ETV Bharat / state

ಮಂಡ್ಯದಲ್ಲಿ ಕೊರೊನಾ ಲಸಿಕೆ ಸಂಗ್ರಹಕ್ಕೆ ಸಕಲ ಸಿದ್ಧತೆ...

ಮಂಡ್ಯ ಜಿಲ್ಲೆಯಲ್ಲಿ ಮೊದಲ ಹಂತದ ಲಸಿಕೆಯ ಫಲಾನುಭವಿಗಳ ಪಟ್ಟಿ ಸಿದ್ದತೆ ಮಾಡಿದ್ದು, ಈಗಾಗಲೇ ಸರ್ಕಾರಕ್ಕೆ ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಂಚೇಗೌಡ ತಿಳಿಸಿದರು.

Covid Vaccine storage
ಕೊರೊನಾ ಲಸಿಕೆ ಸಂಗ್ರಹ
author img

By

Published : Dec 23, 2020, 2:07 PM IST

ಮಂಡ್ಯ: ದೇಶದಲ್ಲಿ ಕೊರೊನಾಗೆ ಲಸಿಕೆ ಸಿಗುವ ಹಿನ್ನೆಲೆಯಲ್ಲಿ ಕೊರೊನಾ ಲಸಿಕೆ ಸಂಗ್ರಹಕ್ಕೆ ಮಂಡ್ಯ ಜಿಲ್ಲೆಯಲ್ಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಂಚೇಗೌಡ ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲ ಹಂತದ ಲಸಿಕೆಯ ಫಲಾನುಭವಿಗಳ ಪಟ್ಟಿ ಸಿದ್ಧತೆ ಮಾಡಿಟ್ಟುಕೊಳ್ಳಲಾಗಿದೆ. ಫಲಾನುಭವಿಗಳಲ್ಲಿ ಮುಖ್ಯವಾಗಿ ಹೆಲ್ತ್ ಕೇರ್ ವರ್ಕರ್ಸ್ ಸೇರಿದಂತೆ ಆರೋಗ್ಯ ಇಲಾಖೆಯ ಕೊರೊನಾ ವಾರಿಯರ್ಸ್ ಹಾಗೂ ಅಂಗನವಾಡಿ ಕಾರ್ಯಕರ್ತರು ಸೇರಿ ಸುಮಾರು 13 ಸಾವಿರ ಜನರನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಮಂಚೇಗೌಡ

ಸರ್ಕಾರಕ್ಕೆ ಗುರುತಿಸಿರುವ ಈ ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ. ಲಸಿಕೆ ಸಂಗ್ರಹ ವಿಚಾರದಲ್ಲಿ ನಮ್ಮ ಜಿಲ್ಲಾ ಮಟ್ಟದಲ್ಲಿ 4 ILR, 1ಡೀ ಫ್ರೀಜರ್ ಇದ್ದು, ಇದರಲ್ಲಿ ನಾವು 1.60 ಲಕ್ಷ ಡೋಸ್ ವ್ಯಾಕ್ಸಿನ್ ಸಂಗ್ರಹಿಸಬಹುದು ಎಂದರು.

ನಮ್ಮ‌ ಇಡೀ ಜಿಲ್ಲೆಯಲ್ಲಿ 120 ಕೋಲ್ಡ್ ಚೇನ್ ಸೆಂಟರ್ಸ್ ಜತೆಗೆ 57 ILRನ್ನು ರಾಜ್ಯದಿಂದ ಅನುಮೋದಿಸಿದ್ದಾರೆ ಹಾಗೂ ಇಷ್ಟರಲ್ಲೇ ಅವುಗಳು ಕೂಡ ಬರಲಿವೆ. ಜೊತೆ 1 ಡಿ ಫ್ರೀಜರ್ ಕೊಟ್ಟಿದ್ದಾರೆ. ಹೀಗಾಗಿ ಲಸಿಕೆ ಸಂಗ್ರಹಕ್ಕೆ ಸಂಬಂಧಪಟ್ಟ ಹಾಗೇ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಹೇಳಿದರು.

ಎಷ್ಟೇ ವ್ಯಾಕ್ಸಿನ್ ಬಂದರೂ ಸಂಗ್ರಹಿಸಿ ಇಡಬಹುದಾಗಿದೆ. ಈ ಸಂಗ್ರಹಕ್ಕೆ ಸಂಬಂಧಪಟ್ಟ ಹಾಗೇ ನಾವು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿದ್ದೇವೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಸಿದ್ಧತೆಗಳು ಆಗಿವೆ ಎಂದು ತಿಳಿಸಿದರು.

ಓದಿ...ವಿದ್ಯುತ್​ ಸಂಪರ್ಕ ಕಡಿತಗೊಳಿಸಲು ತೆರಳಿದ್ದ ಸೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.