ETV Bharat / entertainment

'ಕೆಜಿಎಫ್​ 2'ಗೆ ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್​​​ ರಾಷ್ಟ್ರಪ್ರಶಸ್ತಿ ಪ್ರದಾನ

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪೈಕಿ 'ಕೆಜಿಎಫ್ ​2' ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್​​​ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು.

KGF 2 won Best Action Direction National Award
'ಕೆಜಿಎಫ್​ 2'ಗೆ ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್ ಪ್ರಶಸ್ತಿ (Photo: Film poster)
author img

By ETV Bharat Entertainment Team

Published : Oct 8, 2024, 5:04 PM IST

ಕೆಜಿಎಫ್​ ಹಾಗೂ ರಾಕಿಂಗ್​ ಸ್ಟಾರ್​ ಯಶ್​ ಬಗ್ಗೆ ಸಿನಿಮಾಭಿಮಾನಿಗಳಿಗೆ ವಿಶೇಷ ಪರಿಚಯ ಬೇಕೆನಿಸದು. ಏಕೆಂದರೆ, ಕನ್ನಡ ಚಿತ್ರರಂಗದ ಜನಪ್ರಿಯತೆ ಹೆಚ್ಚಿಸಿದ ಸಿನಿಮಾ ಮತ್ತು ನಟ. ತಮ್ಮ ಅಮೋಘ ಅಭಿನಯದಿಂದ ಯಶ್​​ ಚಂದನವನದ ಕೀರ್ತಿಯನ್ನು ಜಗತ್ತಿನೆಲ್ಲೆಡೆ ಹೆಚ್ಚಿಸಿದ್ದಾರೆ. ಈ ಬ್ಲಾಕ್​ಬಸ್ಟರ್ ಚಿತ್ರ ಇದೀಗ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಎಂಬ ಪ್ರತಿಷ್ಠಿತ ಗೌರವಕ್ಕೆ ಪಾತ್ರವಾಗಿದೆ. ಹೌದು, ಕೆಜಿಎಫ್​ 2 ಆ್ಯಕ್ಷನ್​​ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

2022ನೇ ಸಾಲಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಂದು ವಿಜೇತರ ಕೈ ಸೇರಿವೆ. ಕನ್ನಡದ ಕೆಜಿಎಫ್​ 2 ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್​​​ (ಸಾಹಸ ನಿರ್ದೇಶಕರು: ಅಲ್ಬರಿವ್) ರಾಷ್ಟ್ರಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಅಭಿಮಾನಿಗಳು, ಪ್ರೇಕ್ಷಕರು ಚಿತ್ರರಂಗದವರು ಕೆಜಿಎಫ್​​ ತಂಡಕ್ಕೆ ಶುಭ ಹಾರೈಸುತ್ತಿದ್ದಾರೆ.

ಅಲ್ಬರಿವ್(ಆ್ಯಕ್ಷನ್​ ಕೊರಿಯೋಗ್ರಾಫರ್) - ಅನ್ಬುಮಣಿ ಎಂಎಂ ಮತ್ತು ಅರಿವುಮಣಿ. ಈ ಇಬ್ಬರೂ ಇಂದು ಪ್ರಶಸ್ತಿ ಸ್ವೀಕರಿಸಿದ್ದಾರೆ.

