ಮಂಡ್ಯ: ಜಿಲ್ಲೆಯಲ್ಲಿ ಸೋಮವಾರ 889 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರೆ, 4 ಮಂದಿ ಬಲಿಯಾಗಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿನ ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 56,376ಕ್ಕೆ ಏರಿಕೆಯಾಗಿದೆ. ನಿನ್ನೆ 894 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 50,155 ಮಂದಿ ಚೇತರಿಕೆ ಕಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5,804ಕ್ಕೆ ತಲುಪಿದೆ. ಜಿಲ್ಲೆಯಲ್ಲಿ ನಿನ್ನೆ 4 ಮಂದಿ ಕೋವಿಡ್‌ಗೆ ಬಲಿಯಾಗಿದ್ದು, ಈವರೆಗೆ 415 ಮಂದಿ ಮೃತಪಟ್ಟಿದ್ದಾರೆ.
ತಾಲೂಕುವಾರು ವಿವರ
ಮಂಡ್ಯ 175, ಮದ್ದೂರು 113, ಮಳವಳ್ಳಿ 119, ಪಾಂಡವಪುರ 90, ಶ್ರೀರಂಗಪಟ್ಟಣ 190, ಕೆ.ಆರ್.ಪೇಟೆ 139, ನಾಗಮಂಗಲ 56, ಹೊರ ಜಿಲ್ಲೆಯ 7 ಸೇರಿದಂತೆ ಒಟ್ಟು 889 ಕೊರೊನಾ ಪ್ರಕರಣ ದಾಖಲಾಗಿವೆ.
ಇದನ್ನೂ ಓದಿ: ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ: ಕೆಂಪು ವಲಯದಿಂದ ಕಿತ್ತಲೆಗೆ ತಿರುಗಿದ ತುಮಕೂರು ಜಿಲ್ಲೆ