ETV Bharat / state

ಫೇಸ್​ಬುಕ್​ ಪ್ರಿಯಕರನೊಂದಿಗೆ ಮಗಳು ಪರಾರಿ: ಮಾನಕ್ಕಂಜಿದ ಅಜ್ಜಿ ಮೊಮ್ಮಗನನ್ನ ಕೆರೆಗೆ ತಳ್ಳಿದ್ಲು! - mandya latest news

ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ಮಾರುತಿ ಕೆರೆಯಲ್ಲಿ ಮಹಿಳೆ ಪ್ರೀತಿಸಿದವನ ಜೊತೆ ಓಡಿ ಹೋಗಿದ್ದಕ್ಕೆ ಭಾರಿ ದುಂರಂತವೇ ನಡೆದಿದೆ. ಮಗಳ ಈ ನಡೆಯಿಂದ ದಿಕ್ಕುತೋಚದಂತಾದ ಅಜ್ಜಿವೋರ್ವಳು ಮೊಮ್ಮಗನನ್ನು ಕೆರೆಗೆ ತಳ್ಳಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಅಜ್ಜಿ ಸಾವಿತ್ರಮ್ಮ ಹಾಗೂ ಮೃತಪಟ್ಟ ಬಾಲಕ ಪ್ರಜ್ವಲ್
author img

By

Published : Sep 24, 2019, 11:11 AM IST

ಮಂಡ್ಯ: ಪ್ರಿಯಕರನೊಂದಿಗೆ ಮಗಳು ಓಡಿ ಹೋದಳು ಎಂದು ಮನನೊಂದ ಅಜ್ಜಿವೋರ್ವಳು ಮೊಮ್ಮಗನನ್ನು ಕೆರೆಗೆ ತಳ್ಳಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೆ.ಆರ್. ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ಮಾರುತಿ ನಗರದಲ್ಲಿ ನಡೆದಿದೆ.

Daughter ran away with lover: Grandmother killed grandson and jumped to lake
ಅಜ್ಜಿ ಸಾವಿತ್ರಮ್ಮ ಹಾಗೂ ಮೃತಪಟ್ಟ ಬಾಲಕ ಪ್ರಜ್ವಲ್

ಸಾವಿತ್ರಮ್ಮ ಎಂಬುವರು ಆತ್ಮಹತ್ಯೆಗೆ ಯತ್ನಿಸಿರುವ ವೃದ್ಧೆ. ಇವರ ಪುತ್ರಿ ಲಕ್ಷ್ಮಿ ಇತ್ತೀಚೆಗೆ ಫೇಸ್ಬುಕ್​ನಲ್ಲಿ ಪರಿಚಯವಾಗಿದ್ದ ಪ್ರಿಯಕರನೊಂದಿಗೆ ಓಡಿಹೋಗಿದ್ದಳು. ಇದರಿಂದ ಮಾನಕ್ಕೆ ಅಂಜಿದ ಸಾವಿತ್ರಮ್ಮ ಮೊಮ್ಮಗನನ್ನು ಸಾಯಿಸಿ ತಾನು ಆತ್ಮಹತ್ಯೆಗೆ ನಿರ್ಧರಿಸಿದ್ದಳು. ಅದರಂತೆ ಶಾಲೆಗೆ ಹೋಗಿದ್ದ ಮೊಮ್ಮಗನನ್ನು ಕರೆತಂದು ದಬ್ಬೆಘಟ್ಟದ ಕೆರೆಗೆ ತಳ್ಳಿ ತಾನೂ ಕೆರೆಗೆ ಹಾರಿದ್ದಳು. ಈ ವೇಳೆ ಸ್ಥಳೀಯರು ಅಜ್ಜಿಯನ್ನು ರಕ್ಷಿಸಿದ್ದು, ಮೊಮ್ಮಗ ಮೃತಪಟ್ಟಿದ್ದಾನೆ.

ಅಜ್ಜಿಯ ದುಡುಕು ನಿರ್ಧಾರದಿಂದ ಬಾಲಕ 11 ವರ್ಷದ ಬಾಲಕ ದಾರುಣವಾಗಿ ಅಂತ್ಯ ಕಂಡಿದ್ದು, ಅಜ್ಜಿ ಸಾವಿತ್ರಮ್ಮ ಪೊಲೀಸ್ ವಶದಲ್ಲಿದ್ದಾಳೆ.

ಮೊಮ್ಮಗನನ್ನು ಕೊಲೆ ಮಾಡಿದ ಆರೋಪದ ಮೇಲೆ ಅಜ್ಜಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೆರೆಯಲ್ಲಿ ಮುಳುಗಿದ ಬಾಲಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮಂಡ್ಯ: ಪ್ರಿಯಕರನೊಂದಿಗೆ ಮಗಳು ಓಡಿ ಹೋದಳು ಎಂದು ನೊಂದು ಅಜ್ಜಿ ಮೊಮ್ಮಗನನ್ನು ಕೆರೆಗೆ ತಳ್ಳಿ ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಮಾರುತಿ ನಗರದಲ್ಲಿ ನಡೆದಿದೆ.
ಕೆರೆಯಲ್ಲಿ ಮುಳುಗಿ ಬಾಲಕ ಸಾವಿಗೀಡಾಗಿದ್ದು, ಅಜ್ಜಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಅಜ್ಜಿಯ ಕೃತ್ಯದಿಂದ ಮೊಮ್ಮಗ ಪ್ರಜ್ವಲ್(11)ನ ಬದುಕು ಧಾರುಣ ಅಂತ್ಯ ಕಂಡಿದ್ದು, ಅಜ್ಜಿ ಸಾವಿತ್ರಮ್ಮ ಪೊಲೀಸ್ ವಶದಲ್ಲಿದ್ದಾಳೆ.
ಸಾವಿತ್ರಮ್ಮ ಪುತ್ರಿ ಲಕ್ಷ್ಮಿ ಇತ್ತೀಚೆಗೆ ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದ ಪ್ರಿಯಕರನೊಂದಿಗೆ ಓಡಿಹೋಗಿದ್ದಳು. ಇದರಿಂದ ಮಾನಕ್ಕೆ ಅಂಜಿ ಮೊಮ್ಮಗನನ್ನು ಸಾಯಿಸಿ ತಾನು ಸಾಯಲು ನಿರ್ಧರಿಸಿ ಶಾಲೆಗೆ ಹೋಗಿದ್ದ ಮೊಮ್ಮಗ ಪ್ರಜ್ವಲ್ ನನ್ನು ಕರೆತಂದು ದಬ್ಬೆಘಟ್ಟದ ಕೆರೆಗೆ ತಳ್ಳಿ ತಾನೂ ಕೆರೆಗೆ ಹಾರಿದ್ದಾಳೆ.
ಮೊಮ್ಮಗನನ್ನು ಕೊಲೆ ಮಾಡಿದ ಆರೋಪದ ಮೇಲೆ ಅಜ್ಜಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೆರೆಯಲ್ಲಿ ಮುಳುಗಿದ ಬಾಲಕನ ಮೃತ ದೇಹಕ್ಕಾಗಿ ಕೆರೆಯಲ್ಲಿ ಶೋಧನೆ ಮಾಡಲಾಗುತ್ತಿದೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Body:ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.