ETV Bharat / state

ಆಹಾರ ಸುರಕ್ಷತಾ ಅಧಿಕಾರಿ ಹೆಸರಲ್ಲಿ ಮಹಿಳೆಯಿಂದ ವಂಚನೆ: ಗ್ರಾಮಸ್ಥರಿಂದ ತರಾಟೆ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ಅಂಗಡಿ ಮಾಲೀಕರಿಗೆ ಲೈಸನ್ಸ್ ತೋರಿಸುವಂತೆ ಹೇಳಿ ಸಾವಿರಾರು ರೂಪಾಯಿ ಹಣ ವಸೂಲಿ ಮಾಡುತ್ತಿದ್ದ ಮಹಿಳೆ ಪೊಲೀಸರ ಅತಿಥಿಯಾಗಿದ್ದಾಳೆ.

author img

By

Published : Sep 12, 2019, 9:15 PM IST

ಆಹಾರ ಸುರಕ್ಷತಾ ಅಧಿಕಾರಿ ಹೆಸರಲ್ಲಿ ಮಹಿಳೆ ವಂಚನೆ

ಮಂಡ್ಯ: ಆಹಾರ ಸುರಕ್ಷತಾ ಅಧಿಕಾರಿ ಹೆಸರಲ್ಲಿ ಅಂಗಡಿ ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದ ಮಹಿಳೆಯನ್ನು ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಬಂಧಿಸಿದ್ದಾರೆ.

ಆಹಾರ ಸುರಕ್ಷತಾ ಅಧಿಕಾರಿ ಹೆಸರಲ್ಲಿ ಮಹಿಳೆಯಿಂದ ವಂಚನೆ

ಕಿಕ್ಕೇರಿ ಗ್ರಾಮದಲ್ಲಿ ಅಂಗಡಿ, ಹೋಟೆಲ್​ಗಳಿಗೆ ಭೇಟಿ ನೀಡಿ ಆಹಾರ ಸುರಕ್ಷತಾ ಅಧಿಕಾರಿ ಎಂದು ಹೇಳಿಕೊಂಡು ಲೈಸನ್ಸ್​ ತೋರಿಸುವಂತೆ ಈ ಮಹಿಳೆ ಕೇಳುತ್ತಿದ್ದಳಂತೆ. ಅನುಮಾನಗೊಂಡ ಸ್ಥಳೀಯರು ಆಕೆಯನ್ನು ವಿಚಾರಿಸಿದಾಗ ಕಕ್ಕಾಬಿಕ್ಕಿಯಾಗಿದ್ದಾಳೆ. ನಾನು ಎನ್​ಜಿಇಯಿಂದ ಬಂದಿದ್ದೇನೆ. ಆಹಾರ ಸುರಕ್ಷತೆ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ ಎಂದು ಸಮಜಾಯಿಸಿ ನೀಡಿದ್ದಾಳೆ.

ಸಾರ್ವಜನಿಕರು ಪೊಲೀಸರಿಗೆ, ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಮಾಹಿತಿ ನೀಡಿ, ಈಕೆಯ ವಂಚನೆಗೆ ತಕ್ಕ ಪಾಠ ಕಲಿಸಿದ್ದಾರೆ. ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕನ್ನಡಪರ ಸಂಘಟನೆಗಳ ಹೆಸರನ್ನೂ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಆಹಾರ ಸುರಕ್ಷತಾ ವಿಭಾಗದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಈಕೆ ನಮ್ಮ ಇಲಾಖೆಯ ನೌಕರಳಲ್ಲ ಎಂದು ಮಾಹಿತಿ ನೀಡಿದ್ದಾರೆ.

Intro:ಮಂಡ್ಯ: ಆಹಾರ ಸುರಕ್ಷತೆ ಅಧಿಕಾರಿ ಹೆಸರಿನಲ್ಲಿ ಅಂಗಡಿ ಮಾಲೀಕರನ್ನು ಬೆದರಿಸಿ ಹಣ ಮಸೂಲಿ ಮಾಡುತ್ತಿದ್ದ ಮಹಿಳೆಯನ್ನು ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಬಂದಿಸಿದ್ದಾರೆ.
ಹೆಸರು ತಿಳಿದು ಬಂದಿಲ್ಲದ ಮಹಿಳೆಯೊಬ್ಬರು ಕಿಕ್ಕೇರಿ ಗ್ರಾಮದಲ್ಲಿ ಅಂಗಡಿಗಳಿಗೆ, ಹೋಟೆಲ್ ಗಳಿಗೆ ಭೇಟಿ ನೀಡಿ ಆಹಾರ ಸುರಕ್ಷತೆ ಅಧಿಕಾರಿ ಎಂದು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಳು ಎಂದು ಹೇಳಲಾಗಿದೆ. ಅನುಮಾನಗೊಂಡ ಸ್ಥಳೀಯರು ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಕನ್ನಡಪರ ಸಂಘಟನೆಯ ಹೆಸರನ್ನೂ ಈಕೆ ದುರುಪಯೋಗ ಪಡಿಸಿಕೊಂಡಿದ್ಧಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದು, ಸದ್ಯ ಮಹಿಳೆ ಕಿಕ್ಕೇರಿ ಪೊಲೀಸರ ವಶದಲ್ಲಿದ್ದಾಳೆ.
ಸ್ಥಳಕ್ಕೆ ಆಹಾರ ಸುರಕ್ಷತಾ ವಿಭಾಗದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಈಕೆ ನಮ್ಮ ಇಲಾಖೆಯ ನೌಕರರಳಲ್ಲ ಎಂದು ಮಾಹಿತಿ ನೀಡಿದ್ಧಾರೆ.
ಬೈಟ್: ಸುಬ್ರಮಣ‍್ಯ, ಆಹಾರ ಸುರಕ್ಷತಾ ಅಧಿಕಾರಿ.
ಬೈಟ್: ಸುಮಾ, ಆಹಾರ ಸುರಕ್ಷತಾ ತಾಲ್ಲೂಕು ಅಧಿಕಾರಿ.
Body:ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.