ಮಂಡ್ಯ: ಮೇಲುಕೋಟೆ ಚೆಲುವನಾರಾಯಣನಿಗೆ ಸಲ್ಲಿಸುವ ದೀವಟಿಗೆ ಸಲಾಂ ಆರತಿ ಇದೀಗ ವಿವಾದದ ವಿಚಾರವಾಗಿ ಮಾರ್ಪಟ್ಟಿದೆ. ಹೀಗಾಗಿ, ಈ ಕುರಿತು ದೇವಾಲಯದ ಆಡಳಿತ ಮಂಡಳಿಗೆ ಜಿಲ್ಲಾಡಳಿತ ಸ್ಪಷ್ಟವಾದ ವರದಿಯನ್ನು ನೀಡುವಂತೆ ಕೇಳಿದೆ. ಈ ಬಗ್ಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿಗಳಿಗೆ ಮಂಡ್ಯ ಡಿಸಿ ಅಶ್ವಥಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
![DC issued Notice to administration of melukote temple](https://etvbharatimages.akamaized.net/etvbharat/prod-images/mnd-07-01-melkotedcletter_07042022124736_0704f_1649315856_497.jpg)
ದೇಗುಲದಲ್ಲಿ ದೀವಟಿಗೆ ಸಲಾಂ ಎಂಬ ಹೆಸರಿನಲ್ಲಿ ಆರತಿ ನಡೆಯುತ್ತಿತ್ತು ಎನ್ನಲಾಗಿದ್ದು, ಸಲಾಂ ಎಂಬ ಹೆಸರನ್ನು ಬದಲಾಯಿಸುವಂತೆ ಜಿಲ್ಲಾ ಧಾರ್ಮಿಕ ಪರಿಷತ್ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು. ಆ ಮನವಿಯನ್ನು ಸ್ವೀಕರಿಸಿರುವ ಜಿಲ್ಲಾಡಳಿತ ಸ್ಪಷ್ಟವಾದ ಅಭಿಪ್ರಾಯ ತಿಳಿಸುವಂತೆ ದೇಗುಲದ ಆಡಳಿತ ಮಂಡಳಿಗೆ ಸೂಚನೆ ನೀಡಿದೆ.
ಈ ಸಂಬಂಧ ಸಭೆ ನಡೆಸಿರುವ ದೇಗುಲದ ಸ್ಥಾನಿಕರು ಸಂಜೆ ವೇಳೆ ನಡೆಯುತ್ತಿದ್ದ ದೀವಟಿಗೆ ಸಲಾಂ ಆರತಿ ಕೈ ಬಿಟ್ಟು, ಅದರ ಬದಲಿಗೆ ಸಂಧ್ಯಾರತಿ ಎಂದು ಹೆಸರಿಡಬಹುದು ಎಂದು ಲಿಖಿತ ರೂಪದಲ್ಲಿ ವರದಿ ನೀಡಿದ್ದಾರೆ. ನಮ್ಮ ಅಭಿಪ್ರಾಯವನ್ನು ದೇಗುಲದ ಸರ್ಕಾರ ಪರಿಗಣಿಸುವ ವಿಶ್ವಾಸವಿದೆ ಎಂದು ದೇಗುಲದ ಸ್ಥಾನಿಕ ಶ್ರೀನಿವಾಸನ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೀಸಲಾತಿ: ಸರ್ಕಾರಕ್ಕೆ ಏಪ್ರಿಲ್ 14ರವರೆಗೆ ಗಡುವು- ಬಸವ ಜಯಮೃತ್ಯುಂಜಯ ಶ್ರೀ