ಮಂಡ್ಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಎರಡನೇ ದಿನದ ಪ್ರಚಾರವನ್ನು ಎತ್ತಿನ ಗಾಡಿ ಏರಿ ಮೆರವಣಿಗೆ ಮಾಡುವ ಮೂಲಕ ಶುರು ಮಾಡಿದರು.
ಶುಗರ್ ಟೌನ್‌ನಲ್ಲಿ ಅಭಿಮಾನಿ ಹೊಡೆದುಕೊಂಡು ಬಂದಿದ್ದ, ಎತ್ತಿನ ಗಾಡಿಯನ್ನು ಏರಿದ್ರು. ಇನ್ನು ದರ್ಶನ್‌ಗೆ ನೆನಪಿರಲಿ ಪ್ರೇಮ್, ಚೇತನ್ ಸಾಥ್ ನೀಡಿದ್ರು. ದರ್ಶನ್ ಬರುತ್ತಿದ್ದಂತೆ ಅಭಿಮಾನಿಗಳು ಹೂವಿನ ಮಳೆಯನ್ನು ಸುರಿಸಿ, ದರ್ಶನ್ ಹಾಗೂ ಪ್ರೇಮ್ಗೆ ಜೈಕಾರ ಹಾಕುವ ಮೂಲಕ ಸ್ವಾಗತ ಕೋರಿದರು.
ಮೆರವಣಿಗೆ ಮಧ್ಯೆ ಅಭಿಮಾನಿಯೊಬ್ಬರು ದರ್ಶನ್‌ಗೆ ಹಸಿರು ಟವಲ್ ಹಾಕಿದ್ರು. ಹೀಗೆ ಟವಲ್ ಕೊಡುತ್ತಿದ್ದಂತೆ ಹೆಗಲಿಗೇರಿಸಿಕೊಂಡ ದರ್ಶನ್, ರೈತ ಪರ ಘೋಷಣೆ ಕೂಗಿದರು. ಪ್ರಚಾರದುದ್ದಕ್ಕೂ ಸುಮಲತಾ ಅಂಬರೀಶ್ ಪರ ಮತಯಾಚನೆ ಮಾಡಿದ ದರ್ಶನ್, ಸುಮಲತಾರ ಕ್ರಮ ಸಂಖ್ಯೆ 20 ಆಗಿದೆ ಮರೆಯಬೇಡಿ ಎಂದು ಮನವಿ ಮಾಡಿದರು. ಇನ್ನು ನೆನಪಿರಲಿ ಪ್ರೇಮ್ ರೆಬಲ್ ಸ್ಟಾರ್ ಅಂಬಿ ಪರ ಘೋಷಣೆ ಕೂಗಿ ಭಾಷಣ ಮಾಡಿ, ಸುಮಲತಾ ಅಂಬರೀಶ್ ಪರ ಮತಯಾಚನೆ ಮಾಡಿದರು.