುಟುಂಬದವರಿಗೆ ಕಾಂಗ್ರೆಸ್ ಸಮಿತಿ ವತಿಯಿಂದ ಫುಡ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಾಲನಂದ ಸ್ವಾಮೀಜಿ ಹಾಜರಿದ್ದರು.