2022ರ ಏಪ್ರಿಲ್​​ 14ರಂದು ಕೆಜಿಎಫ್​​​ 2 ತೆರೆಕಂಡು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಯಿತು. ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿರುವ ಈ ಚಿತ್ರ ಬಾಕ್ಸ್​​ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂ. ಕೊಳ್ಳೆ ಹೊಡೆಯಿತು. ಪ್ರಶಾಂತ್​ ನೀಲ್ ಅವರ ಕಥೆ,​​ ನಿರ್ದೇಶನಾ ಶೈಲಿ ವ್ಯಾಪಕ ಪ್ರಸಂಸೆಗೆ ಪಾತ್ರವಾಯಿತು. ಹೊಂಬಾಳೆ ಫಿಲ್ಮ್ಸ್​ನ ವಿಜಯ್​ ಕಿರಗಂದೂರ್​​ ಅವರು ಬರೋಬ್ಬರಿ 100 ಕೋಟಿ ರೂ. ಬಜೆಟ್​ನಲ್ಲಿ ಈ ಚಿತ್ರ ನಿರ್ಮಾಣ ಮಾಡುವ ಮೂಲಕ ಜನಪ್ರಿಯರಾದರು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರೋದು ಕೆಲವೇ ಸಿನಿಮಾಗಳಾದರೂ ಕೂಡಾ ಕೆಜಿಎಫ್​​​, ಕಾಂತಾರ ಸಲುವಾಗಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಕನ್ನಡದ ಈ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆಯಿಂದ ಹಲವು ಸಿನಿಮಾಗಳು ಬರಲು ಸಜ್ಜಾಗುತ್ತಿವೆ. ಕೆಜಿಎಫ್​​​ 2ನಲ್ಲಿ ಬಹುಬೇಡಿಕೆಯ ನಟ ಯಶ್​​ ಜೊತೆ ಚೆಲುವೆ ಶ್ರೀನಿಧಿ ಶೆಟ್ಟಿ, ಬಾಲಿವುಡ್​ ಸೂಪರ್​ ಸ್ಟಾರ್​ಗಳಾದ ರವೀನಾ ಟಂಡನ್​​, ಸಂಜಯ್​​​ ದತ್​​ ಪ್ರಮುಖ ಪಾತ್ರಗಳಲ್ಲಿ ಅಬ್ಬರಿಸಿದ್ದರು.

ಇದನ್ನೂ ಓದಿ: ಚೊಚ್ಚಲ ಚಿತ್ರದಲ್ಲೇ ಅತ್ಯುತ್ತಮ ನಿರ್ದೇಶಕ ರಾಷ್ಟ್ರ ಪ್ರಶಸ್ತಿ ಪಡೆದ 'ಮಧ್ಯಂತರ' ಡೈರೆಕ್ಟರ್​ ದಿನೇಶ್ ಶೆಣೈ

ಪ್ರಶಸ್ತಿ ಘೋಷಣೆಯಾಗಿದ್ದ ಸಂದರ್ಭದಲ್ಲಿ ಮಾತನಾಡಿದ್ದ ನಿರ್ಮಾಪಕ ವಿಜಯ್ ಕಿರಗಂದೂರ್, "ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ನಮ್ಮ ಕೆಜಿಎಫ್ 2 ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಮತ್ತು ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್​​​ ವಿಭಾಗದಲ್ಲಿ ಮನ್ನಣೆ ಗಳಿಸಿದೆ. ಆರ್ಟ್ ಡೈರೆಕ್ಟರ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಯಶ್​​ ಅವರಿಗೂ ಈ ಗೌರವ ಸಲ್ಲಬೇಕು. ಏಕೆಂದರೆ, ಕೆಜಿಎಫ್ ಆ್ಯಕ್ಷನ್ ಸಿಕ್ವೇನ್ಸ್ ಅಷ್ಟು ಚೆನ್ನಾಗಿ ಬರಲು ನಟ ಮತ್ತು ನಿರ್ದೇಶಕರು ಮಾತನಾಡಿಕೊಂಡು ಹಾಕಿರೋ ಪರಿಶ್ರಮವೇ ಕಾರಣ" ಎಂದು ತಿಳಿಸಿದ್ದರು.

ಇದನ್ನೂ ಓದಿ: 'ಮಧ್ಯಂತರ' ಕಿರುಚಿತ್ರಕ್ಕೆ ಅತ್ಯುತ್ತಮ ಸಂಕಲನ ರಾಷ್ಟ್ರ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.