ETV Bharat / business

ಪುಟಿದೆದ್ದ ಷೇರು ಮಾರುಕಟ್ಟೆ: ಸೆನ್ಸೆಕ್ಸ್​ 584 & ನಿಫ್ಟಿ 217 ಅಂಕ ಏರಿಕೆ - STOCK MARKET

ಮಂಗಳವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆ ಏರಿಕೆಯೊಂದಿಗೆ ಕೊನೆಗೊಂಡಿವೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್
ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (IANS)
author img

By PTI

Published : Oct 8, 2024, 4:58 PM IST

ಮುಂಬೈ: ಎಚ್​ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಷೇರುಗಳ ಏರಿಕೆಯ ಕಾರಣದಿಂದ ಆರು ದಿನಗಳ ಕುಸಿತದ ನಂತರ ಈಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ ಉತ್ತಮವಾಗಿ ಚೇತರಿಸಿಕೊಂಡಿವೆ. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 584.81 ಪಾಯಿಂಟ್ಸ್ ಅಥವಾ ಶೇಕಡಾ 0.72 ರಷ್ಟು ಏರಿಕೆಯಾಗಿ 81,634.81 ರಲ್ಲಿ ಕೊನೆಗೊಂಡರೆ, ಎನ್ಎಸ್ಇ ನಿಫ್ಟಿ 217.40 ಪಾಯಿಂಟ್ಸ್ ಅಥವಾ ಶೇಕಡಾ 0.88 ರಷ್ಟು ಏರಿಕೆಯಾಗಿ 25,013.15 ರಲ್ಲಿ ಕೊನೆಗೊಂಡಿದೆ.

ಸೆನ್ಸೆಕ್ಸ್​ನಲ್ಲಿ ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯಗಳು, ಮಹೀಂದ್ರಾ & ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್, ಎಚ್​ಡಿಎಫ್​ಸಿ ಬ್ಯಾಂಕ್, ಲಾರ್ಸನ್ & ಟೂಬ್ರೊ, ಎನ್​ಟಿಪಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಲಾಘ ಗಳಿಸಿದ ಪ್ರಮುಖ ಷೇರುಗಳಾಗಿವೆ. ಟಾಟಾ ಸ್ಟೀಲ್, ಟೈಟಾನ್, ಬಜಾಜ್ ಫಿನ್ ಸರ್ವ್, ಜೆಎಸ್ ಡಬ್ಲ್ಯೂ ಸ್ಟೀಲ್, ಬಜಾಜ್ ಫೈನಾನ್ಸ್, ಹಿಂದೂಸ್ತಾನ್ ಯೂನಿಲಿವರ್, ಐಟಿಸಿ, ಟಾಟಾ ಮೋಟಾರ್ಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನಷ್ಟ ಅನುಭವಿಸಿದವು.

ಯುರೋಪಿಯನ್ ಮಾರುಕಟ್ಟೆಗಳು ಇಳಿಕೆಯೊಂದಿಗೆ ವಹಿವಾಟು ನಡೆಸುತ್ತಿವೆ. ಯುಎಸ್ ಮಾರುಕಟ್ಟೆಗಳು ಸೋಮವಾರ ನಕಾರಾತ್ಮಕ ವಲಯದಲ್ಲಿ ಕೊನೆಗೊಂಡವು. ಏಷ್ಯಾದ ಮಾರುಕಟ್ಟೆಗಳಲ್ಲಿ, ಟೋಕಿಯೊ, ಹಾಂಗ್ ಕಾಂಗ್ ಮತ್ತು ಸಿಯೋಲ್ ಕುಸಿತದೊಂದಿಗೆ ಕೊನೆಯಾದರೆ, ಶಾಂಘೈ ಏರಿಕೆಯೊಂದಿಗೆ ಕೊನೆಗೊಂಡಿತು. ಜಾಗತಿಕ ತೈಲ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 1.84 ರಷ್ಟು ಇಳಿದು ಬ್ಯಾರೆಲ್​ಗೆ 79.44 ಡಾಲರ್​ಗೆ ತಲುಪಿದೆ.

ಸೋಮವಾರ ಬಿಎಸ್ಇ ಸೆನ್ಸೆಕ್ಸ್ 638.45 ಪಾಯಿಂಟ್ಸ್ ಕುಸಿದು 81,050 ರಲ್ಲಿ ಕೊನೆಗೊಂಡಿತ್ತು ಮತ್ತು ಎನ್ಎಸ್ಇ ನಿಫ್ಟಿ 218.85 ಪಾಯಿಂಟ್ಸ್ ಕುಸಿದು 24,795.75 ಕ್ಕೆ ತಲುಪಿತ್ತು.

ಮಂಗಳವಾರದಂದು ಯುಎಸ್ ಡಾಲರ್ ವಿರುದ್ಧ ರೂಪಾಯಿ 4 ಪೈಸೆ ಏರಿಕೆಯಾಗಿ 83.96 ರಲ್ಲಿ (ತಾತ್ಕಾಲಿಕ) ಕೊನೆಗೊಂಡಿತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ ಡಾಲರ್ ವಿರುದ್ಧ 83.97 ರಲ್ಲಿ ಪ್ರಾರಂಭವಾಯಿತು ಮತ್ತು ದಿನದಲ್ಲಿ 83.92-83.97 ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ನಂತರ ರೂಪಾಯಿ ಯುಎಸ್ ಡಾಲರ್ ವಿರುದ್ಧ 83.96 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಸೋಮವಾರ ಮುಕ್ತಾಯದ 84.00 ಕ್ಕಿಂತ 4 ಪೈಸೆ ಹೆಚ್ಚಾಗಿದೆ.

ಇದನ್ನೂ ಓದಿ : 15 ವರ್ಷಕ್ಕೂ ಹಳೆಯ 11 ಲಕ್ಷ ವಾಹನ ಗುಜರಿಯಾದರೆ ವಾಹನೋದ್ಯಮಕ್ಕೆ ಉತ್ತೇಜನ: ಐಸಿಆರ್​ಎ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.